Paris Olympics 2024 Shooting: ಕಂಚಿನ ಪದಕಕ್ಕಾಗಿ ಮನು ಭಾಕರ್- ಸರಬ್ಜೋತ್ ಹೋರಾಟ; ಸ್ಫರ್ಧೆ ಯಾವಾಗ?
ಜುಲೈ 30 ಮಂಗಳವಾರ, ಪ್ಯಾರಿಸ್ ಒಲಿಂಪಿಕ್ಸ್ 2024ರ ಮೂರನೇ ದಿನದ ಭಾರತೀಯ ಶೂಟರ್‌ಗಳು ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಇಂದು (ಜುಲೈ 30) 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಕಂಚಿನ ಪದಕಕ್ಕಾಗಿ ಭಾರತದ ಸ್ಟಾರ್ ಶೂಟರ್‌ಗಳಾದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅರ್ಹತೆ ಪಡೆದಿದ್ದಾರೆ.
ಕೊರಿಯಾದ ಓಹ್ ಯೆ ಜಿನ್ ಮತ್ತು ಲೀ ವೊನ್ಹೋ ಅವರನ್ನು ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಹಿಂದಿಕ್ಕಿದ್ದರು. 3 ಸರಣಿಯಲ್ಲಿ 580 ಅಂಕಗಳನ್ನು ಗಳಿಸಿ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅರ್ಹತಾ ಸುತ್ತಿನಲ್ಲಿ ಮೂರನೇ ಸ್ಥಾನ ಪಡೆದರು. ಹೀಗಾಗಿ ಓಹ್ ಯೆ ಜಿನ್ ಮತ್ತು ಲೀ ವೊನ್ಹೋ ನಾಲ್ಕನೇ ಸ್ಥಾನ ಪಡೆದರು.

ಕಂಚಿನ ಪದಕಕ್ಕಾಗಿ ಹೋರಾಟ
ಭಾರತದ ಶೂಟರ್‌ಗಳು ಕಂಚಿನ ಪದಕಕ್ಕಾಗಿ ಕೊರಿಯಾದ ಓಹ್ ಯೆ ಜಿನ್ ಮತ್ತು ಲೀ ವೊನ್ಹೋ ವಿರುದ್ಧ ಪೈಪೋಟಿ ನಡೆಸಲಿದ್ದಾರೆ. ಭಾರತೀಯ ಕಾಲಮಾನ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಕಂಚಿನ ಪದಕದ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.
ಭಾನುವಾರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕವನ್ನು ನೀಡಿದ ಮನು ಭಾಕರ್ ಈ ಪಂದ್ಯದಲ್ಲಿ ಎರಡನೇ ಕಂಚಿನ ಪದಕಕ್ಕೆ ಮುತ್ತಿಕ್ಕುವ ಸಾಧ್ಯತೆ ಇದೆ.
ಟರ್ಕಿ ಮತ್ತು ಸೆರ್ಬಿಯಾ ನಡುವೆ ಚಿನ್ನಕ್ಕೆ ಸ್ಪರ್ಧೆ
ಟರ್ಕಿಯ ಸೆವೆಲ್ ಎಲೈಡಾ ತರ್ಹಾನ್ ಮತ್ತು ಯೂಸುಫ್ ಡಿಕೆಕ್ ಅವರು ಟೋಕಿಯೊ 2020ನಲ್ಲಿ ಭಾರತ ಸ್ಥಾಪಿಸಿದ 582 ಅಂಕಗಳ ಒಲಿಂಪಿಕ್ ಅರ್ಹತಾ ದಾಖಲೆಯನ್ನು ಸರಿಗಟ್ಟಿದ್ದಾರೆ. ಟರ್ಕಿ ತಂಡ ಚಿನ್ನದ ಪದಕಕ್ಕಾಗಿ ಸೆರ್ಬಿಯಾದ ಜೋಡಿ ಜೊರಾನಾ ಅರುನೋವಿಕ್ ಮತ್ತು ದಮಿರ್ ಮೈಕೆಕ್ ಅವರನ್ನು ಎದುರಿಸಲಿದೆ. ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಎರಡೂ ಜೋಡಿಗಳು ತಮ್ಮ ಪದಕವನ್ನು ಖಚಿತಪಡಿಸಿದ್ದಾರೆ.
10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ ಕಂಚಿನ ಪದಕ ಪಂದ್ಯ (ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್) - ಮಧ್ಯಾಹ್ನ 1
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications