For Quick Alerts
ALLOW NOTIFICATIONS  
For Daily Alerts

Paris Olympics 2024 Shooting: ಒಲಿಂಪಿಕ್ಸ್‌ನಲ್ಲಿ ವಿಶೇಷ ದಾಖಲೆ ಬರೆದ ಮೊದಲ ಭಾರತೀಯ ಮನು ಭಾಕರ್‌!

ಜುಲೈ 30 ಮಂಗಳವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎರಡನೇ ಪದಕ ಸಿಕ್ಕಿದೆ. ಭಾರತದ ಸ್ಟಾರ್ ಶೂಟರ್‌ಗಳಾದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಮಂಗಳವಾರ ಚಟೌರೊಕ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ರಿಪಬ್ಲಿಕ್ ಆಫ್ ಕೊರಿಯಾದ ಲೀ ವೊನ್ಹೋ ಮತ್ತು ಓಹ್ ಯೆ ಜಿನ್ ತಂಡದ ವಿರುದ್ಧ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಿದ್ದರು. ಮೊದಲ ಸರಣಿಯಲ್ಲಿ ಲೀ ವೊನ್ಹೋ ಮತ್ತು ಓಹ್ ಯೆ ಜಿನ್ ಅವರು ಗೆಲುವಿನೊಂದಿಗೆ ಪ್ರಾರಂಭಿಸಿದರು.

Manu Bhakar wrote record in Paris Olympics 2024

ಆದಾಗ್ಯೂ, ಭಾರತದ ಜೋಡಿಯು ಪ್ರಬಲವಾದ ಪುನರಾಗಮನವನ್ನು ಮಾಡಿ 8-2 ರಿಂದ ಮುನ್ನಡೆ ಸಾಧಿಸಿತು. ಇದಾದ ಬಳಿಕ ಭಾರತ ಸತತವಾಗಿ ಮುನ್ನಡೆ ಸಾಧಿಸಿತು. ಅಂತಿಮವಾಗಿ ಕೊರಿಯಾ ಜೋಡಿ ವಿರುದ್ಧ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅವರು 16-10 ಅಂಕಗಳಿಂದ ಗೆದ್ದರು.

ಭಾಕರ್ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. 13 ಹೊಡೆತಗಳಲ್ಲಿ 10 ರಲ್ಲಿ 10.0 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದರು.

ಇತಿಹಾಸ ಸೃಷ್ಟಿಸಿದ ಮನು ಭಾಕರ್‌

ಈ ಗೆಲುವಿನೊಂದಿಗೆ 22 ವರ್ಷದ ಮನು ಭಾಕರ್ ಇತಿಹಾಸ ಸೃಷ್ಟಿಸಿದ್ದಾರೆ. ಒಲಿಂಪಿಕ್ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ ಭಾರತದ ಪರ ಒಲಿಂಪಿಕ್ಸ್‌ನಲ್ಲಿ ಕೆಡಿ ಜಾಧವ್‌, ಮೇಜರ್‌ ಧ್ಯಾನ್‌ ಚಾಂದ್‌ಮ ಕರ್ಣಮದದ ಮಲ್ಲೇಶ್ವರಿ, ಅಭಿನವ್‌ ಬಿಂದ್ರಾ ಅವರು ವೈಯಕ್ತಿಕವಾಗಿ ಚಿನ್ನದ ಪದಕ ಗೆದ್ದು ದಾಖಲೆ ನಿರ್ಮಿಸಿದ್ದರು. ಇನ್ನೊಂದೆಡೆ ಸೈನಾ ನೆಹ್ವಾಲ್‌, ಪಿವಿ ಸಿಂಧು, ಸುಶೀಲ್‌ ಕುಮಾರ್‌, ನೀರಜ್‌ ಚೋಪ್ರಾ ಹಾಗು ಹಲವು ಕ್ರೀಡಾಪಟುಗಳು ಕೂಡ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕಗಳ ಸಾಧನೆ ಮಾಡಿದ್ದರು.

ಆದರೆ, ಭಾರತದ ಕ್ರೀಡಾಪಟುಗಳು ಇಲ್ಲಿಯವರೆಗೂ ಏಕೈಕ ಆವೃತ್ತಿಯಲ್ಲಿ ಎರಡು ವೈಯಕ್ತಿಕ ಪದಕಗಳನ್ನು ಗೆದಿಲ್ಲ. ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನ ಎರಡು ಸ್ಪರ್ಧೆಯಲ್ಲಿ ಭಾಗವಹಿಸಿದ ಏಕೈಕಾ ಕ್ರೀಡಾಪಟು ಮನು ಭಾಕರ್‌. ಇದೀಗ ಮನು ಭಾಕರ್‌ ಭಾಗವಹಿಸಿದ ಎರಡು ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ.

ಭಾನುವಾರದಂದು ಮನು ಭಾಕರ್ ಅವರು 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ಸಿಂಗಲ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಪ್ಯಾರಿಸ್ ಒಲಿಂಪಿಕ್ಸ್‌ನ ಮೊದಲ ಪದಕವನ್ನು ನೀಡಿದ್ದರು. ಇದೇ ವೇಳೆ ಸರಬ್ಜೋತ್ ಸಿಂಗ್ ಈಗ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಗೆದ್ದ 6ನೇ ಭಾರತೀಯ ಶೂಟರ್ ಆಗಿದ್ದಾರೆ.

Story first published: Tuesday, July 30, 2024, 14:41 [IST]
Other articles published on Jul 30, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+