For Quick Alerts
ALLOW NOTIFICATIONS  
For Daily Alerts

Dhyan Chand Khel Ratna: ಮನು ಭಾಕರ್, ಡಿ ಗುಕೇಶ್‌ ಸೇರಿದಂತೆ ನಾಲ್ವರಿಗೆ ಖೇಲ್ ರತ್ನ ಪ್ರಶಸ್ತಿ

ಪ್ರತಿ ವರ್ಷ ಕ್ರೀಡಾ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ ಕ್ರೀಡಾ ಪಟುಗಳಿಗೆ ಧ್ಯಾನ್ ಚಂದ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿ ಪಡೆಯಲು ವಿವಿಧ ಕ್ರೀಡಾ ಕ್ಷೇತ್ರಗಳ ಅಥ್ಲೀಟ್‌ಗಳು ಹಗಲಿರುಳು ಶ್ರಮಿಸುತ್ತಾರೆ. ಈ ಬಾರಿ ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಮಹೋನ್ನತ ಸಾಧನೆ ಮಾಡಿರುವ ನಾಲ್ವರು ಆಟಗಾರರಿಗ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರಿವಿಸಲಾಗಿದೆ. ಈ ಪಟ್ಟಿಯಲ್ಲಿ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಪದಕ ಬಾಚಿಕೊಂಡ ಸಾಧಕರು ಸೇರಿದ್ದಾರೆ.

ಕ್ರೀಡಾ ಸಚಿವಾಲಯವು 2024 ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಭಾರತ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್, ವಿಶ್ವ ಚಾಂಪಿಯನ್ ಗ್ರ್ಯಾಂಡ್ ಮಾಸ್ಟರ್ ಡಿ ಗುಕೇಶ್, ಪ್ಯಾರಾ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಪ್ರವೀಣ್ ಕುಮಾರ್ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಎರಡು ಪದಕ ಗೆದ್ದ ಮನು ಭಾಕರ್ ಈ ಬಾರಿ ಖೇಲ್ ರತ್ನ ಪಡೆದಿದ್ದಾರೆ.

Manu Bhaker D Gukesh Among Athletes Finalised for Dhyan Chand Khel Ratna Award

ಮನುಗೆ ಗೌರವ

ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಸಾಧನೆ ಮಾಡಿರುವ ಮನು ಭಾಕರ್‌ ಅವರಿಗೆ ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿ ಸಿಗುತ್ತದೋ ಇಲ್ಲವೋ ಎಂಬ ಬಗ್ಗೆ ಅನುಮಾನಗಳು ಇದ್ದವು. ಏಕೆಂದರೆ ಮನು ಪ್ರತಿಷ್ಠಿತೆಗೆ ಅರ್ಜಿಯನ್ನು ಹಾಕಿರಲಿಲ್ಲ. ಆದರೆ ಕೊನೆಯ ಕ್ಷಣದಲ್ಲಿ ಕ್ರೀಡಾ ಸಚಿವಾಲಯ, ಪಟ್ಟಿಯಲ್ಲಿ ಇವರ ಹೆಸರನ್ನು ಸೇರಿಸಿತು. ಪರಿಣಾಮ ಪ್ಯಾರೀಸ್‌ನಲ್ಲಿ ಭಾರತದ ಕ್ರೀಡಾಭಿಮಾನಿಗಳಿಗೆ ಡಬಲ್‌ ಖುಷಿ ನೀಡಿದ ಮನು ಕೊರಳಿಗೆ ಖೇಲ್‌ ರತ್ನ ಗೌರವ ಸಂದಿದೆ. ಇವರು ಪ್ಯಾರಿಸ್‌ ಒಲಿಂಪಿಕ್ಸ್‌ನ ಮಹಿಳೆಯರ 10 ಮೀಟರ್‌ ಏರ್ ರೈಫಲ್‌ ಹಾಗೂ ಮಿಶ್ರ ತಂಡ ವಿಭಾಗದಲ್ಲೂ ಕಂಚಿನ ಸಾಧನೆ ಮಾಡಿದ್ದರು.

ಹರ್ಮನ್‌ಗೆ ಗರಿ

ಟೀಮ್ ಇಂಡಿಯಾ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಅವರ ಅಮೋಘ ಕ್ರೀಡಾ ಜೀವನಕ್ಕಾಗಿ ಇವರಿಗೆ ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿ ಸಂದಿದೆ. ಇವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿತ್ತು. ಅಲ್ಲದೆ ಸತತ ಎರಡನೇ ಬಾರಿಗೆ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿತ್ತು. ಇವರ ಈ ಸಾಧನೆಗೆ ಕೇಂದ್ರ ಸರ್ಕಾರ ಗೌರವ ನೀಡಿದೆ.

ಡಿ ಗುಕೇಶ್‌

ಇತ್ತೀಚಿಗೆ ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಡಿ ಗುಕೇಶ್‌ ಅವರ ಮುಡಿಗೂ, ಖೇಲ್‌ ರತ್ನ ಪ್ರಶಸ್ತಿ ಸಂದಿದೆ. ಇವರು ಚೆಸ್‌ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ ಭಾರತದ ಎರಡನೇ ಚೆಸ್ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಇವರಿಗೂ ಮೊದಲು ವಿಶ್ವನಾಥನ್‌ ಆನಂದ್‌ ಈ ಸಾಧನೆ ಮಾಡಿದ್ದರು.

ಪ್ರವೀಣ್‌ ಸಾಧನೆ

ಪ್ಯಾರಿಸ್‌ನಲ್ಲಿ ನಡೆದಿದ್ದ ಪ್ಯಾರಾಲಿಂಪಿಕ್ಸ್‌ ಕ್ರೀಡಾ ಕೂಟದಲ್ಲಿ ಸ್ಥಿರ ಪ್ರದರ್ಶ ನೀಡಿ ದೇಶಕ್ಕಿ ಕೀರ್ತಿ ತಂದ ಅಥ್ಲಿಟ್‌ಹಳ ಸಾಲಿನ ಕಾಣಿಸಕೊಳ್ಳುವ ಇನ್ನೊಂದು ಹೆಸರು ಪ್ರವೋಣ್ ಕುಮಾರ್. ಇವರು ಹೈಜಂಪ್‌ನ ಟಿ64 ನಲ್ಲಿ ಬಂಗಾರ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಇವರಿಗೂ ಖೇಲ್ ರತ್ನ ಪ್ರಶಸ್ತಿ ಸಂದಿದೆ.

Story first published: Thursday, January 2, 2025, 15:03 [IST]
Other articles published on Jan 2, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+