ಟೋಕಿಯೋ ಒಲಿಂಪಿಕ್ಸ್: 10 ಮೀ ಏರ್ ಪಿಸ್ತೂಲ್‌ನಲ್ಲಿ ಭಾರತೀಯರ ಶುಭಾರಂಭ

ಟೋಕಿಯೋ ಒಲಿಂಪಿಕ್ಸ್‌ನ ನಾಲ್ಕನೇ ದಿನದಂದು ಮೊದಲ ಪಂದ್ಯದಲ್ಲಿಯೇ ಭಾರತೀಯ ಕ್ರೀಡಾಪಟುಗಳು ಶುಭಾರಂಭ ಮಾಡಿದ್ದಾರೆ. 10 ಮೀ. ಏರ್ ಪಿಸ್ತೂಲ್ ಮಿಶ್ರಿತ ಗುಂಪು ಹಂತದ ಮೊದಲನೇ ಸುತ್ತಿನಲ್ಲಿ ಭಾರತದ ನಾಲ್ವರು ಕ್ರೀಡಾಪಟುಗಳು ಭಾಗವಹಿಸಿದ್ದರು. ಜೋಡಿಗಳಾದ ಮನು ಭಾಕೆರ್ ಮತ್ತು ಸೌರಭ್ ಚೌಧರಿ ಹಾಗೂ ಅಭಿಷೇಕ್ ವರ್ಮಾ ಹಾಗೂ ಯಶಸ್ವಿನಿ ದೆಸ್ವಾಲ್ ಮೊದಲನೇ ಸುತ್ತಿನಲ್ಲಿ ಪಾಲ್ಗೊಂಡರು.
ಈ 2ಜೋಡಿಗಳ ಪೈಕಿ ಮನು ಭಾಕೆರ್ ಮತ್ತು ಸೌರಭ್ ಚೌಧರಿ ಜೋಡಿ 10 ಮೀ. ಏರ್ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ ಟಾಪ್ 1ನೇ ಸ್ಥಾನವನ್ನು ಪಡೆದುಕೊಂಡಿದೆ. 582 ಅಂಕಗಳನ್ನು ಗಳಿಸಿದ ಮನು ಭಾಕೆರ್ ಮತ್ತು ಸೌರಭ್ ಚೌಧರಿ ಜೋಡಿ ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದೆ.
ಅತ್ತ ಮತ್ತೊಂದು ಜೋಡಿಯಾದ ಅಭಿಷೇಕ್ ವರ್ಮಾ ಮತ್ತು ಯಶಸ್ವಿನಿ ದೆಸ್ವಾಲ್ 564 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ 17ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಅರ್ಹತಾ ಸುತ್ತಿನಲ್ಲಿ ಟಾಪ್ 8 ಸ್ಥಾನಗಳನ್ನು ಪಡೆದ ಜೋಡಿಗಳಿಗೆ ಮಾತ್ರ ಎರಡನೇ ಸುತ್ತಿಗೆ ಪ್ರವೇಶ ಪಡೆಯುವ ಅವಕಾಶ ಸಿಗುತ್ತದೆ. ಹೀಗಾಗಿ ಅಭಿಷೇಕ್ ವರ್ಮಾ ಮತ್ತು ಯಶಸ್ವಿನಿ ದೆಸ್ವಾಲ್ ಜೋಡಿ ಸ್ಪರ್ಧೆಯಿಂದ ಹೊರಬಿದ್ದಿದೆ. ಇನ್ನು ಎರಡನೇ ಸುತ್ತಿಗೆ ಲಗ್ಗೆ ಇಟ್ಟಿರುವ ಮನು ಭಾಕೆರ್ ಮತ್ತು ಸೌರಭ್ ಚೌಧರಿ ಯಾವ ಮಟ್ಟಿಗೆ ಪ್ರದರ್ಶನ ನೀಡಲಿದೆ ಕಾದು ನೋಡಬೇಕು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications