ಮನು ಭಾಕರ್ ಎಂಬ ಹೆಸರು ಕೇಳಿದರೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅವರು ಪಡೆದ ಎರಡು ಕಂಚಿನ ಪದಕಗಳು ಕಣ್ಣು ಮುಂದೆ ಬರುತ್ತವೆ. ಈ ದೊಡ್ಡ ಸಾಧನೆ ಮಾಡಿ, ದೇಶದಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿರುವ ಮನು ಅವರ ಪದಕವನ್ನು ನೋಡುವ ಬಯಕೆ ಅದೆಷ್ಟೋ ಅಭಿಮಾನಿಗಳಲ್ಲಿ ಇರುತ್ತದೆ. ಆದರೆ ಮನು ಭಾಕರ್ ಅವರು ತಮ್ಮ ಪದಕವನ್ನು ಬದಲಿಸುತ್ತಿದ್ದಾರೆ. ಹೌದು ನೀವು ಓದುತ್ತಿರುವುದು ನಿಜ. ಮನು ತಾನು ಗೆದ್ದ ಪದಕಗಳನ್ನು ಬದಲಿಸಲು ಮುಂದಾಗಿದ್ದಾರೆ.
ಸ್ವಾತಂತ್ರ್ಯ ಭಾರತದಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಒಲಿಂಪಿಕ್ಸ್ ಕ್ರೀಡಾ ಪಟು ಎಂಬ ಹೆಗ್ಗಳಿಕೆ ಮನು ಅವರದ್ದಾಗಿದೆ. ಇವರು ಪ್ಯಾರಿಸ್‌ನಲ್ಲಿ ನಡೆದ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚು ಹಾಗೂ ಮಿಶ್ರ ತಂಡ ವಿಭಾಗದಲ್ಲಿ ಕಂಚು ಪಡೆದು ಸಾಧನೆ ಮಾಡಿದ್ದಾರೆ. ಈ ಮೂಲಕ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಈಗ ಇವರ ಈ ಪದಕಗಳನ್ನು ಬದಲಿಸಲು ಮುಂದಾಗಿದ್ದಾರೆ.

ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಪಡೆದ ಪದಕಗಳನ್ನು ಬದಲಿಸಲಿದ್ದರೆ. ಇದಕ್ಕೆ ಕಾರಣ ಅವರು ಪಡೆದ ಪದಕಗಳು ಹಾಳಾಗುತ್ತಿವೆ. ಇವರು ಈ ಪದಕಗಳ ಬದಲಿಗೆ ಎರಡು ಹೊಸ ಪದಕಗಳನ್ನು ಪಡೆಯುವ ಸಾಧ್ಯತೆ ಇದೆ. ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ ಕ್ರೀಡಾ ಪಟುಗಳು ತಮ್ಮ ಪದಕಗಳ ಬಣ್ಣ ಬದಲಾಗುತ್ತಿದೆ ಎಂದು ಈ ಮೊದಲೇ ದೂರು ನೀಡಿದ್ದರು. ಈಗ ಈ ಸಾಲಿಗೆ ಮನು ಭಾಕರ ಸೇರಿಕೊಂಡಿದ್ದಾರೆ. ಹಲವು ಪ್ಯಾರೀಸ್ ಪದಕ ವಿಜೇತರ ಪದಕಗಳು ಸವೇಯುತ್ತಿರುವುದಿಂದ ಪದಕ ಬದಲಿಸುವಂತೆ ಕೇಳಿಕೊಂಡಿದ್ದರು.
ಪ್ರತಿ ಒಲಿಂಪಿಕ್ ಪದಕದ ಮಧ್ಯಭಾಗದಲ್ಲಿರುವ ಕಬ್ಬಿಣದ ತುಂಡುಗಳು 18 ಗ್ರಾಂ ತೂಗುತ್ತವೆ. 'ಮೊನೈ ಡಿ ಪ್ಯಾರಿಸ್' ಫ್ರಾನ್ಸ್‌ಗಾಗಿ ನಾಣ್ಯಗಳು ಮತ್ತು ಇತರ ಕರೆನ್ಸಿಗಳನ್ನು ಉತ್ಪಾದಿಸುತ್ತದೆ. ಪ್ಯಾರಿಸ್ ಒಲಿಂಪಿಕ್ಸ್ ಸಂಘಟನಾ ಸಮಿತಿಯು ಮೊನೈ ಡಿ ಪ್ಯಾರಿಸ್ ಜೊತೆಗೂಡಿ ಹಾನಿಗೊಳಗಾದ ಎಲ್ಲಾ ಪದಕಗಳನ್ನು ಬದಲಿಸುವ ಕಾರ್ಯವನ್ನು ಮಾಡಲಿದೆ.
ಪ್ಯಾರಿಸ್ ಒಲಿಂಪಿಕ್ ಸಂಘಟನಾ ಸಮಿತಿ ಮತ್ತು "ಮೊನೈ ಡಿ ಪ್ಯಾರಿಸ್" ಪದಕಗಳ ಗುಣಮಟ್ಟವನ್ನು ಪರಿಶೀಲಿಸಿ, ದೋಷಯುಕ್ತ ಪದಕಗಳ ಬಗ್ಗೆ ದೂರು ಬಂದಲ್ಲಿ ಪರಿಹಾರಿಸುತ್ತೇವೆ ಎಂದು ಐಓಸಿ ತಿಳಿಸಿತ್ತು. ಈ ಪದಕಗಳ ಅಕ್ರಮದ ಬಗ್ಗೆ ಒಲಿಂಪಿಕ್ಸ್ ಆಯೋಜನಾ ಸಮಿತಿ ಅನಿಖೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಹಾನಿಗೊಳಗಾದ ಪದಕಗಳನ್ನು ಬದಲಾಯಿಸಿ ಮರು ವಿನ್ಯಾಸದ ಪದಕಗಳನ್ನು ವಿಜೇತರ ನೀಡಲಾಗುವುದು ಎಂದು ಆಯೋಜನಾ ಸಮಿತಿ ತಿಳಿಸಿದೆ.

ಫ್ರೆಂಚ್ ಮಾಧ್ಯಮ ವರದಿಗಳ ಪ್ರಕಾರ, ಪದಕಕ್ಕೆ ಹೊಸ ಹೊಳಪು ನೀಡುವ ಪ್ರಕ್ರಿಯೆಯಿಂದ ಈ ಸಮಸ್ಯೆ ಉಂಟಾಗಿದೆ. ಹಿಂದೆ ಬಳಸಲಾಗಿದ್ದ ವಾರ್ನಿಷ್‌ನ ಒಂದು ಅಂಶವನ್ನು ಹೊಸ ನಿಯಮಗಳ ಅಡಿಯಲ್ಲಿ ನಿಷೇಧಿಸಲಾಗಿದ್ದರಿಂದ ಈ ಸಮಸ್ಯೆ ಕಾಣಿಸಿಕೊಂಡಿರುವುದಾಗಿ ತಿಳಿದು ಬಂದಿದೆ.