Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಒಲಿಂಪಿಕ್ಸ್‌ ಡಬಲ್‌ ಪದಕ ಸಾಧಕಿ ಮನು ಭಾಕರ್‌ ರ‍್ಯಾಂಪ್ ವಾಕ್ ಸಖತ್ ವೈರಲ್: ಇಲ್ಲಿದೆ ವಿಡಿಯೋ

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಇತಿಹಾಸದ ಪುಟ ಸೇರಿದ ಅಥ್ಲೀಟ್‌ ಮನು ಭಾಕರ್. ಒಂದೇ ಒಲಿಂಪಿಕ್ಸ್‌ನಲ್ಲಿ ಡಬಲ್‌ ಪದಕ ಸಾಧನೆ ಮಾಡಿರುವ ಕ್ರೀಡಾ ಪಟು. ಈಗ ಇವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇದೀಗ ಲ್ಯಾಕ್ಮೆ ಫ್ಯಾಷನ್ ವೀಕ್ ನಲ್ಲಿ ರ‍್ಯಾಂಪ್ ವಾಕ್ ಮಾಡುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.

ಇದೇ ಮೊದಲ ಬಾರಿಗೆ ಮನು ಭಾಕರ್ ಅವರು ರ‍್ಯಾಂಪ್‌ ವಾಕ್‌ ನಡೆಸಿದರು. ಈ ವೇಳೆ ಆಧುನಿಕ ಉಡುಗೆಯೊಂದಿಗೆ ಕಂಗೊಳಿಸಿದರು. ಮನು ಭಾಕರ್ ಅವರು ತೊಟ್ಟ ಬಟ್ಟೆಗಳನ್ನು ವಿಶೇಷವಾಗಿ ಇದೇ ಕಾರ್ಯಕ್ರಮಕ್ಕೆ ವಿನ್ಯಾಸ ಮಾಡಲಾಗಿತ್ತು. ರ‍್ಯಾಂಪ್‌ ಮೇಲೆ ಮನು ಭಾಕರ್ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದರೆ, ನೆರೆದ ಸಭೀಕರು ಇವರನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿಯಲು ತಯಾರಾದ್ರು.

Manu Bhaker Walks the Ramp at Lakme Fashion Week After Historic Olympic Success

ರ‍್ಯಾಂಪ್‌ ವಾಕ್‌

ಮನು ಭಾಕರ್‌ ಅವರ ನ್ಯೂ ಲುಕ್‌ ರ‍್ಯಾಂಪ್‌ ವಾಕ್‌ , ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ದೃಶ್ಯದಲ್ಲಿ ಮನು ಭಾಕರ್ ಅತ್ಯಂತ ಆಕರ್ಷಕ ಔಟ್ ಫಿಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಯಾಷನ್‌ ವೀಕ್‌ನಲ್ಲಿ ಮನು ಭಾಕರ್‌ ಅವರ ಆಕರ್ಷಕ ನಡೆಗೆ ಹಾಗೂ ಅವರ ಲುಕ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಸಫಲವಾಗಿದೆ. ಸಾಮಾಜಿಕ ತಾಣದಲ್ಲಿ ಬಳಕೆದಾರರು ಇವರ ಪೋಸ್ಟ್‌ಗೆ ಕಮೆಂಟ್ ಮಾಡುತ್ತಲೆ ಇದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮನು, ನಾನು ನರ್ವಸ್ ಆಗಿದ್ದರೂ ಈ ಅನುಭವ ಅದ್ಭುತ ಎಂದಿದ್ದಾರೆ.

ಮನು ಸಾಧನೆ

2024ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮನು ಭಾಕರ್ ಇತಿಹಾಸದ ಪುಟದಲ್ಲಿ ಸ್ಥಾನ ಪಡೆದ ಅಥ್ಲೀಟ್‌. ಹರಿಯಾಣದ ಜಜ್ಜರ್ ಜಿಲ್ಲೆಯಲ್ಲಿ ಜನಿಸಿದ ಮನು ಭಾಕರ್ ಅವರು ಅದ್ಭುತ ಶೂಟಿಂಗ್ ವೃತ್ತಿಜೀವನವನ್ನು ಹೊಂದಿದ್ದಾರೆ. ಇವರು ತಮಗೆ 14 ವಯಸ್ಸು ಆಗಿದ್ದಾಗ ಶೂಟಿಂಗ್ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡರು. ಇದಾದ ಬಳಿಕ ಮನು ಹಿಂತಿರುಗಿ ನೋಡಿದ್ದೇ ಇಲ್ಲ. ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಇವರು ಸಫಲರಾಗಿದ್ದಾರೆ.

2017ರಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ ಶಿಪ್‌ನಲ್ಲಿ ಸ್ಟಾರ್ ಶೂಟರ್ ಹೀನಾ ಸಿಧು ಅವರನ್ನು ಮಣಿಸಿ ದಾಖಲೆ ಬರೆದಿದ್ದರು. ಆಸ್ಟ್ರೇಲಿಯಾದ ಗೋಲ್ಡ್‌ ಕಾಸ್ಟ್‌ ನಲ್ಲಿ ನಡೆದ ಕಾಮನ್‌ ವೆಲ್ತ್‌ ಚಾಂಪಿಯನ್‌ಶಿಪ್‌ನಲ್ಲಿ ಇವರು ಬಂಗಾರದ ಸಾಧನೆ ಮಾಡಿದ ಆಟಗಾರ್ತಿ. ಈ ಕ್ರೀಡಾ ಕೂಟದಲ್ಲಿ ಮನು 10 ಮೀಟರ್‌ ಏರ್ ಪಿಸ್ತೂಲ್ ವಿಭಾಗದಲ್ಲಿ ಬಂಗಾರ ಪಡೆದಿದ್ದರು. ಇಷ್ಟೇ ಅಲ್ಲದೆ 2018ರಲ್ಲಿ ನಡೆದಿದ್ದ ಯುತ್ ಗೇಮ್ಸ್‌ನಲ್ಲೂ ಮನು ಬಂಗಾರದ ನಗೆ ಬೀರಿದ್ದಾರೆ. ಯುತ್ ಒಲಿಂಪಿಕ್ಸ್‌ನಲ್ಲಿ ಸ್ವರ್ಣ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಅಥ್ಲೀಟ್‌ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಮುಂದಿನ ದಿನಗಳಲ್ಲೂ ಸ್ಥಿರ ಪ್ರದರ್ಶನವನ್ನು ನೀಡಿ ಭಾರತಕ್ಕೆ ಕೀರ್ತಿ ತರುವ ಕನಸು ಮನು ಭಾಕರ್‌ ಅವರದ್ದಾಗಿದೆ.

Story first published: Friday, October 11, 2024, 19:18 [IST]
Other articles published on Oct 11, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+