ಕುತೂಹಲಕಾರಿ ಕಾಳಗದಲ್ಲಿ ನಿಖಾತ್ ಸೋಲಿಸಿದ ಮೇರಿ ಕೋಮ್: ವೀಡಿಯೋ

ನವದೆಹಲಿ, ಡಿಸೆಂಬರ್ 28: ಟೋಕಿಯೋ ಒಲಿಂಪಿಕ್ಸ್‌ಗಾಗಿ ನಡೆದ ಮಹಿಳಾ ವಿಭಾಗದ ಬಾಕ್ಸಿಂಗ್ ಟ್ರಯಲ್ಸ್‌ನಲ್ಲಿ ಆರುಬಾರಿಯ ವಿಶ್ವ ಚಾಂಪಿಯನ್, ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಎಂಸಿ ಮೇರಿ ಕೋಮ್ ಅವರು ಯುವ ಬಾಕ್ಸರ್ ನಿಖಾತ್ ಝರೀನ್ ಅವರನ್ನು 9-1ರ ಅಂತರದಿಂದ ಸೋಲಿಸಿದ್ದಾರೆ.
2020ರ ಒಲಿಂಪಿಕ್ಸ್‌ಗಾಗಿ ಈ ಕುತೂಹಲಕಾರಿ ಕದನ ನವದೆಹಲಿಯ ಇಂದಿರಾ ಗಾಂಧಿ ಸ್ಟೇಡಿಯಂನಲ್ಲಿ ಶನಿವಾರ (ಡಿಸೆಂಬರ್ 28) ನಡೆಯಿತು. ಈ ಪಂದ್ಯದ ಗೆಲುವಿನೊಂದಿಗೆ 36ರ ಹರೆಯದ ಮೋರಿ ಕೋಮ್, 2020ರಲ್ಲಿ ನಡೆಯುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳಾ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
'ನಾನು ಸ್ಪಲ್ಪ ಕೋಪಗೊಂಡಿದ್ದೆ. ಅದರಲ್ಲಿ ಅನುಮಾನವೇ ಇಲ್ಲ. ಆದರೆ ಅದೆಲ್ಲಾ ಈಗ ಮುಗಿದಿದೆ. ನಾನು ಈ ಮೂಲಕ ಹೇಳೋದೆಂದರೆ ನಾವು ಮೊದಲ ಕೆಲಸ ಮಾಡಿ ಮತ್ತೆ ಮಾತನಾಡಬೇಕು. ರಿಂಗ್‌ನಲ್ಲಿ ನೀವೇನು ಮಾಡಿದ್ದೀರಿ ಅನ್ನೋದನ್ನು ಎಲ್ಲರೂ ನೋಡುತ್ತಾರೆ,' ಎಂದು ಪಂದ್ಯದ ಬಳಿಕ ಮೇರಿ ಪ್ರತಿಕ್ರಿಯಿಸಿದ್ದಾರೆ.
ಅಸಲಿಗೆ ಟೋಕಿಯೋ ಒಲಿಂಪಿಕ್ಸ್‌ನ 51ಕೆಜಿ ವಿಭಾಗದ ಬಾಕ್ಸಿಂಗ್ ಸ್ಪರ್ಧೆಗೆ ಮೇರಿ ಹೆಸರು ಸೂಚಿಸಲಾಗಿತ್ತು. ಬಾಕ್ಸಿಂಗ್‌ನಲ್ಲಿ ಮೇರಿ ಕೋಮ್ ಅವರ ಹಿಂದಿನ ಸಾಧನೆ, ಇತ್ತೀಚಿನ ಫಾರ್ಮ್ ಪರಿಗಣಿಸಿ ಕೋಮ್‌ಗೆ ಅರ್ಹತೆ ನೀಡಲಾಗಿತ್ತು. ಆದರೆ ಇದಕ್ಕೆ ಮೂಗು ತೂರಿಸಿದ್ದ ಝರೀನ್ (23 ವರ್ಷ), ಮೇರಿಯನ್ನು ಸೋಲಿಸುವುದಾಗಿ ಹೇಳಿಕೊಂಡಿದ್ದರು. ಕ್ರೀಡಾ ಸಚಿವ ಕಿರೆನ್ ರಿಜಿಜುಗೆ ಈ ಬಗ್ಗೆ ಪತ್ರವೂ ಬರೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications