Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಪದಕ ಖಾತ್ರಿಪಡಿಸಿದ ಮೇರಿ ಕೋಮ್

Mary Kom Enters Semi-Final, Assured Of 7th World Championship Medal

ನವದೆಹಲಿ, ನವೆಂಬರ್ 20: ನವದೆಹಲಿಯ ಕೆಡಿ ಜಾಧವ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್‌ (ಎಐಬಿಎ) ವಿಮೆನ್ಸ್ ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾರತದ ಬಾಕ್ಸಿಂಗ್ ಕ್ವೀನ್ ಮೇರಿ ಕೋಮ್ ಅವರು ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.

ಮಂಗಳವಾರ (ನವೆಂಬರ್ 20) ನಡೆದ 48 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರು ಚೀನಾದ ವು ಯು ಇನ್ ಅವರನ್ನು 5-0 ಅಂತರದಿಂದ ಸೋಲಿಸಿದರು. ಈ ಮೂಲಕ 35ರ ಹರೆಯದ ಕೋಮ್ ಏನಿಲ್ಲವೆಂದರೂ ಕಂಚಿನ ಪದಕವನ್ನಾದ್ರೂ ಖಾತರಿಪಡಿಸಿದ್ದಾರೆ.

2010ರಲ್ಲಿ ಮೇರಿ ಕೋಮ್ ಕಡೆಯ ಸಾರಿ ವಿಶ್ವ ಚಾಂಪಿಯನ್‌ಶಿಪ್‌ನ 48 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ಮೇರಿ ಬಂಗಾರವನ್ನು ಭಾರತಕ್ಕೆ ಗೆದ್ದಿದ್ದರು. ಇದೀಗ ಮತ್ತೆ ಪದಕ ಖಾತ್ರಿಯಾಗಿದ್ದು, ಇದು ಮೇರಿಗೆ ಲಭಿಸುತ್ತಿರುವ 7ನೇ ವಿಶ್ವ ಚಾಂಪಿಯನ್‌ಶಿಪ್‌ ಪದಕ.

Story first published: Tuesday, November 20, 2018, 19:27 [IST]
Other articles published on Nov 20, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+