Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾಕ್ಸಿಂಗ್ ರಿಂಗ್‌ಗೆ ಮರಳಲಿರುವ ಭಾರತದ ಮೇರಿ ಕೋಮ್

ನವದೆಹಲಿ, ಮಾರ್ಚ್. 28 : ಐದು ಬಾರಿ ವಿಶ್ವ ಚಾಂಪಿಯನ್ ಷಿಪ್ ಪ್ರಶಸ್ತಿ ವಿಜೇತೆ ಭಾರತದ ಬಾಕ್ಸಿಂಗ್ ಪಟು ಮೇರಿಕೋಮ್ ಅವರು ನವೆಂಬರ್ ನಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್ ಷಿಪ್ ನಲ್ಲಿ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ನಡೆದ ವಿಶ್ವಚಾಂಪಿಯನ್ ಷಿಪ್ ಬಳಿಕ 34 ವರ್ಷದ ಮೇರಿ ಕೋಮ್ ಬಾಕ್ಸಿಂಗ್‌ ನಿಂದ ದೂರ ಉಳಿದಿದ್ದರು. ಈಗ ಮತ್ತೊಮ್ಮೆ ಅಮೆಚೂರ್ ಸ್ಪರ್ಧೆ ಗಳಲ್ಲಿ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ.[ಐದು ಬಾರಿ ವಿಶ್ವ ಚಾಂಪಿಯನ್ ಕೋಮ್, ಈ ಬಾರಿ ಒಲಿಂಪಿಕ್ಸ್ ಗೆ ಇಲ್ಲ]

Mary Kom eyes comeback at the Asian Championships in November

'ಒಂದು ವರ್ಷ ಯಾವುದೇ ಸ್ಪರ್ಧೆಗಳಲ್ಲಿ ಆಡದಿದ್ದರೂ ತರಬೇತಿಯನ್ನು ನಿಲ್ಲಿಸಿಲ್ಲ. ಇನ್ನೂ ಒಂದು ವರ್ಷ ಆಡುವ ಕನಸು ಕಟ್ಟಿದ್ದೇನೆ' ಎಂದು ಮೇರಿಕೋಮ್ ಹೇಳಿದ್ದಾರೆ.

ಮೇರಿಕೋಮ್ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಐದು ಬಾರಿ ಪ್ರಶಸ್ತಿ ಹಾಗೂ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚು ಜಯಿಸಿದ್ದಾರೆ. ಈ ಬಾರಿಯ ಏಷ್ಯನ್ ಚಾಂಪಿಯನ್ ಷಿಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+