ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಫೈನಲ್ ಪ್ರವೇಶಿಸಿದ ಮೇರಿ ಕೋಮ್

ನವದೆಹಲಿ, ನವೆಂಬರ್ 22: ನವದೆಹಲಿಯ ಕೆಡಿ ಜಾಧವ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ (ಎಐಬಿಎ) ವಿಮೆನ್ಸ್ ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾರತದ ಭರವಸೆಯ ಬಾಕ್ಸರ್ ಮೇರಿ ಕೋಮ್ ಅವರು ಫೈನಲ್ ಗೆ ಪ್ರವೇಶಿಸಿದ್ದಾರೆ.
ಗುರುವಾರ (ನವೆಂಬರ್ 22) ನಡೆದ ಸೆಮಿಫೈನಲ್ ಸ್ಪರ್ಧೆಯಲ್ಲಿ ಮೇರಿ ಕೋಮ್ ಅವರು, ನಾರ್ತ್ ಕೊರಿಯಾದ ಕಿಮ್ ಹೈಯಾಂಗ್-ಮಿ ಅವರನ್ನು ಸೋಲಿಸಿ ಮುನ್ನಡೆ ಗಿಟ್ಟಿಸಿಕೊಂಡರು. ಇದೀಗ ಮೇರಿ ವಿಶ್ವ ಚಾಂಪಿಯನ್ ಶಿಪ್ ನಲ್ಲಿ 6ನೇ ಬಂಗಾರ ಗೆಲ್ಲುವತ್ತ ಕಣ್ಣಿಟ್ಟಿದ್ದಾರೆ.
2010ರಲ್ಲಿ ಮೇರಿ ಕೋಮ್ ಕಡೆಯ ಸಾರಿ ವಿಶ್ವ ಚಾಂಪಿಯನ್‌ಶಿಪ್‌ನ 48 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ಮೇರಿ ಬಂಗಾರವನ್ನು ಭಾರತಕ್ಕೆ ತಂದಿದ್ದರು. ಇದೀಗ ಮತ್ತೆ ಪದಕ ಖಾತ್ರಿಯಾಗಿದ್ದು, ಇದು ಮೇರಿಗೆ ಲಭಿಸುವುದರಲ್ಲಿರುವ 7ನೇ ವಿಶ್ವ ಚಾಂಪಿಯನ್‌ಶಿಪ್ ಪದಕ. ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಮೇರಿ ಈವರೆಗೆ ಒಟ್ಟು 5 ಚಿನ್ನ, 1 ಬೆಳ್ಳಿ ಪದಕವನ್ನು ಜಯಿಸಿದ್ದಾರೆ.
Story first published: Thursday, November 22, 2018, 17:13 [IST]
Other articles published on Nov 22, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications