Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಾಸ್ಟರ್ಸ್ ಅಥ್ಲೆಟಿಕ್ಸ್: ಭಾರತಕ್ಕೆ ಕಂಚು ಗೆದ್ದ ಕನ್ನಡಿಗ ಡಿ. ನಾಗಭೂಷಣ್

Masters Athletics: D Nagabhushan win Bronz for India

ಕೌಲಾಲಂಪುರ, ಅಕ್ಟೋಬರ್ 15: ಮಲೇಷ್ಯಾದ ಕೌಲಾಲಂಪುರ್ ನಲ್ಲಿ ಭಾನುವಾರ (ಅಕ್ಟೋಬರ್ 15) ಮುಕ್ತಾಯಗೊಂಡ 32ನೇ ಅಂತಾರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಚಿತ್ರದುರ್ಗದ ಡಿ. ನಾಗಭೂಷಣ್ ಅವರು 5000 ಮೀ. ವಾಕ್ ರೇಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ಉಮ್ ಅರೇನಾ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು ನಿಗದಿತ ಗುರಿಯನ್ನು 32:22 ನಿಮಿಷಗಳಲ್ಲಿ ಮುಟ್ಟಿ ಕಂಚಿನ ಪದಕಕ್ಕೆ ಭಾಜನರಾದರು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಸ್ಪೇನ್‌ನ ಲೂಯಿಸ್ ಅಬಾಡಿಯಸ್ (27:46.7 ನಿ.) ಚಿನ್ನದ ಪದಕ ಪಡೆದರೆ, ಸಿಂಗಾಪುರದ ಕೆ. ರಾಜೇಂಡಿಯನ್ (32:44 ನಿ.) ಬೆಳ್ಳಿ ಗೌರವ ಪಡೆದರು.

ಇದೇ ಅಕ್ಟೋಬರ್ 21 ಮತ್ತೊಂದು ಆಕರ್ಷಣೀಯ ಓಟಕ್ಕೆ ದೆಹಲಿ ಸಾಕ್ಷಿಯಾಗಲಿದೆ. ಏರ್‌ಟೆಲ್ ದಿಲ್ಲಿ ಹಾಫ್ ಮ್ಯಾರಥಾನ್ ಮಹಿಳಾ ವಿಭಾಗದ ಎಲೈಟ್ ಸ್ಪರ್ಧೆಯಲ್ಲಿ ಒಲಿಂಪಿಕ್ ನಲ್ಲಿ ಮೂರುಬಾರಿ ಚಿನ್ನ ಪದಕ ಗೆದ್ದಿರುವ ಇಥಿಯೋಫಿಯಾ ತಿರುನೇಶ್ ದಿಬಾಬಾ ಮತ್ತು ಹಾಫ್ ಮ್ಯಾರಥಾನ್ ವಿಶ್ವ ದಾಖಲೆಯ ಓಟಗಾರ್ತಿ ಜಾಯ್ಸ್ಸಿನ್ ಜೆಪ್ಕೋಸ್ಜೀ ಪಾಲ್ಗೊಳ್ಳುತ್ತಿದ್ದಾರೆ.

Story first published: Monday, October 15, 2018, 15:01 [IST]
Other articles published on Oct 15, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+