ಜಗದೇಕ ಬಾಕ್ಸಿಂಗ್ ಪಟು ಫ್ಲಾಯ್ಡ್ ಮೇವೆದರ್
ಲಾಸ್ ವೇಗಾಸ್,ಮಾ.3: ಶತಮಾನದ ಬಿಗ್ ಬಾಕ್ಸಿಂಗ್ ಫೈಟ್ ಗೆದ್ದ ಫ್ಲಾಯ್ಡ್ ಮೇವೆದರ್ ಜಗದೇಕ ಬಾಕ್ಸಿಂಗ್ ಪಟು ಎನಿಸಿಕೊಂಡಿದ್ದಾರೆ. ಕುತೂಹಲಕಾರಿಯಾಗಿದ್ದ ಈ ಬಾಕ್ಸಿಂಗ್ ಪಂದ್ಯದಲ್ಲಿ ಫ್ಲಾಯ್ಡ್ ಮೇವೆದರ್ ಅವರು 12ನೇ ಸುತ್ತಿನ ನಂತರ ಮ್ಯಾನಿ ಪ್ಯಾಕ್ವಿಯೋ ಅವರನ್ನು ಮಣಿಸಿ ಭಾರಿ ಮೊತ್ತದ ಬಹುಮಾನ ಗೆದ್ದಿದ್ದಾರೆ.
ಈ ಪಂದ್ಯದಲ್ಲಿ ಗೆದ್ದವರು- ಸೋತವರಿಬ್ಬರಿಗೂ ಭರಪೂರ ಮೊತ್ತದ ಬಹುಮಾನ ಸಿಕ್ಕಿದೆ.ಶತಮಾನದ ಬಾಕ್ಸಿಂಗ್ ಕದನ. ಇಲ್ಲಿ ಗೆದ್ದವರಿಗೆ ಬರೊಬ್ಬರಿ 1142 ಕೋಟಿ ರು. ಮೌಲ್ಯದ ಬಹುಮಾನ ದೊರೆತಿದೆ.
ಸೋತವರಿಗೆ 761 ಕೋಟಿ ಮೌಲ್ಯದ ಬಹುಮಾನ ಸಿಕ್ಕಿದೆ. ಅಮೆರಿಕದ ಫ್ಲಾಯ್ಡ್ ಮೇವೆದರ್ ಜ್ಯೂ ಅವರು ಫಿಲಿಫೈನ್ಸ್ ನ ಮ್ಯಾನಿ ಪ್ಯಾಕ್ವಿಯೋ ಸವಾಲನ್ನು ಸ್ವೀಕರಿಸಿ ಬಾಕ್ಸಿಂಗ್ ರಣರಂಗದಲ್ಲಿ ಸರಿಯಾದ ಪಂಚ್ ಮೂಲಕ ಗೆಲುವು ಸಾಧಿಸಿದರು.

ಭಾರತೀಯ ಕಾಲಮಾನ ಶನಿವಾರ ಮಧ್ಯರಾತ್ರಿ 2.30ಕ್ಕೆ ಆರಂಭವಾದ ಈ ಕದನವನ್ನು ಸ್ಕೈಸ್ಪೋರ್ಟ್ಸ್ ನೇರಪ್ರಸಾರ ಮಾಡಿದೆ. ಈ ಶತಮಾನದ ಶ್ರೇಷ್ಠ ಬಾಕ್ಸರ್ ಯಾರು ಎಂಬುದನ್ನು ಈ ಸ್ಪರ್ಧೆ ಜಗಜ್ಜಾಹೀರು ಮಾಡಿದೆ. ವಿಶ್ವದೆಲ್ಲೆಡೆ ಸುಮಾರು 1400 ಕೋಟಿ ರುಪಾಯಿಗಳ ಬೆಟ್ಟಿಂಗ್ ನಡೆಸಗಿದೆ ಎಂಬ ಅಂದಾಜು ಸಿಕ್ಕಿದೆ..ಈ ಸ್ಪರ್ಧೆಯಿಂದ ಒಟ್ಟು 2400 ಕೋಟಿ ರು ಆದಾಯದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ನಟ ಡೆನ್ಜೆಲ್ ವಾಷಿಂಗ್ಟನ್, ಚಾರ್ಲ್ಸ್ ಬರ್ಕ್ಲೆ, ರಿಗಿ ಮಿಲ್ಲರ್, ಆಲಿಸನ್ ಜ್ಯಾನೆ, ಜೋಷುವಾ ಜಾಕ್ಸನ್ ಅಲ್ಲದೆ ಬಾಕ್ಸಿಂಗ್ ತಾರೆಗಳಾದ ಮೈಕ್ ಟೈಸನ್, ರುಸ್ಲನ್ ಪ್ರೋವೊಡ್ನಿಕೋವ್ ಸೇರಿದಂತೆ ಅನೇಕ ಗಣ್ಯರು ಈ ಮಹಾ ಕಾದಾಟವನ್ನು ವೀಕ್ಷಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications