ವಿಶ್ವಕಪ್ : ಎಸ್ಕೋಬಾರ್ ನೆನಪಲ್ಲಿ ಕೊಲಂಬಿಯಾ ಶೋ
ರಿಯೋ ಡಿ ಜನೈರೋ, ಜು.4: ಕೊಲಂಬಿಯಾದ ಅಭಿಮಾನಿಗಳು 20 ವರ್ಷದ ಹಿಂದೆ ದುರಂತ ಸಾವಿಗೀಡಾದ ದೇಶದ ಖ್ಯಾತ ಡಿಫೆಂಡರ್ ಆಂಡ್ರೆ ಎಸ್ಕೋಬಾರ್ ಅವರ ನೆನಪಲ್ಲಿ ಈ ಬಾರಿಯ ಫೀಫಾ ವಿಶ್ವಕಪ್ ಪಂದ್ಯ ವೀಕ್ಷಿಸುತ್ತಿದ್ದಾರೆ.
ಕೆಲವು ಅಭಿಮಾನಿಗಳು ಎಸ್ಕೋಬಾರ್ ಚಿತ್ರ ಹಿಡಿದು ಅವರಿಗೆ ಗೌರವ ಸಲ್ಲಿಸಿದರೆ ಸದ್ಯ ತಂಡದಲ್ಲಿರುವ ಎಸ್ಕೋಬಾರ್ ಅವರ ಸಹೋದರ ಸ್ಯಾಂಟಿಯಾಗೊ ಅವರು ನಾವು ಇನ್ನಷ್ಟು ಶ್ರೇಷ್ಠ ಪ್ರದರ್ಶನ ನೀಡುತ್ತೇವೆ ಎಂದಿದ್ದಾರೆ. ಅದರಂತೆ ಈ ಬಾರಿ ರೋಡ್ರಿಗೇಜ್ ಅವರ ಮುಂಪಡೆಯಲ್ಲಿ ಕೊಲಂಬಿಯಾ ತಂಡ ಮೊಟ್ಟ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ತಲುಪಿದೆ. ಬ್ರೆಜಿಲ್ ಜತೆ ಶುಕ್ರವಾರ ತಡರಾತ್ರಿ(1.30 IST) ಕಾದಾಡಲಿದೆ.[8 ಘಟ್ಟದ ರೋಚಕ ಪಂದ್ಯಗಳ ವೇಳಾಪಟ್ಟಿ]
ಈ ವರೆಗೂ ಆಡಿದ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿರುವ ಕೊಲಂಬಿಯಾ ಕ್ವಾರ್ಟರ್ ಫೈನಲ್ ನಲ್ಲಿ ಗೆಲ್ಲಲಿ ಅಥವಾ ಸೋಲಲಿ ಆದರೆ, ಅಭಿಮಾನಿಗಳ ಮನಗೆದ್ದ ತಂಡವಾಗಿ ಹೊರ ಹೊಮ್ಮಿದೆ. 1994ರ ವಿಶ್ವಕಪ್ ನಲ್ಲಿ ಯುಎಸ್ಎ ಓನ್ ಗೋಲ್ ಹೊಡೆದ ತಪ್ಪಿಗೆ ಹುಚ್ಚು ಅಭಿಮಾನಿಗಳ ಗುಂಡೇಟಿಗೆ ಬಲಿಯಾಗಿದ್ದ ಎಸ್ಕೋಬಾರ್ ನೆನಪಲ್ಲಿ ಈ ತಂಡ ಕಣಕ್ಕಿಳಿಯುತ್ತಿದೆ. ಕೊಲಂಬಿಯಾ ಸಾಧನೆ ವಿವರ ಹಾಗೂ ಎಸ್ಕೋಬಾರ್ ಓನ್ ಗೋಲ್ ವಿಡಿಯೋ ನೋಡಿ

ಉರುಗ್ವೆ ವಿರುದ್ಧ ತಂಡ ಜಯ ಸಮರ್ಪಣೆ
ಎಸ್ಕೋಬಾರ್‌ಗಾಗಿ ನಾವು ಈ ಗೆಲುವನ್ನು ಸಮರ್ಪಿಸಿದ್ದೇವೆ ಎಂದು ಉರುಗ್ವೆ ವಿರುದ್ಧ ತಂಡ ಜಯ ಸಾಧಿಸಿದ ಬಳಿಕ ಅಭಿಮಾನಿಯೊಬ್ಬ ಟ್ವೀಟ್ ಮಾಡಿದ್ದರು. ಎಸ್ಕೋಬಾರ್ ಕೊಲಂಬಿಯಾ ತಂಡದ ಖ್ಯಾತ ರಕ್ಷಣಾ ಆಟಗಾರರಾಗಿದ್ದರು.
20 ವರ್ಷಗಳ ಹಿಂದೆ ವಿಶ್ವ ಕಪ್ ಪಂದ್ಯವೊಂದರಲ್ಲಿ ಎದುರಾಳಿ ತಂಡಕ್ಕೆ ಗೋಲು ಹೊಡೆದ ಕಾರಣಕ್ಕಾಗಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. 1994ರ ಜುಲೈ 2ರಂದು ಮೆಡೆಲಿನ್‌ನ ಬಾರ್‌ನ ಹೊರಗಡೆ ಅವರನ್ನು ಕೊಲ್ಲಲಾಗಿತ್ತು.
ಎಸ್ಕೋಬಾರ್ ಸಲ್ಲಿಸಲಾಗುವ ಗೌರವವಾಗಲಿದೆ
ಸರಿಯಾಗಿ 20 ವರ್ಷಗಳ ಬಳಿಕ ಕೊಲಂಬಿಯಾ ಇದೀಗ ಮೊದಲ ಬಾರಿ ವಿಶ್ವಕಪ್‌ನ ಕ್ವಾರ್ಟರ್‌ಫೈನಲಿಗೇರಿದ ಸಾಧನೆ ಮಾಡಿದೆ. ಅವರ ನೆನಪಿನಲ್ಲಿ ತಂಡ ಇನ್ನಷ್ಟು ಎತ್ತರಕ್ಕೆ ಏರಿದರೆ ಅದು ಅವರಿಗೆ ಸಲ್ಲಿಸಲಾಗುವ ಗೌರವವಾಗಲಿದೆ.

ರೋಡ್ರಿಗೇಜ್ ಗೆ ಬೇಡಿಕೆ ಹುಟ್ಟಿಕೊಂಡಿದೆ
ಗಾಯಗೊಂಡ ರಾಡಮೆಲ್ ಫಾಲ್ಕಾವೊ ಅವರ ಅನುಪಸ್ಥಿತಿಯಲ್ಲಿ ಕೊಲಂಬಿಯಾ ಉತ್ತಮ ಸಾಧನೆ ನೀಡುತ್ತಿದೆ. ರೋಡ್ರಿಗೇಜ್ ಗೆ ವಿಶ್ವದ ಅನೇಕ ಕ್ಲಬ್ ಗಳಿಂದ ಬೇಡಿಕೆ ಹುಟ್ಟಿಕೊಂಡಿದೆ.

ಇದೇ ಮೊದಲ ಬಾರಿ ವಿಶ್ವಕಪ್‌ನಲ್ಲಿ ಮುಖಾಮುಖಿ
ದಕ್ಷಿಣ ಅಮೆರಿಕದ ತಂಡಗಳು ಇದೇ ಮೊದಲ ಬಾರಿ ವಿಶ್ವಕಪ್‌ನಲ್ಲಿ ಮುಖಾಮುಖಿಯಾಗುತ್ತಿವೆ. ಸೌಹಾರ್ದ ಪಂದ್ಯ ಹಾಗೂ ಇತರ ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಉಭಯ ತಂಡಗಳು 24 ಬಾರಿ ಸೆಣಸಾಡಿದ್ದು, ಬ್ರೆಜಿಲ್ಲ್ 15 ಬಾರಿ ಗೆಲುವು ಸಾಧಿಸಿದೆ.

ಕೇವಲ ಎರಡು ಗೋಲು ಬಿಟ್ಟುಕೊಟ್ಟಿದೆ
ಕಳೆದ ನಾಲ್ಕೂ ಪಂದ್ಯಗಳಲ್ಲಿ ಕೊಲಂಬಿಯಾ ತಂಡ ಕೇವಲ ಎರಡು ಗೋಲು ಬಿಟ್ಟುಕೊಟ್ಟಿದೆ.
ಆರನೆ ಬಾರಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿರುವ ಬ್ರೆಝಿಲ್ ತಂಡ ಚಿಲಿ ವಿರುದ್ದ ಪಂದ್ಯದಲ್ಲಿ ಪರದಾಟ ನಡೆಸಿತ್ತು. ಬ್ರೆಝಿಲ್ ಟೂರ್ನಿಯಲ್ಲಿ ಒಟ್ಟು 8 ಗೋಲುಗಳನ್ನು ಬಾರಿಸಿದ್ದು, ನೇಮಾರ್ ಒಬ್ಬರೇ ನಾಲ್ಕು ಗೋಲು ದಾಖಲಿಸಿದ್ದಾರೆ.ನೇಮಾರ್ ಕ್ವಾರ್ಟರ್ ಫೈನಲ್ ಆಡಿದರೂ ಪೂರ್ನ ಪ್ರಮಾಣದ ಪ್ರದರ್ಶನ ಕಷ್ಟ.
ಬ್ರೆಜಿಲ್ ಗೆ ಆತಂಕ ಶುರುವಾಗಿದೆ
ಜೋಸ್ ಪೆಕೆರ್‌ಮನ್ ಮಾರ್ಗದರ್ಶನದಲ್ಲಿ ಪಳಗಿರುವ ಕೊಲಂಬಿಯಾ ಆಟಗಾರರು ಬ್ರೆಜಿಲನ್ನು ಟೂರ್ನಿಯಿಂದ ಹೊರ ಹಾಕುವ ವಿಶ್ವಾಸದಲ್ಲಿದ್ದಾರೆ. ಒಂದು ವೇಳೆ ಸೋತರೂ ವೀರೋಚಿತ ಹೋರಾಟ ನೀರೀಕ್ಷೆ ಇದ್ದೇ ಇದೆ

ಗೋಲ್ಡನ್ ಬೂಟ್ ರೇಸ್‌ನಲ್ಲಿ ರೋಡ್ರಿಗ್ರೇಜ್
ವಿಶ್ವಕಪ್‌ನಲ್ಲಿ ಗರಿಷ್ಠ 5 ಗೋಲುಗಳನ್ನು ದಾಖಲಿಸಿ ಗೋಲ್ಡನ್ ಬೂಟ್ ರೇಸ್‌ನಲ್ಲ್ಲಿ ಮುಂಚೂಣಿಯಲ್ಲಿರುವ ಜೇಮ್ಸ್ ರೋಡ್ರಿಗ್ರೇಜ್ ಕೊಲಂಬಿಯಾ ತಂಡದ ಆಧಾರ ಸ್ತಂಭವಾಗಿದ್ದಾರೆ. ರೊಡ್ರಿಗಝ್‌ಗೆ ಜುಯಾನ್ ಕ್ವಾಡ್ರಾಡೊ ಹಾಗೂ ಜಾಕ್ಸನ್ ಮರ್ಟಿನೆಝ್ ಉತ್ತಮ ಸಾಥ್ ನೀಡುತ್ತಿದ್ದಾರೆ.
ಎಸ್ಕೋಬಾರ್ ಓನ್ ಗೋಲ್ ವಿಡಿಯೋ
ಎಸ್ಕೋಬಾರ್ ಓನ್ ಗೋಲ್ ವಿಡಿಯೋ ಹಾಗೂ ಆತ್ಮೀಯರಿಂದ ಶೋಕದ ನುಡಿಗಳು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications