ಕ್ಯಾನ್ಸರ್ ಪೀಡಿತರಿಗೆ ಹಣ ಹಂಚಿದ ಫುಟ್ಬಾಲ್ ತಾರೆಯರು
ಬರ್ಲಿನ್/ಬ್ಯೂನಸ್ ಐರೀಸ್, ಜು.17: ವಿಶ್ವಕಪ್ ಫುಟ್ಬಾಲ್ ಹಬ್ಬ ಮುಗಿದ ನಂತರೂ ಅರ್ಜೆಂಟಿನಾ ಹಾಗೂ ಜರ್ಮನಿಯಲ್ಲಿ ಹಬ್ಬದ ವಾತಾವರಣ ಇನ್ನೂ ಮುಂದುವರೆದಿದೆ. ಇದರ ಜತೆಗೆ ವಿಶ್ವಕಪ್ ಗೆದ್ದ ಜರ್ಮನಿ ಹಾಗೂ ರನ್ನರ್ ಅಪ್ ಅರ್ಜೆಂಟಿನಾ ತಂಡ ಪ್ರಶಸ್ತಿ ಮೊತ್ತವನ್ನು ದಾನ ಮಾಡುವ ಮೂಲಕ ವಿಶ್ವದ ಕ್ರೀಡಾಭಿಮಾನಿಗಳ ಮನಗೆದ್ದಿವೆ.
ಮೊದಲಿಗೆ ಜರ್ಮನಿಯ ಮಿಡ್ ಫೀಲ್ಡರ್ ಮೆಸುಟ್ ಓಜಿಲ್ ಮಹತ್ಕಾರ್ಯದ ಬಗ್ಗೆ ಗಮನ ಹರಿಸೋಣ.. ಮೆಸುಟ್ ಓಜಿಲ್ ಸೇರಿದಂತೆ ಜರ್ಮನಿಯ ಆಟಗಾರರು ಇತರೆ ತಂಡಗಳಿಗಿಂತ ಮುಂಚಿತವಾಗಿ ಬ್ರೆಜಿಲ್ಲಿಗೆ ಬಂದು ಅಲ್ಲಿನ ಸ್ಥಳೀಯರೊಡನೆ ಕಲೆತು ಬೆರೆತು ಒಂದಾಗಿದ್ದರು. [ಚಿತ್ರಗಳು : ಫೀಫಾ ವಿಶ್ವಕಪ್ ಪ್ರಶಸ್ತಿಗಳ ವಿಜೇತರು]
ಓಜಿಲ್ ಅವರು ಬ್ರೆಜಿಲ್ ಫೀಫಾ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಬ್ರೆಜಿಲ್ಲಿನ 11ಕ್ಕೂ ಅಧಿಕ ಕ್ಯಾನ್ಸರ್ ಪೀಡಿತ ಮಕ್ಕಳ ಶಸ್ತ್ರಚಿಕಿತ್ಸೆಗೆ ಹಣ ಒದಗಿಸಿದ್ದರು. ಈಗ ವಿಶ್ವಕಪ್ ಗೆದ್ದ ಜರ್ಮನ್ನಿಯ 23 ಸದಸ್ಯರ ತಂಡದ ಗುರುತಿಗಾಗಿ ಮತ್ತೊಮ್ಮೆ 23 ಕ್ಯಾನ್ಸರ್ ಪೀಡಿತ ಮಕ್ಕಳ ಸುಶ್ರೂಷೆಗೆ ನೆರವಾಗಿದ್ದಾರೆ.
ಇಂಗ್ಲೀಷ್ ಪ್ರಿಮಿಯರ್ ಲೀಗ್ ನಲ್ಲಿ ಆರ್ಸೆನಲ್ ಕ್ಲಬ್ ಪರ ಆಡುವ ಓಜಿಲ್ ಅವರು ಟರ್ಕಿಷ್ ಮೂಲದವರಾಗಿದ್ದು, ಪ್ರತಿ ಪಂದ್ಯಕ್ಕೂ ಮುನ್ನ ಕುರಾನ್ ಪಠಣ ಮಾಡುತ್ತಾರೆ. ಆದರೆ, ರಂಜಾನ್ ವೇಳೆ ಫೀಫಾ ವಿಶ್ವಕಪ್ ಪಂದ್ಯಗಳು ನಡೆಯುತ್ತಿದ್ದರಿಂದ ಉಪವಾಸ ವ್ರತ ಕೈಗೊಂಡಿರಲಿಲ್ಲ.

ಓಜಿಲ್ ಜರ್ಮನಿಯ ಉದಯೋನ್ಮುಖ ತಾರೆ
ಜರ್ಮನಿಯ ಉದಯೋನ್ಮುಖ ತಾರೆ 25 ವರ್ಷದ ಓಜಿಲ್ ಅವರು 400,000 ಡಾಲರ್ ಗೂ ಅಧಿಕ ಬಹುಮಾನ ಮೊತ್ತ ತಂಡದೊಡನೆ ಹಂಚಿಕೊಂಡಿದ್ದು, ಬ್ರೆಜಿಲ್ ಮಕ್ಕಳ ಸರ್ಜರಿ ಸೇರಿ ಅನೇಕ ದಾನ ಧರ್ಮ ಯೋಜನೆಯಲ್ಲಿ ಹಣ ತೊಡಗಿಸುತ್ತಿದ್ದಾರೆ.
ಕ್ಯಾನ್ಸರ್ ಪೀಡಿತರಿಗೆ ಓಜಿಲ್ ಬಿಗ್ ಶೂ ನೆರವು
ಕ್ಯಾನ್ಸರ್ ಪೀಡಿತರಿಗೆ ಓಜಿಲ್ 'ಬಿಗ್ ಶೂ' ನೆರವು ಸಿಕ್ಕಿದ್ದು, ವಿಡಿಯೋದಲ್ಲಿ ಈ ಬಗ್ಗೆ ಮಾಹಿತಿ ನಿಮಗೆ ಸಿಗಲಿದೆ.

ಗಾಜಾ ಸಂತ್ರಸ್ತರಿಗೆ ಓಜಿಲ್ ದಾನ ನೀಡಿಲ್ಲ
ವಿಶ್ವಕಪ್ ಪಂದ್ಯವೊಂದರ ವೇಳೆ ಪ್ಯಾಲೇಸ್ಟೈನ್ ಅಧಿಕಾರಿಯ ಕೈಕುಲುಕಲು ನಿರಾಕರಿಸಿದ್ದ ಓಜಿಲ್ ಅವರು ಇಸ್ರೇಲ್ ಹಾಗೂ ಹಮಾಸ್ ಉಗ್ರ ಸಂಘಟನೆ ಯುದ್ಧದ ಬಗ್ಗೆ ತೀವ್ರ ಖೇದ ವ್ಯಕ್ತಪಡಿಸಿದ್ದಾರೆ. ಆದರೆ, ಗಾಜಾ ಸಂತ್ರಸ್ತರಿಗೆ ಓಜಿಲ್ ಅವರು $600,000 ಮೊತ್ತ ದಾನ ನೀಡಿದ್ದಾರೆ ಎಂಬ ಸುದ್ದಿಯನ್ನು ಅವರ ಪ್ರತಿನಿಧಿ ರೋಲ್ಯಾಂಡ್ ಐಟೆಲ್ ನಿರಾಕರಿಸಿದ್ದಾರೆ.
ಗಾಜಾ ಸಂತ್ರಸ್ತರಿಗೆ ಓಜಿಲ್ ದಾನ ಬಗ್ಗೆ ಸುದ್ದಿ
ಗಾಜಾ ಸಂತ್ರಸ್ತರಿಗೆ ಓಜಿಲ್ ದಾನ ಬಗ್ಗೆ ಖ್ಯಾತ ವರದಿಗಾರ ರಾಬ್ ಹಾರಿಸ್ ಅವರಿಂದ ಸ್ಪಷ್ಟನೆ.

ಅರ್ಜೆಂಟಿನಾ ತಂಡದಿಂದ ಕೂಡಾ ದಾನ
ಲಿಯೊನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ತಂಡ ಕೂಡಾ ರನ್ನರ್ ಅಪ್ ಮೊತ್ತದ ಒಂದು ಭಾಗವನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡಿದೆ. ಬ್ಯೂನಸ್ ಐರೀಸ್ ನ Garrahan's paediatric ಕ್ಯಾನ್ಸರ್ ಕೇಂದ್ರಕ್ಕೆ $135,000 ಮೊತ್ತವನ್ನು ಅರ್ಜೆಂಟೀನಾ ತಂಡ ನೀಡಿದೆ. ಮಿಡ್ ಫೀಲ್ಡರ್ ಜೇವಿಯರ್ ಮ್ಯಾಸ್ಕರಾನೊ ಅವರ ಸಲಹೆಯಂತೆ ಅರ್ಜೆಂಟಿನಾ ತಂಡ ತಮಗೆ ಲಭಿಸಿದ 25 ಮಿಲಿಯನ್ ಡಾಲರ್ ಮೊತ್ತದಲ್ಲಿ ಒಂದಷ್ಟು ಆಸ್ಪತ್ರೆಗೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications