For Quick Alerts
ALLOW NOTIFICATIONS  
For Daily Alerts

Michael Schumacher: ದಶಕದ ಬಳಿಕ ಮೈಕಲ್ ಶುಮಾಕರ್ ಆರೋಗ್ಯದಲ್ಲಿ ಸುಧಾರಣೆ

ಫಾರ್ಮುಲಾ ಒನ್ (F1) ರೇಸಿಂಗ್ ದಂತಕಥೆ ಮೈಕಲ್ ಶುಮಾಕರ್ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಅವರು ಈಗ ಹಾಸಿಗೆಯಿಂದ ಏಳುವಷ್ಟು ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಏಳು ಬಾರಿಯ ವಿಶ್ವ ಚಾಂಪಿಯನ್ ಚಾಲಕನ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ ಎಂದು ತಿಳಿದು ಬಂದಿದೆ. ಈ ಸುದ್ದಿ ಮೈಕೆಲ್ ಶುಮ್ಯಾಕರ್ ಅಭಿಮಾನಿಗಳಿಗೆ ಖುಷಿ ನೀಡಿದೆ.

2013 ರಲ್ಲಿ ಇವರು ಅಪಘಾತಕ್ಕೀಡಾದ ನಂತರ ಶುಮಾಕರ್ ಅವರ ಸ್ಥಿತಿಯನ್ನು ಯಾವಾಗಲೂ ಕುಟುಂಬವು ಮಾಧ್ಯಮಗಳಿಂದ ದೂರವಿಟ್ಟಿದೆ. ಇದರಿಂದ ಅವರ ಚಿಕಿತ್ಸೆ ಮತ್ತು ಮಾನಸಿಕ ಶಾಂತಿಗೆ ಧಕ್ಕೆಯಾಗದಂತೆ ಎಂದು ಕುಟುಂಬಗಳು ತಿಳಿಸಿದ್ದವು. ದಶಕಗಳ ಕಾಲ ಹಾಸಿಗೆಯನ್ನೇ ಪ್ರಪಂಚವನ್ನಾಗಿರಿಸಿಕೊಂಡಿದ್ದ ಸ್ಟಾರ್ ಚಾಲಕ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದಿದೆ. ಇವರು ಈಗ ತಮ್ಮ ಅಕ್ಕಪಕ್ಕದ ವಸ್ತುಗಳನ್ನು ಗುರುತಿಸುತ್ತಿದ್ದಾರೆ ಎಂದು ಡೈಲಿ ಮೇಲ್ ಹೇಳಿದೆ.

Michael Schumacher

ಮೈಕಲ್ ಶುಮಾಕರ್ ಅವರ ಆರೋಗ್ಯ ಸುಧಾರಣೆಯಲ್ಲಿ ಪತ್ನಿ ಕೊರಿನ್ನಾ ಪಾತ್ರ ದೊಡ್ಡದಿದೆ. ಅವರು ಸ್ವಿಟ್ಜರ್ಲೆಂಡ್ ಮತ್ತು ಸ್ಪೇನ್‌ನಲ್ಲಿನ ತಮ್ಮ ನಿವಾಸಗಳಲ್ಲಿ ವಿಶ್ವ ದರ್ಜೆಯ ವೈದ್ಯಕೀಯ ಸೇವೆಗಳನ್ನು ಸಿದ್ಧಪಡಿಸಿಕೊಂಡಿದ್ದರು. ಇವರು ಅಚ್ಚುಕಟ್ಟಾಗಿ ಶುಮಾಕರ್ ಅವರ ಆರೋಗ್ಯದ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡದಂತೆ ತಡೆಯುವಲ್ಲಿ ಸಫಲರಾಗಿದ್ದರು. ಅಲ್ಲದೆ ಮೈಕಲ್‌ ಆರೋಗ್ಯ ಸುಧಾರಣೆಗಾಗಿ ಇವರು ಹಗಲಿರುಳು ಶ್ರಮಿಸಿದ್ದಾರೆ.

ಡಿಸೆಂಬರ್ 29, 2013 ರಂದು, ಫ್ರೆಂಚ್‌ನಲ್ಲಿ ಸ್ಕೀಯಿಂಗ್ ಮಾಡುವಾಗ, ಶುಮಾಕರ್ ಅವರ ತಲೆಗೆ ಪೆಟ್ಟು ಬಿದ್ದಿತ್ತು. ಇವರು ಚಾಲನೆಯ ವೇಳೆ ಹೆಲ್ಮೆಟ್‌ ಧರಿಸಿದ್ದರಿಂದ, ಅವರ ಹೆಲ್ಮೆಟ್ ಅವರ ಜೀವವನ್ನು ಉಳಿಸಿತು. ಅಪಘಾತದಲ್ಲಿ ಶುಮಾಕರ್ ಅವರಿಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಎರಡು ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗಳಿಗೆ ಒಳಗಾದರು. ಅಲ್ಲದೆ ಇವರು 250ಕ್ಕೂ ಹೆಚ್ಚು ದಿನಗಳ ಕಾಲ ಕೋಮಾದಲ್ಲಿದ್ದರು. ಆ ಸಮಯದಿಂದ ಇವರು ಬದುಕಲು ಹೋರಾಟ ನಡೆಸಿದ್ದಾರೆ.

Story first published: Thursday, January 29, 2026, 11:06 [IST]
Other articles published on Jan 29, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+