2021ರಲ್ಲಿ ಹಾಸ್ ಎಫ್1ನಲ್ಲಿ ರೇಸಿಗಿಳಿಯಲಿದ್ದಾರೆ ಮೈಕೆಲ್ ಪುತ್ರ ಮಿಕ್

ಬರ್ಲಿನ್: ಫಾರ್ಮುಲಾ 1 ಖ್ಯಾತ ರೇಸರ್ ಮೈಕೆಲ್ ಷೂಮೇಕರ್ ಸರ್‌ನೇಮ್ ಮತ್ತೆ ಎಫ್-1 ರೇಸಿಂಗ್ ಕಣದಲ್ಲಿ ಕಾಣಿಸಿಕೊಳ್ಳಲಿದೆ. ಜರ್ಮನಿಯ ಫಾರ್ಮುಲಾ 1 ದಿಗ್ಗಜ ಮೈಕೆಲ್ ಷೂಮೇಕರ್ ಅವರ ಪುತ್ರ ಮಿಕ್ ಅವರು 2021ರಲ್ಲಿ ಯುನೈಟೆಡ್ ಸ್ಟೇಟ್ ಮಾಲೀಕತ್ವದ ಹಾಸ್ ಟೀಮ್ ಜೊತೆ ರೇಸಿಂಗ್ ಕಣಕ್ಕಿಳಿಯಲಿದ್ದಾರೆ.
ಫಾರ್ಮುಲಾ 1ಗೆ ನಿವೃತ್ತಿ ಘೋಷಿಸಿರುವ ಮೈಕೆಲ್ ಷೂಮೇಕರ್ ಅವರು ಫೆರಾರಿ ಕಾರಿನ ಜೊತೆ ಹೆಚ್ಚು ಜನಪ್ರಿಯರಾಗಿದ್ದರು. ಏಳು ಬಾರಿ ವಿಶ್ವ ಚಾಂಪಿಯನ್ ಪಟ್ಟ ಗೆದ್ದಿರುವ ಷೂಮೇಕರ್, ಮೈಕೆಲ್ ಜೋಡರ್ನ್ ಗರ್ಯಾಂಡ್‌ಪ್ರಿಕ್ಸ್, ಬೆನೆಟನ್, ಫೆರಾರಿ ಮತ್ತು ಮರ್ಸಿಡಿಸ್ ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದಾರೆ.
21ರ ಹರೆಯದ ಜರ್ಮನಿಯ ರೇಸರ್ ಮಿಕ್, ಯುಎಸ್ ಮಾಲೀಕತ್ವದ ಹಾಸ್ ಜೊತೆಗೆ ಬಹು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದಾರೆ. ಹಾಸ್ ಜೊತೆಗೆ ಚಾಲಕನಾಗಿ ಮಿಕ್ ರೇಸಿಗಿಳಿಯುತ್ತಿರುವುದನ್ನು ಮೈಕೆಲ್ ಅವರು ಬುಧವಾರ (ಡಿಸೆಂಬರ್ 2) ಘೋಷಿಸಿದ್ದಾರೆ.
'ನನ್ನ ಫಾರ್ಮುಲ 1 ಕನಸನ್ನು ಈ ಮೂಲಕ ನನಸಾಗಿಸುತ್ತೇನೆ ಎಂದು ನಾನು ಯಾವಾಗಲೂ ನಂಬುತ್ತೇನೆ,' ಎಂದು ಷೂಮೇಕರ್ ಪುತ್ರ ಮಿಕ್ ಖುಷಿ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications