ಬಾಕ್ಸರ್ ಮೈಕ್ ಟೈಸನ್ ವಾರಕ್ಕೆ 28 ಲಕ್ಷ ರೂ. ಖರ್ಚು ಮಾಡೋದ್ಯಾಕೆ ಗೊತ್ತಾ?

ಹೊಸದಿಲ್ಲಿ, ಆಗಸ್ಟ್ 14: ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಅಮೆರಿಕದ ಮೈಕ್ ಟೈಸನ್, ತಮ್ಮ ವೃತ್ತಿ ಬದುಕಿನ ವೇಳೆ ಹಲವು ವಿವಾದಗಳಿಂದಲೇ ಹೆಚ್ಚು ಸುದ್ದಿಯಾದವರು. ಎದುರಾಳಿ ಬಾಕ್ಸರ್‌ನ ಕಿವಿಯನ್ನೇ ಕಚ್ಚಿ ಕಿತ್ತೊಗೆದ ಕುಖ್ಯಾತಿ ಟೈಸನ್ ಅವರದ್ದು.
53 ವರ್ಷದ ಮಾಜಿ ಬಾಕ್ಸರ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 'ದಿ ಬ್ಯಾಡೆಸ್ಟ್ ಮ್ಯಾನ್ ಆನ್ ದಿ ಪ್ಲ್ಯಾನೆಟ್' ಖ್ಯಾತಿಯ ಟೈಸನ್, ಇದೀಗ ಕ್ಯಾಲಿಫೋರ್ನಿಯಾದಲ್ಲಿ ಗಾಂಜ ಉದ್ಯಮವನ್ನೇ ಆರಂಭಿಸಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಗಾಂಜ ಸೇವನೆಗೆ ಕಾನೂನಾತ್ಮಕ ಸಮ್ಮತಿಯಿದೆ.
ಟೈಸನ್ ಇದೇ ವೇಳೆ ತಾವು ಗಾಂಜ ಸಲುವಾಗಿ ಖರ್ಚು ಮಾಡುತ್ತಿರುವ ಮೊತ್ತವೆಷ್ಟು ಎಂಬುದನ್ನು ಬಹಿರಂಗ ಪಡಿಸಿದ್ದಾರೆ. ಗಾಂಜ ಉದ್ಯಮವನ್ನೇ ಆರಂಭಿಸಿರುವ ಟೈಸನ್, ವೈಯಕ್ತಿಕವಾಗಿ ಗಾಂಜ ಸೇವಿಸಲೆಂದೇ ವಾರಕ್ಕೆ ಬರೋಬ್ಬರಿ 28 ಲಕ್ಷ ರೂಪಾಯಿ ($40,000) ಮೊತ್ತವನ್ನು ಖರ್ಚು ಮಾಡುವುದಾಗಿ ಹೇಳಿಕೊಂಡಿದ್ದಾರೆ.
ತಮ್ಮ ಉದ್ಯಮದಲ್ಲಿ ಪಾಲುದಾರರಾದ ಅಡ್ವೊಕೇಟ್ ಎಬ್ಡೆನ್ ಬ್ರಿಟನ್ ಅವರೊಟ್ಟಿಗೆ ಟೈಸನ್ ತಮ್ಮ ನೂತನ ಉತ್ಪನ್ನ 'ಹಾಟ್ ಬಾಕ್ಸಿಂಗ್' ಬಿಡುಗಡೆ ಸಂದರ್ಭದಲ್ಲಿ ತಮ್ಮ ಗಾಂಜ ಸೇವನೆಯ ವೆಚ್ಚವನ್ನು ಬಾಯ್ಬಿಟ್ಟಿದ್ದಾರೆ.
ತಮ್ಮ 20ನೇ ವಯಸ್ಸಿಗೆ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಹೆವಿವೇಟ್ ಚಾಂಪಿಯನ್‌ಷಿಪ್ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ವಯಸ್ಸಿನ ಬಾಕ್ಸರ್ ಎನಿಸಿದ್ದ ಟೈಸನ್, ತಮ್ಮ 19ನೇ ವಯಸ್ಸಿನಲ್ಲೇ ಚೊಚ್ಚಲ ವೃತ್ತಿ ಪರ ಬಾಕ್ಸಿಂಗ್ ಪಂದ್ಯವನ್ನು ಗೆದ್ದಿದ್ದರು. ವೃತ್ತಿಬದುಕಿನ ಆರಂಭಿಕ 19 ಪಂದ್ಯಗಳನ್ನು ನಾಕ್‌ಔಟ್ ಮೂಲಕವೇ ಗೆದ್ದಿರುವುದು ಟೈಸನ್ ಅವರ ಪ್ರಮುಖ ಸಾಧನೆಗಳಲ್ಲಿ ಒಂದು. ಇದರಲ್ಲಿ 12 ಪಂದ್ಯಗಳನ್ನು ಮೊದಲ ಸುತ್ತಿನಲ್ಲೇ ಅಂತ್ಯಗೊಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications