Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊರೊನಾ ವೈರಸ್‌ ವಿರುದ್ಧದ ಹೋರಾಟ ನಡೆಸುತ್ತಿದ್ದಾರೆ ಮಿಲ್ಖಾ ಸಿಂಗ್ ಪುತ್ರಿ

Milkha Singhs Daughter Runs Her Own Marathon As Coronavirus Warrior

ಕೊರೊನಾ ವೈರಸ್‌ ವಿರುದ್ಧದ ಎಲ್ಲಾ ದೇಶಗಳು ಹೋರಾಡುತ್ತಿದ್ದರೂ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಅಮೇರಿಕಾದಲ್ಲಿ ನಿತ್ಯವೂ ಸಾವಿರ ಸಾವಿರ ಸಂಖ್ಯೆಯಲ್ಲಿ ಈ ಮಾರಣಾಂತಿಕ ರೋಗಕ್ಕೆ ಜಿವ ಕಳೆದುಕೊಳ್ಳುತ್ತಿದ್ದಾರೆ. ಇಂತಾ ಸಂದರ್ಭದಲ್ಲಿ ಭಾರತದ ಹೆಮ್ಮೆಯ ಆಥ್ಲೀಟ್ ಮಿಲ್ಖಾ ಸಿಂಗ್ ಪುತ್ರಿ ಮೋನಾ ಸಿಂಗ್ ಕೊರೊನಾ ವೈರಸ್ ವಿರುದ್ಧ ನೇರ ಕಾದಾಟಕ್ಕಿಳಿದಿದ್ದಾರೆ.

ಅಮೆರಿಕಾದಲ್ಲಿ ಕಳೆದ 20 ವರ್ಷಗಳಿಂದ ಮೋನಾ ಸಿಂಗ್ ವೈದ್ಯಕೀಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಈಗ ಆಕೆ ನ್ಯೂಯಾರ್ಕ್‌ನ ಆಸ್ಪತ್ರೆಯಲ್ಲಿ ಕೊರೊನಾ ವೈರಸ್‌ ಲಕ್ಷಣಗಳಿಂದ ದಾಖಲಾಗುವ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಈ ವಿಚಾರವನ್ನು ಮಿಲ್ಖಾ ಸಿಂಗ್ ಅವರ ಇನ್ನೋರ್ವ ಪುತ್ರ ಖ್ಯಾತ ಗಾಲ್ಫರ್ ಜೀವ್ ಮಿಲ್ಖಾ ಸಿಂಗ್ ಹೇಳಿದ್ದಾರೆ.

"ಮೋನಾ ಸಿಂಗ್ ನ್ಯೂಯಾರ್ಕ್‌ನ ಮೆಟ್ರೋಪಾಲಿಟನ್ ಆಸ್ಪತ್ರೆಯ ತುರ್ತು ವಾರ್ಡ್‌ನಲ್ಲಿ ವೈದ್ಯೆಯಾಗಿ ಕರ್ತವ್ಯದಲ್ಲಿದ್ದು ಕರೋನಾ ವೈರಸ್ ಲಕ್ಷಣಗಳನ್ನು ಹೊಂದಿರುವ ರೋಗಿಗಳು ಬಂದಾಗಲೆಲ್ಲಾ ಅವರಿಗೆ ಚಿಕಿತ್ಸೆ ನೀಡಬೇಕಾಗುತ್ತದೆ" ಎಂದು ಹೇಳಿದರು. 54 ವರ್ಷದ ಮೋನಾ ಸಿಂಗ್ ಪಟಿಯಾಲ ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿ 90 ರ ದಶಕದಿಂದ ಯುಎಸ್ ನಲ್ಲಿ ನೆಲೆಸಿದ್ದಾರೆ.

ಸೋದರಿಯ ಕರ್ತವ್ಯದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ ಜೀವ್ ಮಿಲ್ಖಾ ಸಿಂಗ್ 'ನಾನು ಆಕೆಯ ಬಗ್ಗೆ ಹೆಮ್ಮೆಪಡುತ್ತೇನೆ, ಅವಳು ಪ್ರತಿದಿನ ಮ್ಯಾರಥಾನ್ ಓಡುತ್ತಿದ್ದಾಳೆ, ಅವಳು ವಾರದಲ್ಲಿ ಐದು ದಿನರಾತ್ರಿ ಹಗಲೆನ್ನದೆ ಕರ್ತ್ಯ ನಿರ್ವಹಿಸುತ್ತಿದ್ದಾಳೆ, ಜನರಿಗೆ ಚಿಕಿತ್ಸೆ ನೀಡುವಾಗ ಏನು ಬೇಕಾದರೂ ಆಗಬಹುದು, ಹೀಗಾಗಿ ಆಕೆಯ ಆರೋಗ್ಯದ ಬಗ್ಗೆ ಚಿಂತೆಯೂ ಆಗುತ್ತದೆ ಎಂದು ಹೇಳಿದ್ದಾರೆ.

ಅಮೆರಿಕಾದಲ್ಲಿ ಕೊರೋನಾ ಮಹಾಮಾರಿಗೆ ಇಲ್ಲಿಯವರೆಗೂ 40 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರೆ ಜಗತ್ತಿನಾದ್ಯಂತ 1,66,000 ಮಂದಿ ಮೃತಪಟ್ಟಿದ್ದಾರೆ.

Story first published: Monday, April 20, 2020, 21:49 [IST]
Other articles published on Apr 20, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+