For Quick Alerts
ALLOW NOTIFICATIONS  
For Daily Alerts

ಮಿಲ್ಖಾ ಸಿಂಗ್‌ರ ಪತ್ನಿ ನಿರ್ಮಲಾ ಕೌರ್ ಕೋವಿಡ್‌-19ಗೆ ಬಲಿ

Milkha Singhs Wife Nirmal Dies Due To COVID-19 Complications

ಚಂಡೀಗಢ: ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್‌ ಅವರ ಪತ್ನಿ, ಭಾರತ ವಾಲಿಬಾಲ್ ತಂಡದ ನಾಯಕಿಯಾಗಿದ್ದ ನಿರ್ಮಲಾ ಕೌರ್ ಕೋವಿಡ್-19ನಿಂದಾಗಿ ಸಾವನ್ನಪ್ಪಿದ್ದಾರೆ. ಮೊಹಾಲಿ ಆಸ್ಪತ್ರೆಗೆ ದಾಖಲಾಗಿದ್ದ ನಿರ್ಮಲಾ ಕೋವಿಡ್-19 ಸಂಬಂಧಿ ಸಮಸ್ಯೆಗೆ ಬಲಿಯಾಗಿದ್ದಾರೆ.

85ರ ಹರೆಯದ ನಿರ್ಮಲಾ ಕೌರ್ ಅವರು ಪತಿ ಮಿಲ್ಖಾ ಸಿಂಗ್, ಒಬ್ಬ ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಕಳೆದ ತಿಂಗಳು ನಿರ್ಮಲಾಗೆ ಕೋವಿಡ್-19 ಸೋಂಕು ತಗುಲಿತ್ತು. ಮಿಲ್ಖಾ ಈಗಲೂ ಇಂಟೆನ್ಸಿವ್ ಕೇರ್ ಯುನಿಟ್ (ಐಸಿಯು)ನಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಲೇ ಇದ್ದಾರೆ.

'ನಿರ್ಮಲಾ ಮಿಲ್ಖಾ ಸಿಂಗ್ ಅವರು ಇಂದು (ಜೂನ್ 13) ಸಂಜೆ 4 PMಗೆ ಕೋವಿಡ್-19 ಕಾರಣ ಮೃತರಾಗಿದ್ದಾರೆ ಎಂದು ತಿಳಿಸಲು ತೀವ್ರ ದುಃಖವಾಗುತ್ತಿದೆ,' ಎಂದು ಮಿಲ್ಖಾ ಸಿಂಗ್ ಕುಟುಂಬದ ವಕ್ತಾರರು ತಿಳಿಸಿದ್ದಾರೆ. ಪತ್ನಿಯ ಅಂತಿಮ ಸಂಸ್ಕಾರದಲ್ಲಿ ಪತಿ ಮಿಲ್ಖಾಗೂ ಭಾಗವಹಿಸಲು ಸಾಧ್ಯವಾಗದಿರುವುದು ದುರಂತ.

ಐಸಿಯುನಲ್ಲಿರುವ ಮಿಲ್ಖಾ ಸಿಂಗ್ ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ. ಸಿಂಗ್ ಕೊಂಚ ಕೊಂಚ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಿಲ್ಖಾ ಏಷ್ಯನ್ ಗೇಮ್ಸ್‌ನಲ್ಲಿ 4 ಬಾರಿ ಚಿನ್ನದ ಪದಕ ಗೆದ್ದಿದ್ದರು.

Story first published: Monday, June 14, 2021, 9:05 [IST]
Other articles published on Jun 14, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+