ಕಾಮನ್ವೆಲ್ತ್ ಸೀನಿಯರ್ ವೇಟ್‌ಲಿಫ್ಟಿಂಗ್: ಮೀರಾಬಾಯಿ ಚಾನುಗೆ ಚಿನ್ನ

ಅಪಿಯಾ, ಜುಲೈ 9: ಸಮೋವಾದ ಅಪಿಯಾದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ವೇಟ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್, ಭಾರತದ ಮೀರಾಬಾಯಿ ಚಾನು ಬಂಗಾರದ ಪದಕ ಗೆದ್ದಿದ್ದಾರೆ. ಮಂಗಳವಾರ (ಜುಲೈ 9) ಆರಂಭದ ದಿನವೇ ಬಂಗಾರ ಸೇರಿ ಭಾರತ ಒಟ್ಟು 10ಕ್ಕೂ ಮಿಕ್ಕಿ ಪದಕಗಳನ್ನು ಗೆದ್ದಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಕೊಳ್ಳುವ ನಿಟ್ಟಿನಲ್ಲೂ ನಡೆದ ಈ ಕ್ರೀಡಾಕೂಟದ ಹಿರಿಯ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಸ್ಪರ್ದಿಸಿದ್ದ ಮಿರಾಬಾಯಿ, 84 ಕೆಜಿ + 107 ಕೆಜಿ ಸೇರಿ ಒಟ್ಟು 191 ಕೆಜಿ ಭಾರ ಎತ್ತುವ ಮೂಲಕ ಚಿನ್ನ ಕೊರಳೇರಿಸಿಕೊಂಡಿದ್ದಾರೆ. ಸ್ಪರ್ಧೆಯಲ್ಲಿ ಗಳಿಸಿದ ಅಂಕ ಮತ್ತು ರ್ಯಾಂಕಿಂಗ್ ಆಧಾರದಲ್ಲಿ ಒಲಿಂಪಿಕ್ಸ್ ಪ್ರವೇಶ ನಿರ್ಧಾರವಾಗಲಿದೆ.
ನಿಂಗ್ಬೋನಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಈ ಹಿಂದೆ ಸ್ಪರ್ಧಿಸಿದ್ದ ಮೀರಾಬಾಯಿ, 199 ಕೆಜಿ (86 ಕೆಜಿ + 113 ಕೆಜಿ) ಎತ್ತಿದ್ದರಾದರೂ ಕೂಡಲೆಳೆ ಅಂತರದಲ್ಲಿ ಪದಕವನ್ನು ಕಳೆದುಕೊಂಡಿದ್ದರು. 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಯನ್ನು 18 ತಿಂಗಳುಗಳ ಅಂತರದಲ್ಲಿ ನಡೆವ 6 ಪ್ರಮುಖ ಕ್ರೀಡಾಕೂಟಗಳಲ್ಲಿನ ಪ್ರದರ್ಶನವನ್ನು ಪರಿಗಣಿಸಿ ನಿರ್ಧರಿಸಲಾಗುತ್ತದೆ.
ಮಹಿಳಾ 45ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಝಿಲ್ಲಿ ದಲಾಬೆಹ್ರಾ ಕೂಡ 154 ಕೆಜಿ (70 ಕೆಜಿ + 94 ಕೆಜಿ) ಭಾರ ಎತ್ತಿ ಬಂಗಾರ ಗೆದ್ದಿದ್ದಾರೆ. ಇನ್ನು ಮಹಿಳಾ 55 ಕೆಜಿ ವಿಭಾಗದಲ್ಲಿ ಸೊರೈಖೈಬಾಮ್ ಬಿಂದ್ಯಾರಾಣಿ ದೇವಿ ಮತ್ತು ಮಾಸ್ತ ಸಂತೋಷಿ ಕ್ರಮವಾಗಿ ಚಿನ್ನ, ಬೆಳ್ಳಿ ಜಯಿಸಿದ್ದಾರೆ. ಸೀನಿಯರ್, ಜೂನಿಯರ್, ಯೂತ್ ಕೆಟಗರಿಗಳಲ್ಲಿ 8 ಬಂಗಾರ, 3 ಬೆಳ್ಳಿ ಮತ್ತು 2 ಕಂಚು ಸೇರಿ ಒಟ್ಟು 13 ಪದಕಗಳು ಭಾರತದ ಪಾಲಾಗಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications