ಅಸ್ಸಾಂನ ಅಥ್ಲೀಟ್ ಹಿಮಾ ಸಾಧನೆ ಹೊಗಳಿದ ಪ್ರಧಾನಿ ಮೋದಿ!
ನವದೆಹಲಿ, ಜುಲೈ 13: ಭಾರತದ ಅಥ್ಲೀಟ್, ಅಸ್ಸಾಂ ಮೂಲದ ಹಿಮಾ ದಾಸ್ ಅವರ ಐತಿಹಾಸಿಕ ಸಾಧನೆಯನ್ನು ಮೆಚ್ಚಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಗಣ್ಯಾತಿಗಣ್ಯರು, ಸಾರ್ವಜನಿಕರು ಶುಭಾಶಯ ಮಳೆ ಹರಿಸಿದ್ದಾರೆ.
ಐಎಎಎಫ್ ಅಂಡರ್ 20 ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಮಹಿಳೆಯರ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿರುವ ಹಿಮಾ -ಭಾರತದ ಹೆಮ್ಮೆ, ಭವಿಷ್ಯದ ತಾರೆ ಎಂದು ಕೊಂಡಾಡಲಾಗಿದೆ.
ಬುಧವಾರದಂದು ನಡೆದ ಸೆಮಿಫೈನಲ್ ಹೀಟ್ಸ್ ನಲ್ಲೇ ಹಿಮಾ ಅವರು ಅತ್ಯಂತ ವೇಗವಾಗಿ ಓಡಿ, ಅರ್ಹತೆ ಪಡೆದುಕೊಂಡಿದ್ದರು. ಗುರುವಾರದಂದು ನಡೆದ ಫೈನಲ್ ಓಟದಲ್ಲಿ 400 ಮೀಟರ್ ದೂರವನ್ನು 51.46 ಸೆಕೆಂಡುಗಳಲ್ಲಿ ಕ್ರಮಿಸಿ ಹೊಸ ಟ್ರಾಕ್ ಇವೆಂಟ್ ದಾಖಲೆ ಬರೆದರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡರು.

ಗಣ್ಯಾತಿಗಣ್ಯರು, ಸಾರ್ವಜನಿಕರಿಂದ ಶುಭಾಶಯ
ಗುರುವಾರದಂದು ನಡೆದ ಫೈನಲ್ ಓಟದಲ್ಲಿ 400 ಮೀಟರ್ ದೂರವನ್ನು 51.46 ಸೆಕೆಂಡುಗಳಲ್ಲಿ ಕ್ರಮಿಸಿ ಹೊಸ ಟ್ರಾಕ್ ಇವೆಂಟ್ ದಾಖಲೆ ಬರೆದರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡರು.
ಮೋದಿ ಟ್ವೀಟ್
ನಿಮ್ಮ ಸಾಧನೆಯಿಂದ ಭಾರತವು ಸಂತಸ ಹಾಗೂ ಹೆಮ್ಮೆ ಪಡುತ್ತಿದೆ. ವಿಶ್ವ ಅಂಡರ್ 20 ಚಾಂಪಿಯನ್ ಶಿಪ್ ನಲ್ಲಿ ನೀವು 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದೀರಿ, ನಿಮ್ಮ ಸಾಧನೆ ಇನ್ನಷ್ಟು ಯುವ ಅಥ್ಲೀಟ್ ಗಳಿಗೆ ಸ್ಫೂರ್ತಿ ತರಲಿ
ಐಎಎಎಫ್ ಅಂಡರ್ 20 ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್
ಐಎಎಎಫ್ ಅಂಡರ್ 20 ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಮಹಿಳೆಯರ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿರುವ ಹಿಮಾ -ಭಾರತದ ಹೆಮ್ಮೆ, ಭವಿಷ್ಯದ ತಾರೆ ಎಂದು ಕೊಂಡಾಡಲಾಗಿದೆ.
ಫುಟ್ಬಾಲರ್ ಸುನೀಲ್ ಛೆಟ್ರಿ
ಹಿಮಾದಾಸ್ ಅವರು ಗೆದ್ದಿದ್ದು ಬರೀ ಪದಕವಲ್ಲ, ಭಾರತಕ್ಕೆ ಹೊಸ ಹುರುಪು, ಭವಿಷ್ಯವನ್ನು ಮೂಡಿಸಿದ್ದೀರಿ ಎಂದು ಚಾಂಪಿಯನ್ ಹಿಮಾದಾಸ್ ಅವರನ್ನು ಫುಟ್ಬಾಲರ್ ಸುನೀಲ್ ಛೆಟ್ರಿ ಹೊಗಳಿದ್ದಾರೆ.
ಹಿಮಾದಾಸ್ ಅವರಿಗೆ ಶುಭ ಹಾರೈಕೆ
ಹಿಮಾದಾಸ್ ಅವರು ಅಂಡರ್ 20 ಚಾಂಪಿಯನ್ ಶಿಪ್ ಅವರು 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದು, ಈ ಸಾಧನೆ ಮಾಡಿದ ಮೊದಲಿಗರಾಗಿದ್ದೀರಿ.ಅಸ್ಸಾಂ, ಭಾರತದ ಹೆಮ್ಮೆ, ಒಲಿಂಪಿಕ್ಸ್ ನಲ್ಲಿ ಸಾಧನೆ ಮುಂದುವರೆಸಿ ಎಂದ ರಾಷ್ಟ್ರಪತಿ ಭವನದ ಟ್ವೀಟ್
ಹಿಮಾ ಸಾಧನೆ ಹೊಗಳಿದ ಸೆಹ್ವಾಗ್
ಹಿಮಾ ನಿಮ್ಮ ಸಾಧನೆ ಐತಿಹಾಸಿಕ, ಜಾಗತಿಕ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದೀರಿ. ಮಹಿಳೆಯರ 400 ಮೀಟರ್ ಅಂಡರ್ 20 ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದಿರುವುದು ಅದರಲ್ಲೂ 51.47 ಸೆಕೆಂಡುಗಳಲ್ಲಿ ಕ್ರಮಿಸಿರುವುದು ದೊಡ್ಡ ಸಾಧನೆ ಎಂದ ಮಾಜಿ ಕ್ರಿಕೆಟರ್ ಸೆಹ್ವಾಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications