ರೇಸಿಂಗ್ ದಿಗ್ಗಜ ನಿಕ್ಕಿ ಹೇಡನ್ ದುರಂತ ಸಾವು
ರೋಮ್, ಮೇ 23 : ಮೋಟೋಜಿಪಿ ಸೂಪರ್ ಬೈಕ್ ರೇಸರ್ ಅಮೆರಿಕದ ನಿಕ್ಕಿ ಹೇಡನ್ ಅವರು ಅಪಘಾತಕ್ಕೀಡಾಗಿ ದುರ್ಮರಣ ಹೊಂದಿದ್ದಾರೆ. 35 ವರ್ಷ ವಯಸ್ಸಿನ ಸಾಧಕನ ಸಾವಿಗೆ ಕ್ರೀಡಾಲೋಕ ಕಂಬನಿ ಮಿಡಿದಿದೆ.
ಮೇ 17ರಂದು ರಿವೇರಾ ಡಿ ರಿಮಿನಿಯಲ್ಲಿ ಸೈಕ್ಲಿಂಗ್ ಮಾಡುವಾಗ ಕಾರು ಗುದ್ದಿ ತೀವ್ರವಾಗಿ ಗಾಯಗೊಂಡಿದ್ದ ನಿಕ್ಕಿ ಅವರು ಸೋಮವಾರ(ಮೇ 22) ತಡರಾತ್ರಿ ಮೃತಪಟ್ಟಿದ್ದಾರೆ. ಸಿಸೇನಾದ ಬುಫಲಿನಿ ಆಸ್ಪತ್ರೆಯಲ್ಲಿ ನೀಡಿದ ಚಿಕಿತ್ಸೆ ಫಲಕಾರಿಯಾಗಲಿಲ್ಲ.

'ಕೆಂಟುಕಿ ಕಿಡ್' ಎಂದು ಪ್ರೀತಿ, ಅಭಿಮಾನದಿಂದ ಕರೆಸಿಕೊಳ್ಳುತ್ತಿದ್ದ ನಿಕ್ಕಿ ಅವರು ಸೂಪರ್ ಬೈಕ್ ರೇಸಿಂಗ್ ಕ್ಷೇತ್ರದಲ್ಲಿ ಜನಪ್ರಿಯ ರೇಸರ್ ಆಗಿದ್ದರು. ಮೇ 14ರಂದು ಇಟಲಿಯಲ್ಲಿ ವಿಶ್ವ ಸೂಪರ್ ಬೈಕ್ ಚಾಂಪಿಯನ್ ಶಿಪ್ ನಲ್ಲಿ ರೆಡ್ ಬುಲ್ ಹೋಂಡಾ ಪರ ಸ್ಪರ್ಧಿಸಿದ್ದರು.
ಅಮೆರಿಕನ್ನರ ಹೆಮ್ಮೆಯ ರೇಸರ್: ಮೋಟೋ ಗ್ರಾನ್ ಪ್ರೀಯಲ್ಲಿ ಇಟಲಿ, ಜರ್ಮನಿಯನ್ನರ ಪ್ರಾಬಲ್ಯಕ್ಕೆ ಪೆಟ್ಟುಕೊಟ್ಟು ಮೊದಲ ಬಾರಿಗೆ ಅಮೆರಿಕನ್ನರದಲ್ಲಿ ಹುಚ್ಚು ಹಬ್ಬಿಸಿದ್ದು ನಿಕ್ಕಿ ಹೇಡನ್. 2003ರಲ್ಲಿ ಮೋಟೋ ಜಿಪಿಯಲ್ಲಿ ಮೊದಲ ರೇಸಿಂಗ್ ಅನುಭವ ಪಡೆದ ನಿಕ್ಕಿ ಅವರು ಮೋಟೋಜಿಪಿ ದಿಗ್ಗಜ ವ್ಯಾಲೆಂಟಿನೋ ರೊಸ್ಸಿ ಅವರ ಐದು ವರ್ಷಗಳ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದರು.
Story first published: Wednesday, January 3, 2018, 10:16 [IST]
Other articles published on Jan 3, 2018
Read in English: MotoGP legend Nicky Hayden passes away
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications