ಅಮೆರಿಕಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ. ಇಷ್ಟು ಮಾತ್ರವಲ್ಲದೆ ವಿಭಿನ್ನ ಕ್ಷೇತ್ರಗಳ ಇಬ್ಬರು ದಿಗ್ಗಜರು ಗಾಲ್ಫ್ ಆಡುವ ಮೂಲಕ ಕೆಲ ಸಮಯವನ್ನು ಕಳೆದಿದ್ದಾರೆ. ಮಾಜಿ ಯುಎಸ್ ಅಧ್ಯಕ್ಷರ ಆಹ್ವಾನದ ಮೇರೆಗೆ ಈ ಭೇಟಿ ನಡೆದಿದೆ ಎಂದು ವರದಿಯಾಗಿದೆ.
ಎಂಎಸ್ ಧೋನಿ ಹಾಗೂ ಡೊನಾಲ್ಡ್ ಟ್ರಂಪ್ ಇಬ್ಬರು ಕೂಡ ಗಾಲ್ಫ್ ಧಿರಿಸಿನಲ್ಲಿಯೇ ಫೋಟೊಗೆ ಫೋಸ್ ನೀಡಿದ್ದು ಈ ಫೋಟೋ ಈಗ ಸಾಕಷ್ಟು ವೈರಲ್ ಆಗಿದೆ. ಧೋನಿ ತಮ್ಮ ಟ್ರೇಡ್‌ಮಾರ್ಕ್ ಉದ್ದದ ಹೇರ್‌ಸ್ಟೈಲ್‌ನೊಂದಿಗೆ ಕಾಣಿಸಿಕೊಂಡಿದ್ದರೆ ಟ್ರಂಪ್ ಕೆಂಪು ಟೋಫಿ ಜೊತೆಗೆ ಪೋಸ್ ನೀಡಿದ್ದಾರೆ.

ಟೀಮ್ ಇಂಡಿಯಾದ ನಾಯಕ ಎಂಎಸ್ ಧೋನಿ ಹಾಗೂ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಬ್ಬರು ಕೂಡ ಸಂಪೂರ್ಣವಾಗಿ ವಿಭಿನ್ನವಾದ ವ್ಯಕ್ತಿತ್ವದವರು. ಮಾಹಿ ಮೈದಾನದಲ್ಲಿ ಹಾಗೂ ಮೂದಾನದಾಚೆಯೂ ತಾಳ್ಮೆಯ ವ್ಯಕ್ತಿತ್ವಕ್ಕೆ ಹೆಸರಾಗಿದ್ದರೆ ಡೊನಾಲ್ಡ್ ಟ್ರಂಪ್ ಅಮೆರಿಕಾ ರಾಜಕೀಯದ ಕೇಂದ್ರಬಿಂದುವಾಗಿದ್ದು ಯಾವಾಗಲೂ ಹೇಳಿಕೆ, ವಿವಾದ ಹಾಗೂ ನಿಲುವುಗಳಿಂದಾಗಿ ಸುದ್ದಿಯಾಗುತ್ತಲೇ ಇರುತ್ತಾರೆ.
ಇನ್ನು ಡೊನಾಲ್ಡ್ ಟ್ರಂಫ್ ಹಾಗೂ ಎಂಎಸ್ ಧೋನಿ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಟ್ವಿಟ್ಟರ್ ಬಳಕೆದಾರರೊಬ್ಬರು "ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಫ್ ಅವರು ಎಂಎಸ್ ಧೋನಿ ಅವರಿಗಾಗಿ ಗಾಲ್ಪ್ ಪಂದ್ಯಕ್ಕೆ ಆತಿಥ್ಯವಹಿಸಿದ್ದಾರೆ. ಯುಎಸ್‌ಎಯಲ್ಲಿ ತಾಲಾ ಫಿವರ್" ಎಂದು ಬರೆದುಕೊಂಡಿದ್ದಾರೆ.
ಇನ್ನು ಇದಕ್ಕೂ ಮುನ್ನ ಎಂಎಸ್ ಧೋನಿ ಯುಎಸ್ ಓಪನ್ ಟೆನಿಸ್ ಟೂರ್ನಿಯನ್ನು ವೀಕ್ಷಿಸಿದ್ದರು. ಕಾರ್ಲೋಸ್ ಅಲ್ಕರೇಜ್ ಹಾಗೂ ಅಲೆಕ್ಸಾಂಡರ್ ಜ್ವರೇವ್ ವಿರುದ್ಧದ ಯುಎಸ್ ಓಪನ್‌ನ ಕ್ವಾರ್ಟರ್ ಫೈನಲ್ ಪಂದ್ಯವನ್ನು ಎಂಎಸ್ ಧೋನಿ ವೀಕ್ಷಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಮಾಣದಲ್ಲಿ ವೈರಲ್ ಆಗಿತ್ತು. ಆದಾದ ಬಳಿಕ ಇದೀಗ ಧೋನಿ ಅಮೆರಿಕಾದ ಮಾಜಿ ಅಧ್ಯಕ್ಷರ ಜೊತೆಗೆ ಗಾಲ್ಫ್ ಆಡುವ ಮೂಲಕ ಸುದ್ದಿಯಾಗಿದ್ದಾರೆ.