Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಿಷಭ್ ಪಂತ್ ಸಹೋದರಿ ನಿಶ್ಚಿತಾರ್ಥ ಪಾರ್ಟಿಯಲ್ಲಿ ಕ್ಯಾಪ್ಟನ್ ಕೂಲ್; ಹಾಸ್ಯದಲ್ಲಿ ಆಶೀರ್ವಾದ ಮಾಡಿದ ಧೋನಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಸಿಎಸ್‌ಕೆ ತಂಡದ ನಾಯಕ ಎಂಎಸ್ ಧೋನಿ ಅವರು ತಮ್ಮ ನಾಯಕತ್ವ ಕೌಶಲ್ಯ ಮತ್ತು ಮೈದಾನದಲ್ಲಿ ತಾಳ್ಮೆಯಿಂದಾಗಿ ಕ್ರಿಕೆಟ್ ಜಗತ್ತಿನಾದ್ಯಂತ ಹೆಸರುವಾಸಿಯಾಗಿದ್ದಾರೆ.

ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡ 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ ಟ್ರೋಫಿ ಸೇರಿದಂತೆ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದಿದೆ.

MS Dhoni Attended At Rishabh Pants Sister Engagement Party


ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಯಶಸ್ಸಿನಲ್ಲಿ ಎಂಎಸ್ ಧೋನಿ ಅಪಾರ ಕೊಡುಗೆ ನೀಡಿದ್ದಾರೆ.

42 ವರ್ಷದ ವಿಕೆಟ್‌ಕೀಪರ್-ಬ್ಯಾಟರ್ ಎಂಎಸ್ ಧೋನಿ ಅವರ ವರ್ಚಸ್ವಿ ವ್ಯಕ್ತಿತ್ವ ಮತ್ತು ಹಾಸ್ಯದ ಸ್ವಭಾವಕ್ಕಾಗಿ ಬಹಳ ಜನಪ್ರಿಯ ಆಟಗಾರನಾಗಿದ್ದಾರೆ. ಇದೀಗ ಅವರ ಹಾಸ್ಯದ ಅತ್ಯುತ್ತಮ ಉದಾಹರಣೆ ಇತ್ತೀಚೆಗೆ ಸಹ ಆಟಗಾರ ರಿಷಭ್ ಪಂತ್ ಅವರ ಸಹೋದರಿಯ ನಿಶ್ಚಿತಾರ್ಥದ ಪಾರ್ಟಿಯಲ್ಲಿ ಕಂಡುಬಂದಿದೆ.

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಎಂಎಸ್ ಧೋನಿ ಅವರು ಹುಕ್ಕಾ ಸೇದಿರುವ ವಿಡಿಯೋ ವೈರಲ್ ಆಗಿತ್ತು. ಅದು ಭಾರತ ತಂಡದ ಕ್ರಿಕೆಟಿಗ ರಿಷಭ್ ಪಂತ್ ಸಹೋದರಿಯ ನಿಶ್ಚಿತಾರ್ಥ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂಬುದು ಇದೀಗ ಬಹಿರಂಗವಾಗಿದೆ.

ಇನ್ನು ರಿಷಭ್ ಪಂತ್ ಸಹೋದರಿ ಸಾಕ್ಷಿ ಪಂತ್ ದಂಪತಿಗೆ ಎಂಎಸ್ ಧೋನಿ ತಮ್ಮದೇ ಆದ ಹಾಸ್ಯದ ಶೈಲಿಯಲ್ಲಿ ಆಶೀರ್ವದಿಸಿದರು.

"ಅವರು ತುಂಬಾ ಸಂತೋಷವಾಗಿದ್ದಾರೆ, ಅವರು ತುಂಬಾ ಉತ್ಸುಕರಾಗಿದ್ದಾರೆ, ಚೆನ್ನಾಗಿ ನೃತ್ಯ ಮಾಡಿದ್ದಾರೆ. ಇಬ್ಬರೂ ಚೆನ್ನಾಗಿ ಜೊತೆಯಾಗುತ್ತಾರೆ, ಮುಂಬರುವ ಸವಾಲಿನ ಸಮಯಕ್ಕಾಗಿ ನಾನು ಅವರಿಗೆ ಶುಭ ಹಾರೈಸುತ್ತೇನೆ. ಅಂದರೆ, ವೃತ್ತಿ ದೃಷ್ಟಿಕೋನದಿಂದ," ಎಂದು ಎಂಎಸ್ ಧೋನಿ ಹೇಳಿದರು.

ಮೊನ್ನೆಯಷ್ಟೇ ಪಾರ್ಟಿಯೊಂದರಲ್ಲಿ ಎಂಎಸ್ ಧೋನಿ ಹುಕ್ಕಾ ಸೇದುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕ್ರಿಕೆಟ್ ಹಾಗೂ ಅವರ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದರು.

ಕೈಯಲ್ಲಿ ಹುಕ್ಕಾ ಪೈಪ್‌ನೊಂದಿಗೆ ಸೂಟ್‌ ಧರಿಸಿರುವುದನ್ನು ಮತ್ತು ಹುಕ್ಕಾ ಸೇದಿ ಹೊಗೆ ಬಿಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಸಂದರ್ಭ ಏನೆಂದು ನಿಖರವಾಗಿ ತಿಳಿದಿಲ್ಲವಾದರೂ, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹೊಸ ವರ್ಷದ ಪಾರ್ಟಿಯಲ್ಲಿ ಭಾಗವಹಿಸಿರಬಹುದು ಎನ್ನಲಾಗುತ್ತಿದೆ.

ಎಂಎಸ್ ಧೋನಿ ಮುಂದಿನ 2024ರ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ, ಇದು ಟಿ20 ಲೀಗ್‌ನಲ್ಲಿ ಅವರ ಕೊನೆಯ ಅಭಿಯಾನವಾಗುವ ಎಲ್ಲಾ ಸಾಧ್ಯತೆ ಇದೆ.

Story first published: Monday, January 8, 2024, 16:26 [IST]
Other articles published on Jan 8, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+