ಚಂದ್ರಯಾನ-3 ಐತಿಹಾಸಿಕ ಕ್ಷಣ ಕಣ್ತುಂಬಿಕೊಂಡ ಧೋನಿ: ವಿಡಿಯೋ ವೈರಲ್
ಬುಧವಾರ ಸಂಜೆ ಇಡೀ ಭಾರತದ ಚಿತ್ತ ಒಂದೇ ಕಡೆ ನೆಟ್ಟಿತ್ತು. ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಬಹುನಿರೀಕ್ಷಿತ ಯೋಜನೆಯಾದ ಚಂದ್ರಯಾನ 3 ಯಶಸ್ಸಿನ ನಿರ್ಣಾಯಕಘಟ್ಟಕ್ಕೆ ಹತ್ತಿರವಾಗಿದ್ದ ಕಾರಣ ಇದರ ಯಶಸ್ಸನ್ನು ಕಣ್ತುಂಬಿಕೊಳ್ಳಲು ಭಾರತೀಯರು ಟಿವಿ, ಫೋನ್ ಮುಂದೆ ಸ್ಥಬ್ಧವಾಗಿದ್ದರು. ಕೋಟ್ಯಂತರ ಭಾರತೀಯರಂತೆಯೇ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಕೂಡ ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ.
ಆದರೆ ಐತಿಹಾಸಿಕ ಕ್ಷಣ ಸಂಜೆ 6:04ಕ್ಕೆ ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನನ್ನು ಸ್ಪರ್ಶಿಸಿದಾಗ ಧೋನಿ ಎಂದಿನಂತೆಯೇ ಶಾಂತಚಿತ್ತದಿಂದ ಪ್ರತಿಕ್ರಿಯಿಸಿದ್ದಾರೆ. ಕ್ರಿಕೆಟ್ ಪಿಚ್‌ನಲ್ಲಿ ಮತ್ತು ಹೊರಗೆ ಸದಾ ಶಾಂತ ಮತ್ತು ಸಂಯೋಜಿತ ವರ್ತನೆಗೆ ಹೆಸರುವಾಸಿಯಾಗಿರುವ ಧೋನಿ ಈ ಸಂದರ್ಭದಲ್ಲಿಯೂ ಸಂಪೂರ್ಣವಾಗಿ ಮಗ್ನವಾಗಿ ಟಿವಿಯತ್ತ ನೋಡುತ್ತಾ ನಿಂತುಕೊಂಡೇ ಆನಂದಿಸುತ್ತಿದ್ದರು. ಧೋನಿ ಅವರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಬುಧವಾರ ಸಂಜೆ 6:04ರ ಸಮಯದಲ್ಲಿ ಭಾರತದ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದ ಬಳಿ ಸಾಫ್ಟ್ ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸಾಧಿಸಿದ ಮಹತ್ವದ ಮೈಲಿಗಲ್ಲಾಗಿದೆ. ಈ ಗಮನಾರ್ಹ ಸಾಧನೆಯಿಂದಾಗಿ ಚಂದ್ರನ ಮೇಲೆ ಇಳಿದ ಕೇವಲ ನಾಲ್ಕು ರಾಷ್ಟ್ರಗಳ ಗುಂಪಿನಲ್ಲಿ ಭಾರತ ಕೂಡ ಒಂದಾಗಿದೆ. ಅಲ್ಲದೆ ಈವರೆಗೆ ಯಾವ ದೇಶ ಕೂಡ ತಲುಪದ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸ್ಪರ್ಶಿಸಿದ ಏಕೈಕ ದೇಶ ಎನಿಸಿಕೊಂಡಿದೆ ಭಾರತ.
ಈ ಸಂದರ್ಭದಲ್ಲಿ ಧೋನಿ ಸುತ್ತಲಿದ್ದವರು ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿದ್ದರೆ ಧೋನಿ ತದೇಕಚಿತ್ತದಿಂದ ಟಿವಿಯತ್ತ ನೋಡುತ್ತಾ ತೊಡೆಗೆ ಕೈಬಡಿಯುತ್ತಾ ನಿಂತಿದ್ದರು. ಈ ಮೂಲಕ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಕೂಡ ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಇನ್ನು ಮತ್ತೊಂದೆಡೆ ಐರ್ಲೆಂಡ್ ಪ್ರವಾಸದಲ್ಲಿದ್ದ ಜಸ್ಪ್ರೀತ್ ಬೂಮ್ರಾ ನೇತೃತ್ವದ ಟೀಮ್ ಇಂಡಿಯಾ ತಂಡ ಕೂಡ ಈ ಸಂದರ್ಭದಲ್ಲಿ ಮೈದಾನದ ಸನಿಹದಲ್ಲೇ ಟಿವಿಯಲ್ಲಿ ಈ ಕ್ಷಣವನ್ನು ಕಣ್ತುಂಬಿಕೊಂಡಿದ್ದರು.
ಇನ್ನು ಎಂಎಸ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದುಕೊಂಡಿದ್ದರೂ ಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಘಿ ಮುಂದುವರಿದಿದ್ದಾರೆ. ಕಳೆದ 2023ರ ಐಪಿಎಲ್ ಆವೃತ್ತಿ ಸೇರಿದಂತೆ ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ಐದು ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications