ಎಂಎಸ್ ಧೋನಿ ಹೀಗೆ ಮಾಡಬಹುದೇ?; ಹುಕ್ಕಾ ಧೂಮ್ರಪಾನದ ವಿಡಿಯೋ ವೈರಲ್; ಅಭಿಮಾನಿಗಳ ಬೇಸರ!
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕ ಎಂಎಸ್ ಧೋನಿ ಮತ್ತೊಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಆವೃತ್ತಿಗೆ ಸಜ್ಜಾಗುತ್ತಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಮಾಜಿ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಅದರಲ್ಲಿ ಎಂಎಸ್ ಧೋನಿ ಹುಕ್ಕಾ ಸೇದುತ್ತಿರುವುದನ್ನು ಕಂಡುಬರುತ್ತದೆ.

ವೈರಲ್ ಆದ ವಿಡಿಯೋದಲ್ಲಿ, ಸಮಾರಂಭವೊಂದರಲ್ಲಿ ಎರಡು ಬಾರಿ ವಿಶ್ವಕಪ್ ವಿಜೇತ ನಾಯಕ ಎಂಎಸ್ ಧೋನಿ ಹುಕ್ಕಾ ಪೈಪ್‌ನಲ್ಲಿ ಸೇದುವುದು ಮತ್ತು ಹೊಗೆ ಬಿಡುವುದನ್ನು ಕಾಣಬಹುದು.
ಈ ವಿಡಿಯೋ ತೀರಾ ಇತ್ತೀಚಿನದೇ ಅಥವಾ ಹಳೆಯದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಸಾಮಾಜಿಕ ಜಾಲತಾಣ ಬಳಕೆದಾರರು ಈ ವಿಡಿಯೋಗೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಎಂಎಸ್ ಧೋನಿ ಹುಕ್ಕಾ ಸ್ಮೋಕಿಂಗ್ ಮಾಡುತ್ತಿರುವುದನ್ನು ಕಂಡ ಅವರ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ ಮತ್ತು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಆದರ್ಶ ಹಾಗೂ ಆರಾಧ್ಯ ಕ್ರಿಕೆಟಿಗ ಹುಕ್ಕಾ ಧೂಮ್ರಪಾನ ಮಾಡುತ್ತಿರುವುದು ತಪ್ಪು ಎಂದುಕೊಳ್ಳುತ್ತಿದ್ದಾರೆ.
ಫಿಟ್‌ನೆಸ್ ವಿಚಾರದಲ್ಲಿ ಭಾರತದ ಮಾಜಿ ನಾಯಕ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನ ಸೂಪರ್‌ಸ್ಟಾರ್ ಎಂಎಸ್ ಧೋನಿ ತುಂಬಾ ಗಮನಹರಿಸುತ್ತಾರೆ. ಹಿಂದಿನ ಐಪಿಎಲ್ ಆವೃತ್ತಿಯ ವೇಳೆ ಎಂಎಸ್ ಧೋನಿ ಮೊಣಕಾಲಿನ ನೋವಿನಿಂದ ಬಳಲಿದರು ಮತ್ತು ಅದಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೂ, ಎಂಎಸ್ ಧೋನಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಇನ್ನೂ ಆಡುತ್ತಿದ್ದಾರೆ. 42 ವರ್ಷ ವಯಸ್ಸಿನರಾಗಿರುವ ಧೋನಿ, ಇನ್ನೂ ತಮ್ಮ ಫಿಟ್ನೆಸ್ ಮಟ್ಟವನ್ನು ಕಾಯ್ದುಕೊಳ್ಳುತ್ತಾರೆ ಮತ್ತು ಕ್ರಿಕೆಟ್‌ನ ಅತ್ಯುತ್ತಮ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರಾಗಿದ್ದಾರೆ.
ನಾಯಕನಾಗಿ ಎಂಎಸ್ ಧೋನಿಯ ಯಶಸ್ಸಿಗೆ ಒಂದು ಕಾರಣವೆಂದರೆ, ಆಟಗಾರರನ್ನು ಬೆಂಬಲಿಸುವ ಮತ್ತು ಯುವ ಆಟಗಾರರಿಗೆ ಮಿಂಚಲು ಅವಕಾಶವನ್ನು ನೀಡುವ ಕೌಶಲ್ಯ.
ಈ ಹಿಂದೆ ಸಿಎಸ್‌ಕೆಯ ಮಾಜಿ ಸಹ ಆಟಗಾರ ಜಾರ್ಜ್ ಬೈಲಿ ಬಹಿರಂಗಪಡಿಸಿದಂತೆ, ಎಂಎಸ್ ಧೋನಿ ತಮ್ಮ ಆಟಗಾರರೊಂದಿಗೆ ಸಂಪರ್ಕ ಸಾಧಿಸುವ ಮತ್ತು ಯಾವುದೇ ಅಡೆತಡೆಗಳನ್ನು ಒಡೆಯುವ ವಿಶಿಷ್ಟ ಮಾರ್ಗವನ್ನು ಹೊಂದಿದ್ದಾರೆ.
ಆಟಗಾರರಿಗಾಗಿ ಎಂಎಸ್ ಧೋನಿ ತೆರೆದ ಬಾಗಿಲು ನೀತಿಯ ಬಗ್ಗೆ ಜಾರ್ಜ್ ಬೈಲಿ ಮಾತನಾಡಿದ್ದಾರೆ ಮತ್ತು ಧೋನಿ ತಮ್ಮ ಕೋಣೆಯಲ್ಲಿ ಹುಕ್ಕಾ ಸೇದುವ ವಿಚಾರವನ್ನು ಮೊದಲಿಗೆ ಬಹಿರಂಗಪಡಿಸಿದ್ದರು.
ಎಂಎಸ್ ಧೋನಿ 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರೂ, ಅವರು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮುಂಬರುವ ಆವೃತ್ತಿಯು ಅವರ ಕೊನೆಯದಾಗಿರಲಿದೆ ಮತ್ತು ಅನೇಕ ಅಭಿಮಾನಿಗಳು ಪಂದ್ಯಾವಳಿಯ ಆರಂಭವನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications