ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಲೇ ಅಸುನೀಗಿದ ಅಥ್ಲೀಟ್
ಮುಂಬೈ, ಜೂನ್ 29: ಜಿಮ್ ಒಂದರಲ್ಲಿ ವ್ಯಾಯಾಮ ಮಾಡುತ್ತಿದ್ದ ಯುವ ಮಹಿಳಾ ಅಥ್ಲೀಟ್ ಒಬ್ಬರು ವ್ಯಾಯಾಮ ಮಾಡುತ್ತಲೇ ಸುಸ್ತಾಗಿ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.
ಮುಂಬೈನ ನೆಲಸೊಪಾರಾದಲ್ಲಿರುವ ಮಧುಬನ್ ಹೈಟ್ಸ್ ನಲ್ಲಿ ವಾಸವಾಗಿದ್ದ ಝೆನಿಡಾ ಕಾರ್ವಾಲ್ಹೊ (29) ಮೃತ ವ್ಯಕ್ತಿ.

ತಮ್ಮ ಕುಟುಂಬದಲ್ಲಿ ಆದಾಯ ಹೊಂದಿದ್ದ ಏಕೈಕ ವ್ಯಕ್ತಿಯಾಗಿದ್ದ ಝೆನಿಡಾ, ಅವರು ಕೆಲವಾರು ವರ್ಷಗಳಿಂದಲೂ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರು.
ಪೊಲೀಸರ ಪ್ರಕಾರ, ಝೆನಿಡಾ ಅವರು ಗುರುವಾರ ಸಾವಿಗೀಡಾದ ವೇಳೆ ಕ್ಲಿಷ್ಟಕರ ವ್ಯಾಯಾಮವನ್ನೇನೂ ಮಾಡುತ್ತಿರಲಿಲ್ಲ. ಸರಳ ವ್ಯಾಯಾಮಗಳನ್ನೇ ಅಭ್ಯಾಸ ಮಾಡುತ್ತಿದ್ದರು.
ಆದರೆ, ಇದ್ದಕ್ಕಿದ್ದಂತೆ ಕುಸಿದು ಬಿದ್ದ ಅವರನ್ನು ಹತ್ತಿರದಲ್ಲೇ ಇದ್ದ ಜಿಮ್ ಸಿಬ್ಬಂದಿ ಹಾಗೂ ಇತರ ಗ್ರಾಹಕರು ಆಸ್ಪತ್ರೆಗೆ ಸಾಗಿಸಿದರು. ಆದರೆ, ಅಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು ಎಂದು ಹೇಳಲಾಗಿದೆ.
Story first published: Wednesday, January 3, 2018, 10:16 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications