Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಿಎಲ್ಟಿ20: ಹಾಲಿ ಚಾಂಪಿಯನ್ ಮುಂಬೈ ಔಟ್

Mumbai Indians knocked out of CLT20; Knights, Lions qualify
ರಾಯ್‌ಪುರ, ಸೆ.16:: ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಚಾಂಪಿಯನ್ಸ್‌ ಲೀಗ್‌ ಟಿ 20 ಪಂದ್ಯಾವಳಿಯಿಂದ ಹೊರ ಬಿದ್ದಿದೆ. ನ್ಯೂಜಿಲೆಂಡ್ ನ ನಾರ್ದನ್ ನೈಟ್ಸ್ ತಂಡದ ವಿರುದ್ಧ ಸೋಲು ಕಂಡ ಮುಂಬೈ ತಂಡ ಟೂರ್ನಿಯ ಪ್ರಧಾನ ಸುತ್ತು ಪ್ರವೇಶಿಸುವಲ್ಲಿ ವಿಫಲವಾಗಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ. ಇಂದಿನಿಂದ ಅಸಲಿ ಆಟ ಶುರುವಾಗಲಿದ್ದು ,ಚೆನ್ನೈ ಹಾಗೂ ಕೋಲ್ಕತ್ತಾ ಸೆಣಸಾಡಲಿವೆ.

ಮಂಗಳವಾರದ ನಡೆದ ಅಂತಿಮ ಅರ್ಹತಾ ಲೀಗ್‌ ಪಂದ್ಯದಲ್ಲಿ ಪೊಲ್ಲಾರ್ಡ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ನ್ಯೂಜಿಲ್ಯಾಂಡಿನ ನಾರ್ದರ್ನ್ ತಂಡಕ್ಕೆ 6 ವಿಕೆಟ್‌ಗಳಿಂದ ಸೋಲಿಸಿ ಮುಂದಿನ ಹಂತ ಪ್ರವೇಸಿಸಿದೆ. ಎರಡು ಸೋಲು ಕಂಡ ಮುಂಬೈ ತಂಡ ಟೂರ್ನಿಯಿಂದ ಔಟ್ ಆಗಿದೆ.

ಇದಕ್ಕೂ ಮುನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾದ ಸದರನ್ ಎಕ್ಸ್ ಪ್ರೆಸ್ ತಂಡವನ್ನು 55 ರನ್ ಗಳಿಂದ ಸೋಲಿಸಿದ ಪಾಕಿಸ್ತಾನ ಲಾಹೋರ್‌ ಲಯನ್ಸ್‌ ಪ್ರಧಾನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.[ಚುಟುಕು ಕ್ರಿಕೆಟ್ ಮಹಾ ಸಮರ]

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 9 ವಿಕೆಟ್ಟಿಗೆ 133 ರನ್‌ ಗಳಿಸಿದರೆ, ನಾರ್ದರ್ನ್ ಡಿಸ್ಟ್ರಿಕ್ಟ್ 17.2 ಓವರ್‌ಗಳಲ್ಲಿ 4 ವಿಕೆಟಿಗೆ 133 ರನ್‌ ಬಾರಿಸಿ ಜಯಭೇರಿ ಬಾರಿಸಿತು. ಕೇನ್ ವಿಲಿಯಮ್ಸನ್ 36 ಎಸೆತಗಳಲ್ಲಿ 56 ರನ್ ಗಳಿಸಿ ಉತ್ತಮ ಆಟ ಪ್ರದರ್ಶಿಸಿದರು. ಮುಂಬೈ ಪರ ಕನ್ನಡಿಗ ಶ್ರೇಯಸ್ ಗೋಪಾಲ್ 12 ಎಸೆತಗಳಲ್ಲಿ 24 ರನ್ ಚೆಚ್ಚಿದ್ದು ಆಕರ್ಷಕವಾಗಿತ್ತು.

ಕೆಕೆಆರ್ vs ಚೆನ್ನೈ: ಚಾಂಪಿಯನ್ಸ್‌ ಲೀಗ್‌ ಟಿ-20 ಪಂದ್ಯಾವಳಿಯ ಪ್ರಧಾನ ಸುತ್ತಿನ ಸ್ಪರ್ಧೆಗಳು ಬುಧವಾರದಿಂದ ಆರಂಭವಾಗಲಿದೆ. ಐಪಿಎಲ್‌ ಚಾಂಪಿಯನ್‌ ಕೋಲ್ಕತ್ತಾ ನೈಟ್‌ರೈಡರ್ಸ್ ಹಾಗೂ 2010ರ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಹೈದರಾಬಾದಿನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಕೆಕೆಆರ್‌ ಪಾಲಿಗೆ ಇದು 3ನೇ ಚಾಂಪಿಯನ್ಸ್‌ ಲೀಗ್‌ ಪಂದ್ಯಾವಳಿ. ಇದಕ್ಕೂ ಮುನ್ನ 2011 ಹಾಗೂ 2012ರಲ್ಲಿ ಆಡಿತ್ತಾದರೂ ಪ್ರಶಸ್ತಿ ಎತ್ತುವಲ್ಲಿ ವಿಫ‌ಲವಾಗಿತ್ತು. ಚೆನ್ನೈ ಚಾಂಪಿಯನ್ಸ್‌ ಲೀಗ್‌ನಲ್ಲಿ 4 ಬಾರಿ ಕಾಣಿಸಿಕೊಂಡಿದ್ದು 2011ರಲ್ಲಿ ಕಪ್ ಎತ್ತಿತ್ತು.

ಕಳೆದ ಐದು ವರ್ಷಗಳಲ್ಲಿ ನಡೆದಿರುವ ಚಾಂಪಿಯನ್ ಟ್ರೋಫಿಯಲ್ಲಿ ಭಾರತ ಮೂರು ಬಾರಿ ಗೆದ್ದಿರುವುದು ವಿಶೇಷ. 2010, 2011 ಹಾಗೂ 2013ರಲ್ಲಿ ಭಾರತೀಯ ತಂಡಗಳೇ ಚಾಂಪಿಯನ್ ತಂಡಗಳಾಗಿ ಹೊರಹೊಮ್ಮಿವೆ.

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+