ಅಥ್ಲೆಟಿಕ್ಸ್: 50-60 ಪರೀಕ್ಷಾ ಮಾದರಿ ಸಂಗ್ರಹಿಸಲು ಆರಂಭಿಸಿದ ನಾಡಾ

ಗುವಾಹಟಿ, ಜೂ. 27: ನ್ಯಾಷನಲ್ ಆ್ಯಂಟಿ ಡೋಪಿಂಗ್ ಏಜೆನ್ಸಿ (ನಾಡಾ) ತಂಡ ಗುವಾಹಟಿಯಲ್ಲಿ ನಡೆಯುತ್ತಿರುವ 58ನೇ ರಾಷ್ಟ್ರೀಯ ಅಂತಾರಾಜ್ಯ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ 50-60 ಪರೀಕ್ಷಾ ಮಾದರಿಯನ್ನು ಸಂಗ್ರಹಿಸಲು ಶುರು ಮಾಡಿದೆ. ಇಲ್ಲಿಗೆ ಪ್ರಮುಖ ಕ್ರೀಡಾಕೂಟವೊಂದರಲ್ಲಿ ನಾಡಾ ಒಟ್ಟು ಎಷ್ಟು ಟೆಸ್ಟಿಂಗ್ ಸ್ಯಾಂಪಲ್ ಗಳನ್ನು ಸಂಗ್ರಹಿಸಬೇಕು ಎನ್ನುವ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ.
ಮಂಗಳವಾರ ಸಂಜೆಯ ಕ್ರೀಡಾಕೂಟದ ಅವಧಿ ಮುಕ್ತಾಯದವರೆಗೂ ಪದಕ ಗೆಲ್ಲದ ಕ್ರೀಡಾಪಟುಗಳನ್ನೂ ಡೋಪಿಂಗ್ ಟೆಸ್ಟ್ ಗೆ ಸ್ಯಾಂಪಲ್ ಸಂಗ್ರಹಿಸುವ ಸಲುವಾಗಿ ಕರೆಯಲಾಗಿತ್ತು. ಕ್ರೀಡಾಕೂಟವೊಂದರಲ್ಲಿ ಒಟ್ಟು ಎಷ್ಟು ಪರೀಕ್ಷಾ ಮಾದರಿಗಳನ್ನು ಸಂಗ್ರಹಿಸಬೇಕೆನ್ನುವ ನಿಖರ ಗುರಿ ಇಲ್ಲದಿದ್ದರಿಂದ ಈ ಗೊಂದಲ ಸೃಷ್ಠಿಯಾಗಿತ್ತು. ಆದರೆ ಈಗಿನ ಮಾಹಿತಿಯಂತೆ ನಾಡಾ ತಂಡ ಉತ್ತಮ ಪ್ರದರ್ಶನ ನೀಡಿದ ಎಲ್ಲಾ ಕ್ರೀಡಾಪಟುಗಳನ್ನೂ ಡೋಪ್ ಟೆಸ್ಟ್ ಗಾಗಿ ಕರೆಯುವುದಿಲ್ಲ. ಬದಲಿಗೆ ನಿಗದಿತ ಸಂಖ್ಯೆಯ ಸ್ಯಾಂಪಲ್ ಗಳನ್ನಷ್ಟೇ ಸಂಗ್ರಹಿಸಲು ನಾಡಾ ನಿರ್ಧರಿಸಿದೆ.
'ನಾವು ನಮ್ಮ ಟಿಡಿಪಿ (ಟೆಸ್ಟ್ ಡಿಸ್ಟ್ರಿಬ್ಯೂಷನ್ ಪ್ಲ್ಯಾನ್) ಪ್ರಕಾರ ಸ್ಯಾಂಪಲ್ ಗಳನ್ನು ಸಂಗ್ರಹಿಸುತ್ತಿದ್ದೇವೆ. ಒಟ್ಟು 50-60 ಸ್ಯಾಂಪಲ್ ಗಳನ್ನು ಸಂಗ್ರಹಿಸುವ ಗುರಿಯನ್ನು ನಾಡಾ ತಂಡ ಇಟ್ಟುಕೊಂಡಿದೆ' ಎಂದು ನಾಡಾ ಮೂಲಗಳು ತಿಳಿಸಿವೆ.
ಮಂಗಳವಾರ ಸಂಜೆ ಒಟ್ಟು 4-5 ಸ್ಯಾಂಪಲ್ ಗಳನ್ನು ನಾಡಾ ಸಂಗ್ರಹಿಸಿತ್ತು. ಮಂಗಳವಾರ ಒಟ್ಟು ಏಳು ಫೈನಲ್ ಸ್ಪರ್ಧೆಗಳು ಮಂಗಳವಾರ ನಡೆದಿದ್ದವು. ಈ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಮೂಲಕ ಮುಂಬರಲಿರುವ ಏಷ್ಯಾನ್ ಗೇಮ್ಸ್ ಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಿರುವುದರಿಂದ ಕ್ರೂಡಾಕೂಟ ಮಹತ್ವದ್ದಾಗಿದ್ದು, ದೇಶದ ಮೂಲೆ ಮೂಲೆಗಳಿಂದ ಒಟ್ಟು 750 ಕ್ರೀಡಾಪಟುಗಳು ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications