ನಮ್ಮೂರ ಪ್ರತಿಭೆ: ವಿಶ್ವಮಟ್ಟದಲ್ಲಿ ಭಾರತಕ್ಕೆ ಹಿರಿಮೆ ತಂದ ಕರ್ನಾಟಕದ ಪ್ಯಾರಾ ಅಥ್ಲೀಟ್ ಕೆ ವೈ ವೆಂಕಟೇಶ್

ಕೆ ವೈ ವೆಂಕಟೇಶ್ ಮೂಲತಃ ಬೆಂಗಳೂರಿನ ನಿವಾಸಿ. 44 ವರ್ಷದ ವೆಂಕಟೇಶ್ ಅವರು ವಿಕಲಚೇತನರಾಗಿದ್ದು, ಮೂಳೆ ಬೆಳವಣಿಗೆ ಹೊಂದದ ಖಾಯಿಲೆ ಹೊಂದಿದ್ದಾರೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಸಹ ಕೆ ವೈ ವೆಂಕಟೇಶ್ ಅವರ ಸಾಧನೆಯ ಓಟದ ಮುಂದೆ ಆ ಸಮಸ್ಯೆಗಳು ನಿಲ್ಲಲಿಲ್ಲ.
ಪ್ಯಾರಾ ಅಥ್ಲೀಟ್ ಮತ್ತು ಶಾಟ್ ಪುಟರ್ ಆಗಿರುವ ಕೆ ವೈ ವೆಂಕಟೇಶ್ ಅವರು 1994ರಲ್ಲಿ ಜರ್ಮನಿಯಲ್ಲಿ ನಡೆದ ಮೊದಲ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವುದರ ಮೂಲಕ ಕ್ರೀಡಾ ಜಗತ್ತಿಗೆ ಪದಾರ್ಪಣೆ ಮಾಡಿದರು. ನಂತರ ಹಲವು ಪ್ರಸಿದ್ಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿರುವ ಕೆ ವೈ ವೆಂಕಟೇಶ್ ಹಲವಾರು ಪದಕಗಳನ್ನು ಗೆದ್ದಿದ್ದಾರೆ.
ಕೇವಲ ಶಾಟ್ ಪುಟರ್ ಮಾತ್ರವಾಗಿರದ ಕೆ ವೈ ವೆಂಕಟೇಶ್ ಬಾಸ್ಕೆಟ್ ಬಾಲ್, ಡಿಸ್ಕಸ್ ಥ್ರೋ ಮತ್ತು ಫುಟ್ಬಾಲ್ ಆಟಗಳನ್ನೂ ಸಹ ಆಡುತ್ತಾರೆ. 2009ರಲ್ಲಿ ಡ್ವಾರ್ಫ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಮುನ್ನಡೆಸಿದ್ದ ಕೆ ವೈ ವೆಂಕಟೇಶ್ ನೇತೃತ್ವದಲ್ಲಿ ದೇಶಕ್ಕೆ 17 ಪದಕಗಳು ಲಭಿಸಿದ್ದವು. ಡ್ವಾರ್ಫ್ ಕ್ರೀಡಾಕೂಟವೊಂದರಲ್ಲಿ ಅತಿ ಹೆಚ್ಚು ಪದಕ ಗಳಿಸಿದ ಕಾರಣಕ್ಕೆ ಕೆ ವೈ ವೆಂಕಟೇಶ್ ಅವರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನ್ನೂ ಕೂಡ ಸೇರಿದ್ದರು. ಹೀಗೆ 4 ಅಡಿ 2 ಇಂಚು ಎತ್ತರದ ಕೆ ವೈ ವೆಂಕಟೇಶ್ ಅವರ ಸಾಧನೆಯ ಎತ್ತರ ಮಾತ್ರ ಶಿಖರದಂಥದ್ದು. ಕೆ ವೈ ವೆಂಕಟೇಶ್ ಮಾಡಿರುವ ಸಾಧನೆಗಳು ಹಾಗೂ ಸಂಪಾದಿಸಿರುವ ಪದಕಗಳ ಕುರಿತಾದ ವಿವರ ಮುಂದೆ ಇದೆ ಓದಿ.

ಕೆ ವೈ ವೆಂಕಟೇಶ್ ಗೆದ್ದಿರುವ ಪದಕಗಳ ಕಿರು ವಿವರ
ಪ್ಯಾರಾ ಅಥ್ಲೀಟ್ ಕೆ ವೈ ವೆಂಕಟೇಶ್ ಗೆದ್ದಿರುವ ಪದಕಗಳ ಕುರಿತಾದ ಕಿರು ಪಟ್ಟಿ ಈ ಕೆಳಕಂಡಂತಿದೆ
• 1999ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕೆ ವೈ ವೆಂಕಟೇಶ್ ಶಾಟ್ ಪುಟ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆಲ್ಲುವುದರ ಮೂಲಕ ಮೊದಲನೇ ಬಾರಿಗೆ ಸ್ವರ್ಣದ ಪದಕಕ್ಕೆ ಮುತ್ತಿಟ್ಟರು.
• 1999ರ ಸದರ್ನ್ ಕ್ರಾಸ್ ಮಲ್ಟಿ ಡಿಸೆಬಿಲಿಟಿ ಚಾಂಪಿಯನ್‌ಶಿಪ್‌ನಲ್ಲಿ ಶಾಟ್‌ಪುಟ್ ಸ್ಪರ್ಧೆಯಲ್ಲಿ ಚಿನ್ನದ ಪದಕ
• 2009ರ ವಿಶ್ವ ಕುಬ್ಜ ಕ್ರೀಡಾಕೂಟದ ಡಿಸ್ಕಸ್ ಎಸೆತದಲ್ಲಿ ಚಿನ್ನದ ಪದಕ ಹಾಗೂ ಜಾವೆಲಿನ್ ಥ್ರೋ, ಬ್ಯಾಡ್ಮಿಂಟನ್ ಸಿಂಗಲ್ಸ್ ಮತ್ತು ಡಬಲ್ಸ್ ಸ್ಪರ್ಧೆಗಳಲ್ಲಿ ಕಂಚಿನ ಪದಕ
• 2012ರ ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಂಚಿನ ಪದಕ
• 2005 ಡ್ವಾರ್ಫ್ ಒಲಿಂಪಿಕ್ಸ್‌ನ ಶಾಟ್‌ಪುಟ್, ವಾಲಿಬಾಲ್ ಮತ್ತು ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಡಿಸ್ಕಸ್ ಥ್ರೋನಲ್ಲಿ ಚಿನ್ನದ ಪದಕ ಮತ್ತು ಕಂಚಿನ ಪದಕ
• 2006 ಯುರೋಪಿಯನ್ ಓಪನ್ ಚಾಂಪಿಯನ್‌ಶಿಪ್‌ನ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕಂಚಿನ ಪದಕ
• 2004 ರ ಇಸ್ರೇಲ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ
• 2004 ಓಪನ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಶಾಟ್‌ಪುಟ್, ಡಿಸ್ಕಸ್ ಥ್ರೋ ಮತ್ತು ಜಾವೆಲಿನ್ ಥ್ರೋನಲ್ಲಿ 3 ಚಿನ್ನ ಮತ್ತು 2 ಬೆಳ್ಳಿ ಪದಕ
• 2004 ಸ್ವೀಡಿಷ್ ಓಪನ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ, 2 ಬೆಳ್ಳಿ ಪದಕಗಳು ಮತ್ತು ಕಂಚಿನ ಪದಕ
• 2002ರ ಎಲ್‌ಜಿ ವಿಶ್ವಕಪ್‌ನ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿ ಪದಕ

ಕೆ ವೈ ವೆಂಕಟೇಶ್ ಅವರಿಗೆ ಪದ್ಮಶ್ರೀ ಪ್ರಶಸ್ತಿ
ಕ್ರೀಡಾ ಕ್ಷೇತ್ರದಲ್ಲಿ ಕೆ ವೈ ವೆಂಕಟೇಶ್ ಅವರು ಮಾಡಿರುವ ಹಲವಾರು ಸಾಧನೆ ಮತ್ತು ದಾಖಲೆಗಳನ್ನು ಪರಿಗಣಿಸಿ ಭಾರತ ಸರ್ಕಾರವು ಭಾರತದ ನಾಲ್ಕನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀಯನ್ನು 2021ರ ಜನವರಿ 26ರಂದು ನೀಡಿ ಗೌರವಿಸಿತ್ತು.

ಕುಬ್ಜರ ಕ್ರೀಡಾಕೂಟದಲ್ಲಿ ಅತಿಹೆಚ್ಚು ಪದಕ
ಕುಬ್ಜರ ಕ್ರೀಡಾಕೂಟದಲ್ಲಿ ಏಕಾಂಗಿಯಾಗಿ ಅತಿ ಹೆಚ್ಚು ಪದಕ ಗೆದ್ದ ಕಾರಣಕ್ಕಾಗಿ ಕೆ ವೈ ವೆಂಕಟೇಶ್ ಅವರ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. 2005ರ ಕುಬ್ಜರ ಕ್ರೀಡಾಕೂಟದಲ್ಲಿ ಕೆ ವೈ ವೆಂಕಟೇಶ್ ಅವರು ಬರೋಬ್ಬರಿ 6 ಪದಕಗಳನ್ನು ಗೆಲ್ಲುವುದರ ಮೂಲಕ ದಾಖಲೆ ಬರೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications