For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: 12 ವರ್ಷಕ್ಕೆ ರಾಷ್ಟ್ರ ಮಟ್ಟದಲ್ಲಿ ಹಲವು ಪದಕ ಗೆದ್ದ ಮಂಗಳೂರಿನ ಕುವರಿ ಅಲಿಸಾ

Nammura Pratibhe: Mangalores Alyssa Sweedal Rego bagged 3 medals at national swimming event

ಅಲಿಸಾ ಸ್ವೀಡಲ್ ರೆಗೂ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಗೆ ಸರಿಯಾದ ಅರ್ಥವನ್ನು ನೀಡುವಂತಹ ಪುಟ್ಟ ಬಾಲಕಿ. 12 ವರ್ಷದ ಅಲಿಸಾ ಸ್ವೀಡಲ್ ರೆಗೂ ಮೂಲತಃ ಮಂಗಳೂರಿನ ಬಾಲಕಿಯಾಗಿದ್ದು, 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಇತ್ತೀಚಿಗಷ್ಟೇ ರಾಜ್ ಕೋಟ್ ನಗರದಲ್ಲಿ ನಡೆದ 38ನೇ ಸಬ್ ಜೂನಿಯರ್ ನ್ಯಾಷನಲ್ ಅಕ್ವೆಟಿಕ್ ಚಾಂಪಿಯನ್‍ಶಿಪ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಮಂಗಳೂರಿನ ಕುವರಿ ಅಲಿಸಾ ಸ್ವೀಡಲ್ ರೆಗೂ 2 ಬೆಳ್ಳಿ ಪದಕ ಮತ್ತು 1 ಚಿನ್ನದ ಪದಕವನ್ನು ಗೆದ್ದಿದ್ದಾಳೆ.

ಅಲಿಸಾ ಸ್ವೀಡಲ್ ರೆಗೂ ಭಾಗವಹಿಸಿದ್ದ ಎರಡನೇ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಇದಾಗಿದ್ದು, ಈ ಕಿರಿಯ ವಯಸ್ಸಿನಲ್ಲಿಯೇ ಇಷ್ಟು ದೊಡ್ಡ ಮಟ್ಟದ ಸಾಧನೆ ಮಾಡಿರುವುದು ಸದ್ಯ ಸಾಕಷ್ಟು ಪ್ರಶಂಸೆಗೆ ಕಾರಣವಾಗಿದೆ.

ಅಲಿಸಾ ಸ್ವೀಡಲ್ ರೆಗೂ ಕಿರುಪರಿಚಯ

ಅಲಿಸಾ ಸ್ವೀಡಲ್ ರೆಗೂ ಕಿರುಪರಿಚಯ

ಮಂಗಳೂರು ಮೂಲದ ಅಲಿಸಾ ಸ್ವೀಡಲ್ ರೆಗೂ ಲೇಡಿಹಿಲ್ ಇಂಗ್ಲಿಷ್ ಪ್ರೈಮರಿ ಸ್ಕೂಲ್‌ನಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆಕೆ ಸ್ವಿಮ್ಮಿಂಗ್ ಆಯ್ಕೆ ಮಾಡಿಕೊಳ್ಳಲು ಕಾರಣ ಆಕೆಯ ಅಣ್ಣ ಅಲೈಸ್ಟರ್ ಸ್ಯಾಮುಯೆಲ್ ರೆಗೋ. ಈತ ಸದ್ಯ ಸೇಂಟ್ ಅಲಯ್ಸಿಸಸ್ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದು ರಾಷ್ಟ್ರೀಯ ಮಟ್ಟದ ಈಜು ಪಟು ಆಗಿದ್ದಾರೆ.

ಮೂರನೇ ವರ್ಷದಿಂದಲೇ ಸ್ವಿಮ್ಮಿಂಗ್ ಕಡೆ ಒಲವು ಬೆಳೆಸಿಕೊಂಡ ಅಲಿಸಾ

ಮೂರನೇ ವರ್ಷದಿಂದಲೇ ಸ್ವಿಮ್ಮಿಂಗ್ ಕಡೆ ಒಲವು ಬೆಳೆಸಿಕೊಂಡ ಅಲಿಸಾ

ತನ್ನ ಮೂರನೇ ವರ್ಷದಿಂದಲೇ ಈಜುಕೊಳಕ್ಕೆ ಧುಮುಕಿ ಅಭ್ಯಾಸವನ್ನು ರೂಢಿ ಮಾಡಿಕೊಂಡ ಅಲಿಸಾ ಸದ್ಯ ರಾಷ್ಟ್ರೀಯ ಮಟ್ಟದ ಸಬ್ ಜ್ಯೂನಿಯರ್ ಈಜುಪಟುವಾಗಿ ಗುರುತಿಸಿಕೊಂಡಿದ್ದಾರೆ. ಅಲಿಸಾ ಸ್ವೀಡಲ್ ರೆಗೂ ಲೋಕರಾಜ್ ವಿಟ್ಲ ಅವರ ಬಳಿ ತರಬೇತಿ ಪಡೆದುಕೊಳ್ಳುತ್ತಿದ್ದಾಳೆ.

ಅಲಿಸಾ ಸ್ವೀಡಲ್ ರೆಗೂ ಸಾಧನೆ

ಅಲಿಸಾ ಸ್ವೀಡಲ್ ರೆಗೂ ಸಾಧನೆ

12 ವರ್ಷ ಹರೆಯದ ಪುಟ್ಟ ಈಜುಪಟು ಅಲಿಸಾ ಸ್ವೀಡಲ್ ರೆಗೂ ಮಾಡಿರುವ ಸಾಧನೆಗಳ ಪಟ್ಟಿ ಕೆಳಗಿನಂತಿದೆ

• 2022ರ ಜೂನ್‌ನಲ್ಲಿ ರಾಜ್ಕೋಟ್ ನಲ್ಲಿ ನಡೆದ ಸಬ್ ಜೂನಿಯರ್ ನ್ಯಾಷನಲ್ ಅಕ್ವಾಟಿಕ್ ಚಾಂಪಿಯನ್‍ಶಿಪ್ ನಲ್ಲಿ ಭಾಗವಹಿಸಿದ್ದ ಅಲಿಸಾ ಸ್ವೀಡಲ್ ರೆಗೂ 1 ಚಿನ್ನ ಮತ್ತು 2 ರಜತ ಪದಕಗಳನ್ನು ಗೆದ್ದಿದ್ದಾಳೆ.

• ಇದೇ ಮೇ 26 ಮತ್ತು 29ರಂದು ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ಈಜುಕೂಟದಲ್ಲಿ ಭಾಗವಹಿಸಿದ್ದ ಅಲಿಸಾ ಸ್ವೀಡಲ್ ರೆಗೂ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರೀಯ ಮಟ್ಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಳು.

• ಕಳೆದ ವರ್ಷ ನಡೆದ 37ನೇ ಸಬ್ ಜೂನಿಯರ್ ಮತ್ತು 47ನೇ ಜ್ಯೂನಿಯರ್ ನ್ಯಾಷನಲ್ ಅಕ್ವಾಟಿಕ್ ಚಾಂಪಿಯನ್‍ಶಿಪ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಅಲಿಸಾ ಸ್ವೀಡಲ್ ರೆಗೂ 3 ಚಿನ್ನ, 1 ಬೆಳ್ಳಿ ಮತ್ತು 1 ಕಂಚಿನ ಪದಕ ಗೆದ್ದಿದ್ದಳು.

• 2021ರಲ್ಲಿ ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ ಬೆಂಗಳೂರಿನಲ್ಲಿ ನಡೆದಿದ್ದ ಸ್ಟೇಟ್ ಸಬ್ ಜ್ಯೂನಿಯರ್ ಸ್ವಿಮ್ಮಿಂಗ್ ಕಾಂಪಿಟಿಶನ್ ಈಜುಕೂಟದಲ್ಲಿ ಭಾಗವಹಿಸಿದ್ದ ಅಲಿಸಾ ಸ್ವೀಡಲ್ ರೆಗೂ 5 ಚಿನ್ನದ ಪದಕಗಳನ್ನು ಗೆದ್ದಿದ್ದಳು.

Story first published: Thursday, July 7, 2022, 19:22 [IST]
Other articles published on Jul 7, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+