ಚಿಕ್ಕಮಗಳೂರು : ಚಿಕ್ಕಮಗಳೂರಿನ ಅಬ್ಲೈಸ್ ಮೋಟಾರ್ ಸ್ಪೋಟ್ರ್ಸ್ ಕ್ಲಬ್ ಆಯೋಜಿಸಿದ್ದ ಡರ್ಟ್ ಕಾರ್ ರ್ಯಾಲಿ ಕಾಫಿನಾಡಿಗರಿಗೆ ರ‍್ಯಾಲಿ ಪ್ರಿಯರನ್ನು ರೋಮಾಂಚನಗೊಳಿಸುವಲ್ಲಿ ಯಶಸ್ವಿಯಾಗಿದೆ. ಚಿಕ್ಕಮಗಳೂರು ಮುಗುಳುವಳ್ಳಿ ಗ್ರಾಮದ ಮೈದಾನದಲ್ಲಿ ನಡೆದ ಕಾರ್ ರ‍್ಯಾಲಿಯಲ್ಲಿ ಕರ್ನಾಟಕ, ತಮಿಳುನಾಡು, ಗೋವಾ, ಕೇರಳ, ಹೈದರಾಬಾದ್, ಮೇಘಾಲಯ, ದಿಲ್ಲಿ, ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಿಂದ ಆಗಮಿಸಿದ್ದ ರಾಷ್ಟ್ರಮಟ್ಟದ ಕಾರ್ ರ್ಯಾಲಿ ಪಟುಗಳು ಪೈಪೋಟಿಗೆ ಬಿದ್ದು ಕಾರುಗಳನ್ನು ಶರವೇಗದಲ್ಲಿ ಮುನ್ನುಗ್ಗಿಸುತ್ತಿದ್ದ ಪರಿ ನೋಡುಗರ ಮನಸೂರೆಗೊಂಡಿತು.
ಬಯಲು ಮೈದಾನದಲ್ಲಿ ನಿರ್ಮಿಸಿದ್ದ ಅಂಕುಡೊಂಕಿನ ಕಚ್ಚಾ ರಸ್ತೆಯಲ್ಲಿ ದೂಳೆಬ್ಬಿಸಿಕೊಂಡು, ಕರ್ಕಶ ಧ್ವನಿಯೊಂದಿಗೆ ಕಾರುಗಳು ಮುನ್ನುಗ್ಗುತ್ತಿದ್ದ ದೃಶ್ಯಗಳು ಭಾರೀ ಸಂಖ್ಯೆಯಲ್ಲಿ ಸೇರಿದ್ದ ರ‍್ಯಾಲಿ ಪ್ರಿಯರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ರಾಜ್ಯ, ಹೊರ ರಾಜ್ಯಗಳ ಕಾರ್ ರ್ಯಾಲಿ ಪಟುಗಳು ಪೈಪೋಟಿಗೆ ಬಿದ್ದು ಕಾರು ಓಡಿಸುತ್ತಿದ್ದರೇ ನೆರೆದಿದ್ದ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ಮೂಲಕ ಕಾರು ಚಾಲಕರನ್ನು ಹುರಿದುಂಬಿಸುತ್ತಿದ್ದ ದೃಶ್ಯ ಕಂಡು ಬಂತು. ಅಂಕುಡೊಂಕಿನ ತಿರುವಿನ ರಸ್ತೆಯಲ್ಲಿ ನಾಜೂಕಿನಿಂದ ಕಾರು ಓಡಿಸುವ ಮೂಲಕ ಚಾಲಕರು ತಮ್ಮ ಚಾಲನಾ ನೈಪುಣ್ಯತೆ ಪ್ರದರ್ಶಿಸಿ ರ‍್ಯಾಲಿ ಪ್ರಿಯರು ಹುಬ್ಬೇರಿಸುವಂತೆ ಮಾಡಿದರು.

ರ‍್ಯಾಲಿಯಲ್ಲಿ 150ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು. ಒಟ್ಟು 17 ವಿಧದ ರ‍್ಯಾಲಿಯಲ್ಲಿ ಆಲ್ಟೋದಿಂದ ಹಿಡಿದು ನಾನಾ ರ‍್ಯಾಲಿ ಕಾರುಗಳು ಪಾಲ್ಗೊಂಡಿದ್ದವು. ಮಾರುತಿ ಎಸ್ಟೀಮ್, ಓಕ್ಸ್ ಪೋಲೋ, ಓಕ್ಸ್ ವ್ಯಾಗನ್ ಕಾರುಗಳು ಒಂದಕ್ಕೊಂದು ಸೆಡ್ಡು ಹೊಡೆಯುತ್ತಾ ಮುನ್ನುಗುತ್ತಿದ್ದವು. ಕೆಲವು ಕಾರ್ ಕ್ರೇಜ್ ಪ್ರಿಯರು ಆಲ್ಟೋ ಹಾಗೂ 800 ಕಾರನ್ನೂ ಮಾಡಿಫೈ ಮಾಡಿಕೊಂಡು ಬಂದು ರ್ಯಾಲಿಯಲ್ಲಿ ಡ್ರೈವ್ ಮಾಡಿ ಎಂಜಾಯ್ ಮಾಡಿದ್ರು. ನೋಡುಗರ ಮನೋರಂಜನೆಗೆಂದೇ ಸಿದ್ಧಪಡಿಸಿದ್ದ ಟ್ರ್ಯಾಕ್‌ನಲ್ಲಿ ಸ್ಪರ್ಧಾಳುಗಳು ಪ್ರೇಕ್ಷಕರ ಮೈನವಿರೇಳಿಸಿದ್ರು.
ಹಾವು-ಬಳುಕಿನ ಮೈಕಟ್ಟಿನ ಮಣ್ಣಿನ ಹಾದಿಯಲ್ಲಿ ಚಾಲಕರ ಧೂಳೆಬ್ಬಿಸ್ತಾ ಓಡಿಸ್ತಿದ್ದ ಕಾರುಗಳು ನೋಡ್ದೋರ ಎದೆ ಮೇಲೆ ಹೋದಂತಿತ್ತು. ಇನ್ನು ಇದೇ ಮೊದಲ ಬಾರಿಗೆ ರ್ಯಾಲಿಯಲ್ಲಿ ಪಾಲ್ಗೊಂಡು ಸ್ಥಳಿಯ ಪ್ರತಿಭೆಗಳು ಆರಂಭದಲ್ಲಿ ಭಯವಾಗಿತ್ತು. ಈಗ ರೈಡ್ ಮಾಡಿದ ಮೇಲೆ ಭಯವಿಲ್ಲ. ಮುಂದಿನ ದಿನಗಳಲ್ಲಿ ಮತ್ತೇ ರ್ಯಾಲಿಯನ್ನ ಕಂಟಿನ್ಯೂ ಮಾಡುತ್ತೇನೆ ಎಂದು ರ‍್ಯಾಲಿಯನ್ನ ಎಂಜಾಯ್ ಮಾಡಿದ್ದಾರೆ.
ಒಟ್ಟಾರೆ, ಪ್ರೇಕ್ಷಕರ ರಂಜನೆಗೆಂದೇ ಆಯೋಜಿಸಿದ್ದ ರ‍್ಯಾಲಿಯಲ್ಲಿ ರಾಷ್ಟ-ಅಂತರಾಷ್ಟ್ರೀಯ ಮಟ್ಟದ ಸ್ಫರ್ಧಾಳುಗಳು ಭಾಗವಹಿಸಿ ರೋಚಕ ಪ್ರದರ್ಶನ ನೀಡಿದ್ರು. 150 ರಿಂದ 200 ಕಿ.ಮೀ. ವೇಗದಲ್ಲಿ ಓಡ್ತಿರೋ ಕಾರುಗಳನ್ನ ನೋಡಿ ಜನ ಫಿದಾ ಆಗಿದ್ದಾರೆ. ಕಾಫಿ ಡೇ ಪ್ರಯೋಜಕತ್ವದಲ್ಲಿ ನಡೆಯುತ್ತಿದ್ದ ಐ.ಎನ್.ಆರ್.ಸಿ. ಕಾರ್ ರ‍್ಯಾಲಿ ನಿಂತ ಮೇಲೆ ಕಾಫಿನಾಡ ಡ್ರೈವಿಂಗ್ ಕ್ರೇಜ್ ರೈಡರ್‍ಗಳು ನೊಂದುಕೊಂಡಿದ್ದರು. ಇದೀಗ, ಅಬ್ಲೈಜ್ ಮೋಟರ್ ಸ್ಪೋಟ್ರ್ಸ್ ಕ್ಲಬ್ ಆಯೋಜನೆಯಿಂದ ಹೊರರಾಜ್ಯದ ಸ್ಪರ್ಧಾಗಳುಗಳಿಗೆ ಸ್ಥಳಿಯ ಪ್ರತಿಭೆಗಳ ಜೊತೆ ಟಕ್ಕರ್ ಕೊಡುತ್ತಾ ರೈಡಿಂಗ್ ಎಂಜಾಯ್ ಮಾಡುತ್ತಿದ್ದಾರೆ