ಮಂಗಳೂರಿನಲ್ಲಿ ರಾಷ್ಟ್ರಮಟ್ಟದ ಈಜು ಸ್ಪರ್ಧೆ; ಉತ್ಸಾಹದಿಂದ ಭಾಗವಹಿಸಿದ ಈಜುಪಟುಗಳು
ಮಂಗಳೂರು ನಗರದ ಎಮ್ಮೆಕೆರೆಯಲ್ಲಿ ಶುಕ್ರವಾರ, ನವೆಂಬರ್ 24ರಂದು ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ಲೋಕಾರ್ಪಣೆಯಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಮೂರು ದಿನಗಳವರೆಗೆ ರಾಷ್ಟ್ರಮಟ್ಟದ ಈಜು ಸ್ಪರ್ಧೆ ಆಯೋಜನೆಗೊಂಡಿದೆ. ಈ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಬಂದ ಈಜು ಸ್ಪರ್ಧಿಗಳು ಉತ್ಸಾಹದಿಂದಲೇ ಭಾಗವಹಿಸಿದರು.
ವಿವಿಧ ವಿಭಾಗಗಳಲ್ಲಿ ಈಜು ಸ್ಪರ್ಧೆ ನಡೆಯಲಿದ್ದು, 29 ರಾಜ್ಯಗಳ ಸುಮಾರು 752 ಮಂದಿ ಈಜುಪಟುಗಳು ಭಾಗವಹಿಸಿದ್ದಾರೆ. 25 ವರ್ಷದಿಂದ 90 ವರ್ಷದವರೆಗಿನ ವಯಸ್ಸಿನ ವಿಭಾಗದಲ್ಲಿ ಈ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯನ್ನು ನಡೆಸಲು ಈಜು ಫೆಡರೇಶನ್ ಆಫ್ ಇಂಡಿಯಾದ 150ಕ್ಕೂ ಅಧಿಕ ಅಧಿಕಾರಿಗಳು ಮತ್ತು ಸ್ವಯಂ ಸೇವಕರು ಭಾಗಿಯಾಗಿದ್ದಾರೆ.

ಇಂಡಿಯನ್ ಸ್ವಿಮ್ಮಿಂಗ್ ಫೆಡರೇಶನ್ ವತಿಯಿಂದ ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಶನ್ ಸಹಯೋಗದಲ್ಲಿ ಈ ಸ್ಪರ್ಧೆ ನಡೆಯುತ್ತಿದೆ. ಸ್ಪರ್ಧೆಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಉತ್ತರಪ್ರದೇಶ, ಅಸ್ಸಾಂ, ಚಂಡೀಗಡ, ದೆಹಲಿ, ಗುಜರಾತ್, ಹರಿಯಾಣ, ಲಕ್ಷ ದ್ವೀಪ, ಮಣಿಪುರ, ಮೇಘಾಲಯ, ರಾಜಸ್ತಾನ, ಸಿಕ್ಕಿಂ, ತಮಿಳುನಾಡು, ಉತ್ತರಖಂಡ, ಪಶ್ಚಿಮ ಬಂಗಾಳ, ಒಡಿಶಾ ರಾಜ್ಯಗಳ ಈಜುಪಟುಗಳು ಆಗಮಿಸಿದ್ದಾರೆ.
ಸ್ಪರ್ಧಿಗಳು ಅತ್ಯಂತ ಉತ್ಸಾಹದಿಂದಲೇ ನೂತನ ಈಜುಕೊಳದಲ್ಲಿ ಈಜು ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಹಿರಿಯ ನಾಗರಿಕರೂ ಅತ್ಯಂತ ಉತ್ಸಾಹದಿಂದಲೇ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಕಂಡು ಬಂದಿದೆ.
ಎಮ್ಮೆಕೆರೆಯ ಈ ಅಂತಾರಾಷ್ಟ್ರೀಯ ಒಲಿಂಪಿಕ್ ಗುಣಮಟ್ಟದ ಈಜುಕೊಳ ಸುಮಾರು 2 ಎಕರೆ ಪ್ರದೇಶದಲ್ಲಿ 24.94 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. 50 ಮೀಟರ್ ಉದ್ದ, 25 ಮೀಟರ್ ಅಗಲ ಮತ್ತು 2.2 ಮೀಟರ್‌ನಿಂದ 1.4 ಮೀಟರ್ ವರೆಗಿನ ಆಳ ಹೊಂದಿರುವ ಸ್ಪರ್ಧಾತ್ಮಕ ಸ್ವಿಮ್ಮಿಂಗ್ ಪೂಲ್ ಇದಾಗಿದೆ.
ಸ್ಪರ್ಧೆಯೊಂದಿಗೆ, ಕ್ರೀಡಾಪಟುಗಳ ತರಬೇತಿಗಾಗಿ 25 ಮೀಟರ್ ಉದ್ದ, 10 ಮೀಟರ್ ಅಗಲ ಮತ್ತು 2.2 ಮೀಟರ್ ಆಳದ ಅಭ್ಯಾಸ ಪೂಲ್ ಅನ್ನು ನಿರ್ಮಿಸಲಾಗಿದೆ. ಅಲ್ಲದೆ, ಈಜು ಸ್ಪರ್ಧೆಗೆ ಮಕ್ಕಳನ್ನು ಆರಂಭಿಕ ಹಂತದಲ್ಲೇ ತರಬೇತುಗೊಳಿಸುವ ಉದ್ದೇಶದಿಂದ ಪಕ್ಕದಲ್ಲಿಯೇ 13.8 ಮೀಟರ್ ಉದ್ದ, 10 ಮೀಟರ್ ಅಗಲ ಮತ್ತು 1.2 ಮೀಟರ್ ಆಳದ ಚಿಕ್ಕ ಈಜುಕೊಳವನ್ನೂ ಸಹ ನಿರ್ಮಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications