ಖೇಲ್ ರತ್ನ ಸೇರಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಗೆದ್ದವರ ಸಂಪೂರ್ಣ ಪಟ್ಟಿ

ನವದೆಹಲಿ: ಭಾರತದ ಅತ್ಯುನ್ನತ ಕ್ರೀಡಾ ಪುರಸ್ಕಾರಗಳಾದ ರಾಜೀವ್ ಗಾಂಧಿ ಖೇಲ್ ರತ್ನ, ಅರ್ಜುನ, ದ್ರೋಣಾಚಾರ್ಯ, ಧ್ಯಾನ್ ಚಂದ್, ತೇನ್ ಸಿಂಗ್ ರಾಷ್ಟ್ರೀಯ ಸಾಹಸ ಕ್ರೀಡೆ ಪ್ರಶಸ್ತಿಗಳ ವಿಜೇತರ ಪಟ್ಟಿ ಶುಕ್ರವಾರ (ಆಗಸ್ಟ್ 21) ಪ್ರಕಟಗೊಂಡಿದೆ. ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ, ಖ್ಯಾತ ರಸ್ಲರ್ ವಿನೇಶ್ ಫೋಗಟ್, ಹಾಕಿ ಆಟಗಾರ್ತಿ ರಾಣಿ ರಾಂಪಾಲ್ ಸೇರಿ ಒಟ್ಟಿಗೆ ಐವರು ದೇಶದ ಅತ್ಯುನ್ನತ ಗೌರವವಾದ ಖೇಲ್ ರತ್ನಕ್ಕೆ ಹೆಸರಿಸಲ್ಪಟ್ಟಿದ್ದಾರೆ.
ಅರ್ಜುನ ಪ್ರಶಸ್ತಿಗಾಗಿ ಹೆಸರಿಸಲಾಗಿರುವ ಸಾಧಕರ ಪಟ್ಟಿಯಲ್ಲಿ ಕ್ರಿಕೆಟಿಗ ಇಶಾಂತ್ ಶರ್ಮಾ, ಆರ್ಚರಿ ಪಟು ಅತನು ದಾಸ್, ಸ್ಟಾರ್ ಅಥ್ಲೀಟ್ ದ್ಯುತೀ ಚಂದ್, ಬ್ಯಾಡ್ಮಿಂಟನ್ ಆಟಗಾರ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಸೇರಿ ಒಟ್ಟು 27 ಮಂದಿ ಕಾಣಿಸಿಕೊಂಡಿದ್ದಾರೆ.
ಇನ್ನು ದ್ರೋಣಾಚಾರ್ಯ, ಧ್ಯಾನ್ ಚಂದ್ ಸೇರಿದಂತೆ ಅತ್ಯುನ್ನತ ಕ್ರೀಡಾ ಗೌರವ ಪಡೆದುಕೊಂಡ ಎಲ್ಲರ ಪಟ್ಟಿ ಇಲ್ಲಿದೆ.

ರಾಜೀವ್ ಗಾಂಧಿ ಖೇಲ್ ರತ್ನ
1. ರೋಹಿತ್ ಶರ್ಮ, ಕ್ರಿಕೆಟ್
2. ಮರಿಯಪ್ಪನ್ ತಂಗವೇಲು, ಪ್ಯಾರಾ ಅಥ್ಲೆಟಿಕ್ಸ್
3. ಮಣಿಕಾ ಬಾತ್ರಾ, ಟೇಬಲ್ ಟೆನಿಸ್
4. ವಿನೇಶ್ ಪೋಗಟ್, ಕುಸ್ತಿ
5. ರಾಣಿ ರಾಮ್‌ಪಾಲ್, ಹಾಕಿ

ಅರ್ಜುನ ಪ್ರಶಸ್ತಿ
1. ಅತನು ದಾಸ್- ಬಿಲ್ಲುಗಾರಿಕೆ, 2. ದ್ಯುತಿ ಚಂದ್- ಅಥ್ಲೆಟಿಕ್ಸ್, 3. ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ- ಬ್ಯಾಡ್ಮಿಂಟನ್, 4. ಚಿರಾಗ್ ಚಂದ್ರಶೇಖರ್ ಶೆಟ್ಟಿ- ಬ್ಯಾಡ್ಮಿಂಟನ್, 5. ವಿಶೇಷ್ ಭೃಗವಂಶಿ- ಬಾಸ್ಕೆಟ್ ಬಾಲ್, 6. ಸುಬೆದಾರ್ ಮನೀಶ್ ಕೌಶಿಕ್ - ಬಾಕ್ಸಿಂಗ್, 7. ಲೋವ್ಲಿನಾ ಬೊರ್ಗೊಹೈನ್- ಬಾಕ್ಸಿಂಗ್, 8. ಇಶಾಂತ್ ಶರ್ಮಾ- ಕ್ರಿಕೆಟ್, 9. ದೀಪ್ತಿ ಶರ್ಮಾ- ಕ್ರಿಕೆಟ್, 10. ಸಾವಂತ್ ಅಜಯ್ ಅನಂತ್- ಈಕ್ವೆಸ್ಟ್ರಿಯನ್, 11. ಸಂದೇಶ್ ಝಿಂಗನ್- ಫುಟ್ಬಾಲ್, 12. ಅದಿತಿ ಅಶೋಕ್- ಗಾಲ್ಫ್, 13. ಆಕಾಶ್ ದೀಪ್ ಸಿಂಗ್- ಹಾಕಿ, 14. ದೀಪಿಕಾ- ಹಾಕಿ, 15. ದೀಪಕ್-ಕಬಡ್ಡಿ, 16. ಕಾಳೆ ಸಾರಿಕಾ ಸುಧಾಕರ್- ಖೋ ಖೋ, 17. ದತ್ತು ಬಾಬನ್ ಭೊಕಾನಲ್- ರೋಯಿಂಗ್, 18. ಮನು ಭಾಕರ್- ಶೂಟಿಂಗ್, 19. ಸೌರಭ್ ಚೌಧರಿ- ಶೂಟಿಂಗ್, 20. ಮಧುರಿಕಾ ಸುಹಾಸ್ ಪಟ್ಕರ್- ಟೇಬಲ್ ಟೆನ್ನಿಸ್, 21. ದಿವಿರಾಜ್ ಶರಣ್- ಟೆನ್ನಿಸ್, 22. ಶಿವ ಕೇಶವನ್- ವಿಂಟರ್ ಸ್ಪೋರ್ಟ್ಸ್, 23. ದಿವ್ಯಾ ಕಕ್ರನ್- ಕುಸ್ತಿ, 24. ರಾಹುಲ್ ಅವರೆ- ಕುಸ್ತಿ, 25. ಸುಯಾಶ್ ನಾರಾಯಣ್ ಜಾಧವ್- ಪ್ಯಾರಾ ಸ್ವಿಮ್ಮಿಂಗ್, 26, ಸಂದೀಪ್- ಪ್ಯಾರಾ ಅಥ್ಲೆಟಿಕ್ಸ್, 27. ಮನೀಶ್ ನಾರ್ವಾಲ್- ಪ್ಯಾರಾ ಶೂಟಿಂಗ್.

ದ್ರೋಣಾಚಾರ್ಯ
* ಜೀವಮಾನದ ಸಾಧನೆ ವಿಭಾಗ
1. ಧರ್ಮೇಂದ್ರ ತಿವಾರಿ-ಬಿಲ್ಲುಗಾರಿಕೆ, 2. ಪುರುಷೋತ್ತಮ್ ರೈ- ಅಥ್ಲೆಟಿಕ್ಸ್, 3. ಶಿವ್ ಸಿಂಗ್- ಬಾಕ್ಸಿಂಗ್, 4. ರೊಮೇಶ್ ಪಥಾನಿಯಾ- ಹಾಕಿ, 5. ಕೃಷನ್ ಕುಮಾರ್ ಹೂಡಾ- ಕಬಡ್ಡಿ, 6. ವಿಜಯ್ ಬಾಲಚಂದ್ರ ಮುನೀಶ್ವರ್- ಪ್ಯಾರಾ ಪವರ್ ಲಿಫ್ಟಿಂಗ್, 7. ನರೇಶ್ ಕುಮಾರ್- ಟೆನ್ನಿಸ್, 8. ಓಂ ಪ್ರಕಾಶ್ ದಹಿಯಾ- ಕುಸ್ತಿ.
* ಸಾಮಾನ್ಯ ವಿಭಾಗ
1. ಜೂಡ್ ಫೆಲಿಕ್ಸ್ ಸೆಬಾಸ್ಟಿಯನ್- ಹಾಕಿ, 2. ಯೋಗೇಶ್ ಮಾಳವೀಯ- ಮಲ್ಲಕಂಬ, 3. ಜಸ್ಪಾಲ್ ರಾಣಾ-ಶೂಟಿಂಗ್, 4. ಕುಲದೀಪ್ ಕುಮಾರ್ ಹಂಡೂ-ವುಶು, 5. ಗೌರವ್ ಖನ್ನಾ-ಪ್ಯಾರಾ ಬ್ಯಾಡ್ಮಿಂಟನ್

ಧ್ಯಾನ್ ಚಂದ್ ಪ್ರಶಸ್ತಿ
1. ಕುಲದೀಪ್ ಸಿಂಗ್ ಭುಲ್ಲರ್- ಅಥ್ಲೆಟಿಕ್ಸ್, 2. ಜಿಂಕಿ ಫಿಲಿಪ್ಸ್- ಅಥ್ಲೆಟಿಕ್ಸ್, 3. ಪ್ರದೀಪ್ ಶ್ರೀಕೃಷ್ಣ ಗಾಂಧೆ- ಬ್ಯಾಡ್ಮಿಂಟನ್, 5. ತೃಪ್ತಿ ಮುರುಗುಂದೆ- ಬ್ಯಾಡ್ಮಿಂಟನ್, 6. ಎನ್ ಉಷಾ- ಬಾಕ್ಸಿಂಗ್, 7. ಲಖಾ ಸಿಂಗ್- ಬಾಕ್ಸಿಂಗ್, 8. ಸುಖ್ವಿಂದರ್ ಸಿಂಗ್ ಸಂಧು- ಫುಟ್ಬಾಲ್, 9. ಅಜಿತ್ ಸಿಂಗ್- ಹಾಕಿ, 10 ಮನ್‌ಪ್ರೀತ್ ಸಿಂಗ್- ಕಬಡ್ಡಿ, 11. ಕೆ. ರಂಜಿತ್ ಕುಮಾರ್- ಪ್ಯಾರಾ ಅಥ್ಲೆಟಿಕ್ಸ್, 12. ಸತ್ಯಪ್ರಕಾಶ್ ತಿವಾರಿ- ಪ್ಯಾರಾ ಬ್ಯಾಡ್ಮಿಂಟನ್, 13. ಮಂಜೀತ್ ಸಿಂಗ್ - ರೋಯಿಂಗ್, 14. ಸಚಿನ್ ನಾಗ್- ಈಜು (ಮರಣೋತ್ತರ), 15. ನಂದನ್ ಪಿ ಬಾಲ್- ಟೆನ್ನಿಸ್, 16. ನೇತ್ರಪಾಲ್ ಹೂಡಾ- ಕುಸ್ತಿ.

ತೇನ್ ಸಿಂಗ್ ರಾಷ್ಟ್ರೀಯ ಸಾಹಸ ಕ್ರೀಡೆ ಪ್ರಶಸ್ತಿ
1. ಅನಿತಾ ದೇವಿ- ಭೂ ಸಾಹಸ, 2. ಕರ್ನಲ್ ಸರ್ಫರಾಜ್ ಸಿಂಗ್- ಭೂ ಸಾಹಸ, 3. ಟಕಾ ತಮುಟ್- ಭೂ ಸಾಹಸ, 4. ನರೇಂದರ್ ಸಿಂಗ್- ಭೂ ಸಾಹಸ, 5. ಕೇವಲ್ ಹಿರೆನ್ ಕಕ್ಕಾ- ಭೂ ಸಾಹಸ, 6. ಸತೇಂದ್ರ ಸಿಂಗ್- ಜಲ ಸಾಹಸ, 7. ಗಜಾನಂದ್ ಯಾದವ- ವಾಯು ಸಾಹಸ, 8. ಮಗನ್ ಬಿಸ್ಸಾ- ಜೀವಮಾನ ಸಾಧನೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications