For Quick Alerts
ALLOW NOTIFICATIONS  
For Daily Alerts

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲು ಗಡುವು ವಿಸ್ತರಣೆ

National Sports Awards: Ministry extends deadline

ನವದೆಹಲಿ, ಜೂನ್ 3: ಕ್ರೀಡಾ ಸಚಿವಾಲಯವು 2020ರ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲು ಗಡುವು ವಿಸ್ತರಿಸಿದೆ. ಕೊರೊನಾವೈರಸ್ ಪಿಡುಗಿನ ಕಾರಣಕ್ಕೆ ಅರ್ಜಿ ಸಲ್ಲಿಸಲು ಇದ್ದ ಕಡೇಯ ದಿನಾಂಕವನ್ನು ಜೂನ್ 22ಕ್ಕೆ ವಿಸ್ತರಿಸಲಾಗಿದೆ.

ಬದಲಾದ ಮಾರ್ಗಸೂಚಿಯಲ್ಲಿ ಕ್ರೀಡಾಪಟುಗಳು ಸ್ವ-ನಾಮನಿರ್ದೇಶಿಸಲು ಅವಕಾಶ ಕಲ್ಪಿಸಲಾಗಿದೆ. ಕೊರೊನಾವೈರಸ್‌ ಲಾಕ್‌ಡೌನ್‌ನಿಂದಾಗಿ ಕ್ರೀಡಾ ಫೆಡರೇಶನ್‌ಗಳ ಮೂಲಕ ಅರ್ಜಿ ಸಲ್ಲಿಸಲು ತೊಂದರೆಯಾಗಿದ್ದರಿಂದ ಅಥ್ಲೀಟ್‌ಗಳು ತಾವೇ ಅರ್ಜಿ ಸಲ್ಲಿಸಲು ಕ್ರೀಡಾ ಸಚಿವಾಲಯ ಅವಕಾಶ ನೀಡಿದೆ.

ಜೂನ್ 3 (ಬುಧವಾರ) ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿ ಅರ್ಜಿ ಸಲ್ಲಿಸಲು ಕಡೇಯ ದಿನಾಂಕವಾಗಿತ್ತು. ಆದರೆ ಕೊರೊನಾವೈರಸ್ ಲಾಕ್‌ಡೌನ್‌ನಿಂದಾಗಿ ಕ್ರೀಡಾಪಟುಗಳು ಸಮಸ್ಯೆ ಎದುರಿಸುತ್ತಿರುವುದನ್ನು ಅರಿತ ಸಚಿವಾಲಯ ಅರ್ಜಿ ಸಲ್ಲಿಸಲಿದ್ದ ಕಡೇ ದಿನಾಂಕವನ್ನು ವಿಸ್ತರಿಸಿದೆ.

'ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣದಿಂದ ದೇಶಾದ್ಯಂತ ಲಾಕ್‌ಡೌನ್ ಆಗಿರುವುದರಿಂದ ನಿಗದಿತ ಅಧಿಕಾರಿಗಳು/ವ್ಯಕ್ತಿಗಳ ಶಿಫಾರಸು ಪಡೆಯುವುದು ಕಷ್ಟವಾಗಿದೆ. ಹೀಗಾಗಿ ಪ್ರಶಸ್ತಿ ಯೋಜನೆಯಲ್ಲಿ ಸೂಚಿಸಲಾದ ಅಧಿಕಾರಿಗಳು/ವ್ಯಕ್ತಿಗಳ ಶಿಫಾರಸುಗಳೊಂದಿಗೆ ಮಾತ್ರ ಸಲ್ಲಿಸುವ ಷರತ್ತನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ,' ಎಂದು ಸಚಿವಾಲಯದ ಸುತ್ತೋಲೆಯಲ್ಲಿ ಹೇಳಿದೆ.

Story first published: Wednesday, June 3, 2020, 16:35 [IST]
Other articles published on Jun 3, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+