ಅಕ್ಕಪಕ್ಕದ ವಸ್ತುಗಳ ಬೇಕೆಂದೇ ಮುಟ್ಟಿದ ಕೊರೊನಾ ಸೋಂಕಿತ: ವೀಡಿಯೋ

ಲಾಸ್ ಏಂಜಲ್ಸ್, ಮಾರ್ಚ್ 12: ಒಬ್ಬ ಆಟಗಾರನಿಗೆ ಕೊರೊನಾ ವೈರಸ್ ಸೋಂಕು ತಲುಲಿರುವುದು ಆರಂಭಿಕ ಹಂತದ ಪರೀಕ್ಷೆಯಲ್ಲಿ ಪತ್ತೆಯಾದ ಹಿನ್ನಲೆಯಲ್ಲಿ ಎನ್‌ಬಿಎ (ನ್ಯಾಷನಲ್ ಬಾಸ್ಕೆಟ್‌ಬಾಲ್ ಅಸೋಸಿಯೇಶನ್) ಟೂರ್ನಿಯೇ ರದ್ದಾಗಿದೆ. 2020ರ ಎನ್‌ಬಿಎ ಸೀಸನ್ ರದ್ದಾಗಿರುವುದನ್ನು ಬುಧವಾರ (ಮಾರ್ಚ್ 11) ಆಯೋಜಕರು ತಿಳಿಸಿದ್ದಾರೆ.
ಬುಧವಾರದ ಉತಾಹ್ ಜಾಝ್ ಮತ್ತು ಒಕ್ಲಹೋಮ ಸಿಟಿ ಥಂಡರ್ ತಂಡಗಳ ನಡುವಿನ ಎನ್‌ಬಿಎ ಪಂದ್ಯ ರದ್ದಾಯಿತು. ಪಂದ್ಯ ರದ್ದಾದ ಬೆನ್ನಲ್ಲೇ ಟೂರ್ನಿಯೇ ರದ್ದಾಯಿತು. ಉತಾಹ್ ಜಾಝ್‌ನ ಆಟಗಾರನೊಬ್ಬನಿಗೆ ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾದ ಬಳಿಕ ಟೂರ್ನಿ ರದ್ದುಕೊಂಡಿದೆ.
'ಮುಂದಿನ ಸೂಚನೆ ಬರುವ ತನಕ ಎನ್‌ಬಿಎ ಪಂದ್ಯಾಟವನ್ನು ರದ್ದುಗೊಳಿಸಲಾಗಿದೆ. ಕರೋನ ವೈರಸ್ ಸಾಂಕ್ರಾಮಿಕ ರೋಗಕ್ಕೆ ಮುನ್ನೆಚ್ಚರಿಕೆಯಾಗಿ ಎನ್‌ಬಿಎ ಈ ನಿರ್ಧಾರ ತಾಳಿದೆ,' ಎಂದು ಎನ್‌ಬಿಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕೊರೊನಾ ಸೋಂಕಿರುವ ಆಟಗಾರನನ್ನು ರೂಡಿ ಗೊಬರ್ಟ್ ಎಂದು ಗುರುತಿಸಲಾಗಿದೆ. ಈತ ಫ್ರೆಂಚ್ ಆಟಗಾರ.
ಈ ಬಾರಿಯ ಎನ್‌ಬಿಎ ಸೀಸನ್ ರದ್ದಾಗುವುದಕ್ಕೂ ಮುನ್ನ ಅಂದರೆ ಕೆಲ ದಿನಗಳ ಹಿಂದೆ, ಸುದ್ದಿಗೋಷ್ಠಿಯ ವೇಳೆ ರೂಡಿ ಗೊಬರ್ಟ್ ತನ್ನ ಅಕ್ಕಪಕ್ಕದಲ್ಲಿದ್ದ ಮೈಕ್ರೋಫೋನ್‌ಗಳನ್ನು, ಆಡಿಯೋ ರೆಕಾರ್ಡರ್‌ಗಳನ್ನು ಬೇಕೆಂದೇ ಮುಟ್ಟಿದ್ದು ವೀಡಿಯೋದಲ್ಲಿ ಸೆರೆಯಾಗಿತ್ತು. ಅನಂತರ ಅವರನ್ನು ಪರೀಕ್ಷೆಗೊಳಪಡಿಸಿದಾಗ ಅವರಿಗೆ ಸೋಂಕಿರುವುದು ಪತ್ತೆಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications