Diamond League 2024 Finals: ನೀರಜ್ ಚೋಪ್ರಾ, ಅವಿನಾಶ್ ಸಾಬಳೆ ಪಂದ್ಯಗಳು ಯಾವಾಗ? ಎಲ್ಲಿ ಪ್ರಸಾರ? ಇಲ್ಲಿದೆ ಮಾಹಿತಿ
ಭಾರತದ ಭರವಸೆಯ ಅಥ್ಲೀಟ್‌ಗಳಾದ ನೀರಜ್ ಚೋಪ್ರಾ ಹಾಗೂ ಅವಿನಾಶ್ ಸಾಬಳೆ ಅವರು ಡೈಮಂಡ್ ಲೀಗ್ 2024 ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಜಾವೆಲಿನ್ ಎಸೆತದಲ್ಲಿ ಅಮೋಘ ಸಾಧನೆ ಮಾಡಿರುವ ನೀರಜ್ ಚೋಪ್ರಾ ಹಾಗೂ ಸ್ಟೀಪಲ್‌ಚೇಸ್ ಅಥ್ಲೀಟ್ ಅವಿನಾಶ್ ಸಾಬಳೆ ಶುಕ್ರವಾರದಿಂದ ಪ್ರಾರಂಭವಾಗುವ ಡೈಮಂಡ್ ಲೀಗ್ ಸೀಸನ್‌ನ ಫೈನಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮೊದಲ ಬಾರಿಗೆ ಡೈಮಂಡ್ ಲೀಗ್ ಫೈನಲ್ ಎರಡು ದಿನಗಳ ಕಾಲ ನಡೆಯಲಿದೆ, ಇದರಲ್ಲಿ ಒಲಿಂಪಿಕ್ ಪದಕ ವಿಜೇತರು ಸೇರಿದಂತೆ ವಿಶ್ವದ ಅಗ್ರ ಆಟಗಾರರು 32 ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ. ಪೋಲ್ ವಾಲ್ಟ್ ರೆಕಾರ್ಡ್ ಹೋಲ್ಡರ್ ಅರ್ಮಾಂಡ್ ಡುಪ್ಲಾಂಟಿಸ್ ಸಹ ಈ ಬಾರಿ ಡೈಮಂಡ್ ಲೀಗ್‌ನಲ್ಲಿ ಅಂಗಳ ಪ್ರವೇಶಿಸಲಿದ್ದಾರೆ.

ಹ್ಯಾಟ್ರಿಕ್ ಪದಕದ ಬೇಟೆ
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮೋಘ ಸಾಧನೆ ಮಾಡಿರುವ ಭಾರತದ ನೀರಜ್ ಚೋಪ್ರಾ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿರಲಿದೆ. ಇವರು ಡೈಮಂಡ್ ಲೀಗ್ ಟೂರ್ನಿಯಲ್ಲಿನ ಹ್ಯಾಟ್ರಿಕ್ ಪದಕದ ಕನಸು ಕಾಣುತ್ತಿದ್ದಾರೆ. ಈ ಮೊದಲು ನೀರಜ್ 2022 ಡೈಮಂಡ್ ಲೀಗ್‌ನಲ್ಲಿ ಬಂಗಾರ, 2023ರಲ್ಲಿ ಬೆಳ್ಳಿ ಸಾಧನೆ ಮಾಡಿದ್ದಾರೆ. ಈ ಬಾರಿ ಮತ್ತೊಂದು ಪದಕ ಪಡೆದು ಹ್ಯಾಟ್ರಿಕ್ ಪದಕ ಬೇಟೆಯನ್ನು ಪೂರ್ಣ ಗೊಳಿಸುವ ವಿಶ್ವಾಸ ಹೊಂದಿದ್ದಾರೆ. ಪ್ಯಾರಿಸ್‌ನಲ್ಲಿ ಬೆಳ್ಳಿ ಗೆದ್ದ ನೀರಜ್, ಶನಿವಾರ ಮೈದಾನಕ್ಕಿಳಿಯಲಿದ್ದಾರೆ. ಮೊದಲ ಬಾರಿಗೆ ಡೈಮಂಡ್ ಲೀಗ್ ಫೈನಲ್‌ನಲ್ಲಿ ಇಬ್ಬರು ಭಾರತೀಯ ಆಟಗಾರರು ಭಾಗವಹಿಸಲಿದ್ದಾರೆ.
ಅವಿನಾಶ್ ಪಂದ್ಯ ಯಾವಾಗ?
ಸ್ಟೀಪಲ್ ಚೇಸ್ ಓಟದ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಓಟಗಾರ ಅವಿನಾಶ್ ಸಾಬಳೆ ಮೇಲೂ ಎಲ್ಲರ ಕಣ್ಣು ನೆಟ್ಟಿದೆ. ಇವರು ಪ್ಯಾರಿಸ್ ಒಲಿಂಪಿಕ್ಸ್‌ನ ಫೈನಲ್‌ಗೆ ಅರ್ಹತೆ ಪಡೆದು ದಾಖಲೆ ನಿರ್ಮಿಸಿದ್ದರು. ಮೊದಲ ಬಾರಿಗೆ ಡೈಮಂಡ್ ಲೀಗ್ ಸೀಸನ್‌ನ ಫೈನಲ್‌ನಲ್ಲಿ ಕಾಣಿಸಿಕೊಳ್ಳಲಿರುವ ಅವಿನಾಶ್ ಸ್ಪರ್ಧೆ ಶುಕ್ರವಾರ ನಡೆಯಲಿದೆ.

ಅವಿನೇಶ್ ಸೇಬಲ್ ಅವರ ಸ್ಪರ್ಧೆಯು ಶುಕ್ರವಾರ ಸ್ಥಳೀಯ ಕಾಲಮಾನ 9:09 ಕ್ಕೆ ಪ್ರಾರಂಭವಾಗುತ್ತದೆ. ಭಾರತ ಮತ್ತು ಬೆಲ್ಜಿಯಂ ನಡುವೆ 3 ಗಂಟೆ 30 ನಿಮಿಷಗಳ ವ್ಯತ್ಯಾಸವಿದೆ. ಅಂದರೆ ಭಾರತದಲ್ಲಿ ಈ ಪಂದ್ಯ ರಾತ್ರಿ 12:39ಕ್ಕೆ ಆರಂಭವಾಗಲಿದೆ. ನೀರಜ್ ಚೋಪ್ರಾ ಅವರ ಈವೆಂಟ್ ಭಾರತದಲ್ಲಿ ರಾತ್ರಿ 11:52 ಕ್ಕೆ ಆರಂಭವಾಗಲಿದೆ. ಡೈಮಂಡ್ ಲೀಗ್ ಫೈಲ್‌ಗಳ ಲೈವ್ ಸ್ಟ್ರೀಮಿಂಗ್ ಅನ್ನು ಜಿಯೋ ಸಿನಿಮಾ ಅಪ್ಲಿಕೇಶನ್ ಮೂಲಕ ನೋಡಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications