Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Neeraj Chopra: ಜು.5 ರಂದು ಬೆಂಗಳೂರಿನಲ್ಲಿ ನೀರಜ್ ಚೋಪ್ರಾ ಕ್ಲಾಸಿಕ್‌: ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಭಾರತದಲ್ಲಿ ಕ್ರೀಡೆ ವೇಗವಾಗಿ ಬೆಳೆಯುತ್ತಿದೆ. ಈಗ ದೇಶದಲ್ಲಿ ಎಲ್ಲ ಕ್ರೀಡೆಗಳ ಟೂರ್ನಿಗಳು ನಡೆಯುತ್ತಿವೆ. ಈಗ ಈ ಲೀಸ್ಟ್‌ಗೆ ಹೊಸ ಕ್ರೀಡೆಯೊಂದು ಸೇರ್ಪಡೆ ಆಗಿದೆ. ಭಾರತದ ಮೊದಲ ಅಂತಾರಾಷ್ಟ್ರೀಯ ಜಾವೆಲಿನ್ ಥ್ರೋ ಸ್ಪರ್ಧೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಟೂರ್ನಿಗೆ ನೀರಜ್ ಚೋಪ್ರಾ ಕ್ಲಾಸಿಕ್ ಎಂಬ ಹೆಸರನ್ನು ಈಡಲಾಗಿದೆ. ಈ ಟೂರ್ನಿ ಬೆಂಗಳೂರಿನ ಕಂಠೀರವಾ ಕ್ರೀಡಾಂಗಣದಲ್ಲಿ ಜುಲೂ 5 (ಶನಿವಾರ) ನಡೆಯಲಿದೆ. ಈ ಸ್ಪರ್ಧೆಯನ್ನು ನೀರಜ್ ಚೋಪ್ರಾ ಹಾಗೂ ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಆಯೋಜಿಸುತ್ತಿವೆ.

ಈ ಟೂರ್ನಿ ಮೇ 24 ರಂದು ನಡೆಯಬೇಕಿತ್ತು. ಆದರೆ ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆಯಿಂದಾಗಿ ಈ ಸ್ಪರ್ಧೆಯನ್ನು ಮುಂದೂಡಲಾಯಿತು. ಈ ಗ್ಯಾಪ್‌ನಲ್ಲಿ ನೀರಜ್‌ ಸಹ ಹಲವು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಿ ಪದಕದ ಬೇಟೆ ನಡೆಸಿದ್ದಾರೆ. ಈಗ ಬೆಂಗಳೂರಿನ ಅಭಿಮಾನಿಗಳ ಸಮ್ಮುಖದಲ್ಲಿ ನೀರಜ್‌, ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ.

Neeraj Chopra Classic 2025 India s First International Javelin Throw Competition Set for Bengaluru

ನೀರಜ್ ಚೋಪ್ರಾ ಕ್ಲಾಸಿಕ್ 2025 ರಲ್ಲಿ ಯಾರು ಭಾಗವಹಿಸುತ್ತಿದ್ದಾರೆ?

ಈ ಸ್ಪರ್ಧೆಯಲ್ಲಿ 2016 ರ ಒಲಿಂಪಿಕ್ ಚಾಂಪಿಯನ್ ಜರ್ಮನಿಯ ಥಾಮಸ್ ರೋಹ್ಲರ್, 2015 ವಿಶ್ವ ಚಾಂಪಿಯನ್ ಕೀನ್ಯಾದ ಜೂಲಿಯಸ್ ಯೆಗೊ, ಯುಎಸ್ಎಯ ಕರ್ಟಿಸ್ ಥಾಂಪ್ಸನ್, ಜೆಕ್ ಗಣರಾಜ್ಯದ ಮಾರ್ಟಿನ್ ಕೊನೆಕ್ನಿ, ಬ್ರೆಜಿಲ್‌ನ ಲೂಯಿಸ್ ಮೌರಿಸಿಯೊ ಡಾ ಸಿಲ್ವಾ, ಶ್ರೀಲಂಕಾದ ರುಮೇಶ್ ಪತಿರಾಜ್, ಪೋಲೆಂಡ್‌ನ ಸಿಪ್ರಿಯನ್ ಎಂ ಅದೃಷ್ಟ ಪರೀಕ್ಷೆಯನ್ನು ನಡೆಸಲಿದ್ದಾರೆ. ಅಲ್ಲದೆ ಭಾರತದ ಸಚಿನ್ ಯಾದವ್, ರೋಹಿತ್ ಯಾದವ್, ಸಾಹಿಲ್ ಸಿಲ್ವಾಲ್, ಯಶ್ವೀರ್ ಸಿಂಗ್ ಭಾಗವಹಿಸುತ್ತಿದ್ದಾರೆ.

ಈ ಸ್ಪರ್ಧೆ ನಡೆಯುವುದು ಯಾವಾಗ? ನಡೆಯುವುದು ಎಲ್ಲಿ.

ಜುಲೈ 5 ರಂದು ಶನಿವಾರ, ಬೆಂಗಳೂರಿನ ಕಂಠೀರವಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತೀಯ ಕಾಲಮಾನ ಎಷ್ಟು ಗಂಟೆಗೆ ಆರಂಭವಾಗುತ್ತದೆ?

Neeraj Chopra Classic 2025 India s First International Javelin Throw Competition Set for Bengaluru

ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಈ ಸ್ಪರ್ಧೆಯನ್ನು ಟಿವಿಯಲ್ಲಿ ನೇರಪ್ರಸಾರದಲ್ಲಿ ನೋಡಬಹುದಾ?

ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಮತ್ತು ಸ್ಟಾರ್ ಸ್ಪೋರ್ಟ್ಸ್ 2 ವೀಕ್ಷಿಸಬಹುದಾಗಿದೆ. ಅಲ್ಲದೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ನೀರಜ್ ಚೋಪ್ರಾ ಕ್ಲಾಸಿಕ್ 2025 ರ ನೋಡಬಹುದಾಗಿದೆ.

ನೀರಜ್‌ ಸಾಧನೆ

ನೀರಜ್‌ ಚೋಪ್ರಾ ಹಲವು ಪ್ರಥಮಗಳಿಗೆ ಪಾತ್ರವಾಗಿರುವ ಕ್ರೀಡಾ ಪಟು. ಇವರು ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಪರ ಟ್ರ್ಯಾಕ್‌ ಹಾಗೂ ಫೀಲ್ಡ್‌ನಲ್ಲಿ ಪದಕದ ಸಾಧನೆ ಮಾಡಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್‌ ಬಂಗಾರದ ಸಾಧನೆಯನ್ನು ಮಾಡಿದ್ದಾರೆ. ಅಲ್ಲದೆ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಸಾಧನೆ ಮಾಡಿ ಬೀಗಿದರು. ಈ ಮೂಲಕ ಟ್ರ್ಯಾಂಕ್‌ ಹಾಗೂ ಫೀಲ್ಡ್ ವಿಭಾಗದಲ್ಲಿ 2 ಪದಕಗಳನ್ನು ಗೆದ್ದ ಭಾರತೀಯ ಆಟಗಾರ ಎಂಬ ಹಿರಿಮೆ ಹೊಂದಿದ್ದಾರೆ. ಇನ್ನು ಇದೇ ವರ್ಷದ ದೋಹಾ ಕ್ವಾಲಿಫೈಯಿಂಗ್ ಸ್ಪರ್ಧೆಯಲ್ಲಿ ಮೊದಲ ಬಾರಿಗೆ 90 ಮೀಟರ್‌ ದಾಟಿ ಸಾಧನೆ ಮಾಡಿದ್ದಾರೆ.

Story first published: Friday, July 4, 2025, 15:56 [IST]
Other articles published on Jul 4, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+