For Quick Alerts
ALLOW NOTIFICATIONS  
For Daily Alerts

Neeraj Chopra: ಸತತ 2ನೇ ಬಾರಿಗೆ ಡೈಮಂಡ್ ಲೀಗ್ ಗೆದ್ದ ಚಿನ್ನದ ಹುಡುಗ ನೀರಜ್ ಚೋಪ್ರಾ

ಶುಕ್ರವಾರ, ಜೂನ್ 30ರಂದು ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಸತತ ಎರಡನೇ ಬಾರಿಗೆ ಡೈಮಂಡ್ ಲೀಗ್ ಪಂದ್ಯಾವಳಿಯನ್ನು ಗೆಲ್ಲಲು ಯಶಸ್ವಿಯಾದರು.

ಲೌಸನ್ನೆಯಲ್ಲಿ ನಡೆದ ಪಂದ್ಯಾವಳಿಯಲ್ಲಿ ನೀರಜ್ ಚೋಪ್ರಾ ಅವರು 87.66 ಮೀಟರ್‌ ದೂರ ಎಸೆಯುವ ಮೂಲಕ ಅಗ್ರಸ್ಥಾನ ಪಡೆದರು.

ನೀರಜ್ ಚೋಪ್ರಾ ತನ್ನ ಮೊದಲ ಪ್ರಯತ್ನದಲ್ಲಿ ಯಾವುದೇ ಗುರುತು ಇಲ್ಲದೆ ಪ್ರಾರಂಭಿಸಿದರು. ನಂತರ ಎರಡನೇ ಪ್ರಯತ್ನದಲ್ಲಿ 83.52 ಮೀಟರ್ ದೂರ ಎಸೆದರು. ಆ ಬಳಿಕ ಮೂರನೇ ಪ್ರಯತ್ನದಲ್ಲಿ 85.04 ಮೀಟರ್‌ ದೂರ ಎಸೆದಾಗ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಲು ಸಹಾಯ ಮಾಡಿತು.

Neeraj Chopra Clinches Diamond League Title For Second Consecutive Time

ಭಾರತದ ಸ್ಟಾರ್ ನೀರಜ್ ಚೋಪ್ರಾ ತನ್ನ ನಾಲ್ಕನೇ ಪ್ರಯತ್ನದಲ್ಲಿ ಮತ್ತೊಂದು ಅಂಕವನ್ನು ದಾಖಲಿಸಲು ವಿಫಲರಾದರು. ನಂತರ ಅಂತಿಮ ಎಸೆತದಲ್ಲಿ 87.66 ಮೀ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಈ ವೇಳೆ ನೀರಜ್ ಚೋಪ್ರಾ ಜರ್ಮನಿಯ ಜೂಲಿಯನ್ ವೆಬರ್ ಅವರಿಂದ ತೀವ್ರ ಪೈಪೋಟಿ ಎದುರಿಸಿದರು. ಜರ್ಮನಿ ಜಾವೆಲಿನ್ ಎಸೆತಗಾರ ಮೊದಲ ಪ್ರಯತ್ನದಲ್ಲಿ 86.20 ಮೀ. ದೂರ ಎಸೆದು ಆರಂಭಿಕ ಮುನ್ನಡೆ ಸಾಧಿಸಿದರು. ಅವರ ಅಂತಿಮ ಪ್ರಯತ್ನದಲ್ಲಿ 87.03 ಮೀ ಎಸೆಯುವ ಮೂಲಕ ಭಾರತೀಯನ ಸಮೀಪಕ್ಕೆ ಬಂದರೂ, ಮೀರಿಸಲು ಸಾಧ್ಯವಾಗಲಿಲ್ಲ.

ನೀರಜ್ ಚೋಪ್ರಾ ತನ್ನ ಋತುವಿನ ಸೊಗಸಾದ ಆರಂಭದೊಂದಿಗೆ ಏಷ್ಯನ್ ಗೇಮ್ಸ್ ಮತ್ತು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಅತ್ಯುತ್ತಮವಾಗಿ ತಯಾರಿ ನಡೆಸುತ್ತಿದ್ದಾರೆ. ಟೊಕಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಸ್ಥಿರ ಪ್ರದರ್ಶನದೊಂದಿಗೆ ಪುರುಷರ ಜಾವೆಲಿನ್ ವಿಭಾಗಲ್ಲಿ ತಮ್ಮ ಪ್ರಾಬಲ್ಯ ಸ್ಥಾಪಿಸುತ್ತಿದ್ದಾರೆ.

ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು 88.67 ಮೀಟರ್ ದೂರ ಎಸೆದು ದೋಹಾ ಡೈಮಂಡ್ ಲೀಗ್ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ 2023ರ ವರ್ಷವನ್ನು ಪ್ರಾರಂಭಿಸಿದ್ದರು.

25 ವರ್ಷದ ನೀರಜ್ ಚೋಪ್ರಾ ಸ್ನಾಯು ಸೆಳೆತ ಕಾರಣದಿಂದಾಗಿ ಜೂನ್ 4ರಂದು ಹೆಂಗೆಲೋ (ನೆದರ್ಲ್ಯಾಂಡ್ಸ್) ನಲ್ಲಿ ನಡೆದ FBK ಗೇಮ್ಸ್ ಮತ್ತು ಜೂನ್ 13ರಂದು ಫಿನ್‌ಲ್ಯಾಂಡ್‌ನ ಟರ್ಕುದಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್‌ನಿಂದ ಹೊರಬಂದರು. ಆದರೆ ನೀರಜ್ ಲೌಸನ್ನೆ ಡೈಮಂಡ್ ಲೀಗ್‌ನಲ್ಲಿ ಭಾಗವಹಿಸಲು ಅತ್ಯುತ್ತಮವಾಗಿ ಮರಳಿದರು.

ನೀರಜ್ ಚೋಪ್ರಾ ಅವರು ಇದೀಗ ತಮ್ಮ ಏಷ್ಯನ್ ಗೇಮ್ಸ್ ಕಿರೀಟ ಮತ್ತು ಒಲಿಂಪಿಕ್ ಚಿನ್ನದ ಪದಕವನ್ನು ರಕ್ಷಿಸುವ ನಿರ್ಣಾಯಕ 12 ತಿಂಗಳ ಅವಧಿಗೆ ಮುಂಚಿತವಾಗಿ ತಮ್ಮ ಫಿಟ್‌ನೆಸ್ ಕಾಪಾಡಿಕೊಳ್ಳಲು ಗಮನಹರಿಸಿದ್ದಾರೆ.

ಭಾರತದ ಚಿನ್ನದ ಹುಡುಗ 2023ರಲ್ಲಿ 90 ಮೀಟರ್ ಮಾರ್ಕ್ ಅನ್ನು ಮೀರಿಸುವ ಬಗ್ಗೆ ಮಾತನಾಡಿದ್ದರು. ಇದೆ ವೇಳೆ ಈ ಮೈಲಿಗಲ್ಲು ಸಾಧಿಸಲು ತಾವು ಒತ್ತಡದಲ್ಲಿಲ್ಲ ಎಂದು ಹೇಳಿದ್ದರು.

ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ ಎರಡನೇ ಅತ್ಯುತ್ತಮ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್ ಅವರನ್ನು ಮೀರಿಸಿದ್ದ ನೀರಜ್ ಚೋಪ್ರಾ 89.94 ಮೀಟರ್ ವೈಯಕ್ತಿಕ ಅತ್ಯುತ್ತಮ ಸಾಧನೆಯನ್ನು ಹೊಂದಿದ್ದಾರೆ.

Story first published: Saturday, July 1, 2023, 11:18 [IST]
Other articles published on Jul 1, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+