ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆದ ನೀರಜ್ ಚೋಪ್ರಾ
ಭಾರತದ ಖ್ಯಾತ ಜಾವೆಲಿನ್ ಕ್ರೀಡಾಪಟು ನೀರಜ್ ಚೋಪ್ರಾ ಗಾಯದ ಸಮಸ್ಯೆಯಿಂದ ಈಗ ಮೈದಾನಕ್ಕೆ ಇಳಿದಿದ್ದಾರೆ. ಶುಕ್ರವಾರ ದೋಹಾ ಡೈಮಂಡ್ ಲೀಗ್‌ನಲ್ಲಿ ಸ್ಪರ್ಧಾತ್ಮಕ ಕ್ರೀಡೆಗೆ ಮತ್ತೆ ಎಂಟ್ರಿ ಮಾಡಿದ ನೀರಜ್, ಪದಕ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಈ ಲೀಗ್‌ನಲ್ಲಿ ಬಂಗಾರದ ಪದಕವನ್ನು ಶ್ರೀಲಂಕಾದ ರುಮೇಶ್ ತರಂಗ ಪತಿರಗೆ ಪಾಲಾಗಿದೆ.
ಚೋಪ್ರಾ ಅವರು ತಮ್ಮ ಮೂರನೇ ಎಸೆತದಲ್ಲಿ 85.69 ಮೀಟರ್ ದೂರ ಜಾವೆಲಿನ್ ಎಸೆದು ಸಾಧನೆ ಮಾಡಿದರು. ಅಲ್ಲದೆ ಕಾಮನ್‌ವೆಲ್ತ್ ಗೇಮ್ಸ್ ಅರ್ಹತೆಯ ಮಾರ್ಕ್ ದಾಟಿದರು. ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆಯಲು 82.61 ಮೀಟರ್ ದಾಟ ಬೇಕಿತ್ತು.

ಈ ಲೀಗ್‌ನಲ್ಲಿ ಶ್ರೀಲಂಕಾದ ಪತಿರಗೆ ಅವರು 88.68 ದೂರ ಜಾವೆಲಿನ್ ಎಸೆದು ಪ್ರಥಮ ಸ್ಥಾನವನ್ನು ಪಡೆದರು. ಇನ್ನು ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್ 86.38 ಮೀಟರ್ ದೂರ ಎಸೆದು ಎರಡನೇ ಸ್ಥಾನ, ಅಮೆರಿಕದ ಕರ್ಟಿಸ್ ಥಾಂಪ್ಸನ್ 85.99 ಮೀ ದೂರ ಜಾವೆಲಿನ್ ಎಸೆದು ಮೂರನೇ ಸ್ಥಾನ ಪಡೆದಿದ್ದಾರೆ.
ಗಾಯದ ಬಳಿಕ ಅಖಾಡಕ್ಕೆ
ನೀರಜ್ ಚೋಪ್ರಾ ಅವರಿಗೆ ಪದಕ ಗೆಲ್ಲದ ಬೇಸರಕ್ಕಿಂತ ಒಂದು ವರ್ಷದ ಬಳಿಕ ಮೈದಾನಕ್ಕೆ ಇಳಿದು ಸ್ಥಿರ ಪ್ರದರ್ಶನ ನೀಡುವಲ್ಲಿ ಸಫಲರಾಗಿರುವುದು ಸಂತಸ ತಂದಿದೆ. ಭಾರತೀಯ ಆಟಗಾರ ಫೌಲ್‌ನೊಂದಿಗೆ ಆರಂಭ ಮಾಡಿದರು. ಎರಡನೇ ಅವಕಾಶದಲ್ಲಿ 82.77 ಮೀ, 85.69 ಮೀ ಮತ್ತು 83.45 ಮೀ ಎಸೆದು ಬೀಗಿದರು.
ಶ್ರೀಲಂಕಾದ ಪತಿರಗೆ ಪುರುಷರ ಜಾವೆಲಿನ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುವವರಲ್ಲಿ ಒಬ್ಬರು. ದೋಹಾದಲ್ಲಿ ಅವರು ಈ ಋತುವಿನಲ್ಲಿ ನಾಲ್ಕನೇ ಬಾರಿಗೆ 88 ಮೀಟರ್ ದಾಟಿದ್ದಾರೆ. ಇದಕ್ಕೂ ಮೊದಲು ಪತಿರಗೆ 89.37 ಮೀ, 89.28 ಮೀ, 92.62 ಮೀ ಮತ್ತು 88.68 ಮೀ ದೂರ ಎಸೆದರು.
ಬೆಂಗಳೂರಿನಲ್ಲಿ ಈ ವರ್ಷದ ಆರಂಭದಲ್ಲಿ ನಡೆದಿದ್ದ ನೀರಜ್ ಚೋಪ್ರಾ ಕ್ಲಾಸಿಕ್ ಟುರ್ನಿಯಲ್ಲಿ ಶ್ರೀಲಂಕಾದ ರುಮೇಶ್ ಅವರು ಕಣಕ್ಕೆ ಇಳಿದು ಸುದ್ದಿಯಾಗಿದ್ದರು.
ಭಾರತದ ಸ್ಟಾರ್ ಅಥ್ಲಿಟ್ ನೀರಜ್ ಚೋಪ್ರಾ ಅವರು ಎರಡು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಸಾಧನೆ ಮಾಡಿದ್ದಾರೆ. ಇವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಂಗಾರ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಸಾಧನೆ ಮಾಡಿದ್ದಾರೆ.
ಬೆನ್ನು ನೋವಿನಿಂದ ಚೇತರಿಸಿಕೊಂಡು ಸುಮಾರು 9 ತಿಂಗಳ ಸುದೀರ್ಘ ವಿರಾಮದ ಬಳಿಕ ಕಣಕ್ಕಿಳಿದಿದ್ದ ನೀರಜ್ ಚೋಪ್ರಾ ಅವರಿಗೆ ಈ ಪ್ರದರ್ಶನವು ಮುಂಬರುವ ದಿನಗಳಿಗೆ ಉತ್ತಮ ಆತ್ಮವಿಶ್ವಾಸ ನೀಡಿದೆ. ದೋಹಾ ಡೈಮಂಡ್ ಲೀಗ್‌ನಲ್ಲಿ ಕೇವಲ 0.30 ಮೀಟರ್‌ಗಳ ಅಂತರದಿಂದ ಪದಕದ ಅವಕಾಶ ತಪ್ಪಿಸಿಕೊಂಡರು. ಮುಂಬರುವ ಜುಲೈ 23 ರಿಂದ ಆಗಸ್ಟ್ 2 ರವರೆಗೆ ಗ್ಲ್ಯಾಸ್ಗೋದಲ್ಲಿ ನಡೆಯಲಿರುವ 2026ರ ಕಾಮನ್‌ವೆಲ್ತ್ ಗೇಮ್ಸ್ ಕೂಟಕ್ಕೆ ಭಾರತದ 32 ಸದಸ್ಯರ ಅಥ್ಲೆಟಿಕ್ಸ್ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications