For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್‌ನಲ್ಲಿ ಚಿನ್ನದ ಸಾಧನೆಯ ಬಳಿಕ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದ ನೀರಜ್ ಚೋಪ್ರಾ

Neeraj Chopra gains 14 spots in world Javelin rankind now he ranked World No. 2

ನವದೆಹಲಿ, ಆಗಸ್ಟ್ 12: ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನವನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈಗ ನೀರಜ್ ಮತ್ತೊಂದು ಮಹತ್ವದ ಮೈಲಿಗಲ್ಲು ನೆಟ್ಟಿದ್ದಾರೆ. ವಿಶ್ವ ಜಾವೆಲಿನ್ ಶ್ರೇಯಾಂಕಪಟ್ಟಿಯಲ್ಲಿ ಚೋಪ್ರಾ 14 ಅಂಕಗಳ ಏರಿಕೆಯನ್ನು ಕಂಡು 2ನೇ ಸ್ಥಾನವನ್ನು ತಲುಪಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಭಾಗಿಯಾಗುವ ಮುನ್ನ ನೀರಜ್ ಚೋಪ್ರಾ ಅವರ ಶ್ರೇಯಾಂಕ 16ನೇ ಸ್ಥಾನದಲ್ಲತ್ತು. ಆದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನೀರಜ್ ಐತಿಹಾಸಿಕ ಸಾಧನೆ ಮಾಡುವ ಮೂಲಕ ಭಾರತಕ್ಕೆ ಚಿನ್ನದ ಪದಕವನ್ನು ಕೊರಳಿಗೇರಿಸಿದ್ದಾರೆ.

ನೀರಜ್ ಚೋಪ್ರಾ ಪುರುಷರ ಜಾವೆಲಿನ್ ಎಸೆತದಲ್ಲಿ ಚಿನ್ನವನ್ನು ಗೆಲ್ಲುವ ಮೂಲಕ ಭಾರತ ಒಲಿಂಪಿಕ್ಸ್ ಇತಿಹಾಸದಲ್ಲಿ ಪ್ರಥಮ ಬಾರಿಗೆ ಟ್ರ್ಯಾಕ್ ಆ್ಯಂಡ್ ಫೀಲ್ಟ್‌ನಲ್ಲಿ ಚಿನ್ನವನ್ನು ಗೆದ್ದ ಸಾಧನೆಯನ್ನು ಮಾಡಿತ್ತು. ನೀರಜ್ ಚೋಪ್ರಾ ಅವರು ಟೋಕಿಯೋ ಒಲಿಂಪಿಕ್ಸ್‌ನಲ್ಲಿ 87.58 ಮೀಟರ್ ದೂರಕ್ಕೆ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇದು 2000ನೇ ಇಸವಿಯ ಒಲಿಂಪಿಕ್ಸ್‌ನ ಬಳಿಕ ನಾಲ್ಕನೇ ಅತ್ಯುತ್ತಮ ಜಾವೆಲಿನ್ ಎಸೆತವಾಗಿದೆ.

ಜಾವೆಲಿನ್ ಶ್ರೇಯಾಂಕ ಪಟ್ಟಿಯಲ್ಲಿ 1315 ಅಂಕಗಳನ್ನು ಹೊಂದಿರುವ ನೀರಜ್ ಚೋಪ್ರಾ ಈಗ ಶ್ರೇಯಾಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಸ್ಥಾನದಲ್ಲಿರುವ ಜೋಹಾನ್ಸ್ ವೆಟ್ಟರ್ ಅವರಿಗಿಂತ ಹಿಂದಿದ್ದಾರೆ. ಮೊದಲ ಸ್ಥಾನದಲ್ಲಿರುವ ವೆಟ್ಟರ್ 1396 ಅಂಗಳನ್ನು ಗಳಿಸಿದ್ದಾರೆ. ಅವರು 2021ರ ಇಸವಿಯಲ್ಲಿ 90 ಮೀಟರ್‌ಗೂ ಅಧಿಕ ದೂರಕ್ಕೆ ಸುಮಾರು 7 ಬಾರಿ ಎಸೆದಿದ್ದಾರೆ.

ವಿಶ್ವ ಜಾವೆಲಿನ್ ಎಸೆತಗಾರರ ಶ್ರೇಯಾಂಕಪಟ್ಟಿ ಹಾಗೂ ಅಂಕಗಳು
1. ಜೋಹಾನ್ಸ್ ವೆಟರ್- 1396 ಅಂಕಗಳು
2. ನೀರಜ್ ಚೋಪ್ರಾ- 1315 ಅಂಕಗಳು
3. ಮಾರ್ಸಿನ್ ಕ್ರುಕೋವ್ಸ್ಕಿ- 1302 ಅಂಕಗಳು
4. ಯಾಕೂಬ್ ವಾಡ್ಲೆಜ್ಚ್- 1298 ಅಂಕಗಳು
5. ಜೂಲಿಯನ್ ವೆಬರ್- 1291 ಅಂಕಗಳು

ಇನ್ನು ರ್ಯಾಂಕಿಂಗ್‌ನಲ್ಲಿ ಗಳಿಸಿದ ಅತ್ಯುನ್ನತ ಸಾಧನೆಯ ಬಗ್ಗೆಯೂ ನೀರಜ್ ಚೋಪ್ರಾ ಮಾತನಾಡಿದ್ದಾರೆ. ಇಂಡಿಯಾ ಟುಡೇಗೆ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಶ್ರೇಯಾಂಕಗಳ ಬಗ್ಗೆ ಯಾವಾಗಲೂ ನಂಬಿಕೆಯನ್ನು ಹೊಂದಿಲ್ಲ ಎಂದಿದ್ದಾರೆ. "ನಾನು ಚೊನ್ನದ ಪದಕದ ಬಗ್ಗೆ ಯೋಚನೆಯನ್ನು ಮಾಡಿರಲಿಲ್ಲ. ಒಲಿಂಪಿಕ್ಸ್‌ಗೆ ನೀವು ಅರ್ಹತೆಯನ್ನು ಪಡೆದುಕೊಂಡ ನಂತರ ನಿಮಗೆ ಶ್ರೇಯಾಂಕಗಳು ಮುಖ್ಯವಾಗುವುದಿಲ್ಲ. ನಿಮ್ಮ ಪ್ರದರ್ಶನ ಆ ದಿನದ ಮಟ್ಟಿಗೆ ನೀವು ಎಷ್ಟು ಉತ್ತಮವಾಗಿದ್ದೀರಿ ಎಂಬುದಷ್ಟೇ ಮುಖ್ಯವಾಗುತ್ತದೆ. ಈಗ ನಾನು ಈ ನಂಬಿಕೆಯ ಮೇಲೆ ಮತ್ತಷ್ಟು ಮತ್ತಷ್ಟು ಹೆಚ್ಚಿನ ವಿರ್ಶವಾಸವನ್ನು ಹೊಂದಿದ್ದೇನೆ ಎಂದು ನೀರಜ್ ಚೋಪ್ರಾ ಹೇಳಿದ್ದಾರೆ.

ಇನ್ನು ವಿಶ್ವದ ನಂಬರ್ 1 ಶ್ರೇಯಾಂಕದ ವೆಟ್ಟರ್ ಅವರ ಆಂಗಿಕ ಭಾಷೆ ಫೈನಲ್‌ನಲ್ಲಿ ಕುಸಿದಿತ್ತು ಎಂಬುದನ್ನು ನೀರಜ್ ಚೋಪ್ರಾ ಒತ್ತಿ ಹೇಳಿದ್ದಾರೆ. ಒಲಿಂಪಿಕ್ಸ್ ಫೈನಲ್‌ನಲ್ಲಿ ಜರ್ಮನ್‌ನ ಅಗ್ರ ಶ್ರೇಯಾಂಕದ ಆಟಗಾರ ಅತ್ಯುತ್ತಮ ಫಾರ್‌ಮ್‌ನಲ್ಲಿದ್ದರೆ ತನ್ನ ಪ್ರದರ್ಶನವೂ ಕೂಡ 87.58ಕ್ಕಿಂತ ಹೆಚ್ಚಿನದಾಗಿರುತ್ತಿತ್ತು ಎಂದಿದ್ದಾರೆ ನೀರಜ್ ಚೋಪ್ರಾ.

"ಫೈನಕ್ ಹಂತದಲ್ಲಿ ನಾನು ತನನ್ ಎಸೆತದ ಮೇಲೆ ಮಾತ್ರವೇ ಚಿತ್ತವನ್ನು ನೆಟ್ಟಿದ್ದೆ. ನನಗಿಂತ ಉತ್ತಮವಾಗಿ ಆತನಿಂದ ಪ್ರದರ್ಶನ ಬಂದಿದ್ದರೂ ನಾನು ಯಾವುದೇ ಒತ್ತಡವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಅದರ ಬದಲಿಗೆ ನಾನು ಇದಕ್ಕಿಂತಲೂ ದೊಡ್ಡ ಎಸೆತವನ್ನು ಎಸೆಯಲು ಸಾಧ್ಯವಾಗುತ್ತಿತ್ತು" ಎಂದಿದ್ದಾರೆ ನೀರಜ್ ಚೋಪ್ರಾ. ಭಾರತಕ್ಕೆ ವಾಪಾಸಾಗಿರುವ ನೀರಜ್ ಚೋಪ್ರಾ ಈಗ ಸಾಕಷ್ಟು ಸನ್ಮಾನ ಪುರಸ್ಕಾರಗಳನ್ನು ಪಡೆಯುತ್ತಿದ್ದಾರೆ. ಹಲವು ರಾಜ್ಯಗಳು ಸಂಸ್ತೆಗಳು ನೀರಜ್ ಚೋಪ್ರಾ ಅವರ ಸಾಧನೆಗೆ ನಗದಿನ ರೂಪದಲ್ಲಿ ಬಹುಮಾನಗಳನ್ನು ಕೂಡ ಘೋಷಣೆ ಮಾಡಿದೆ.

Story first published: Friday, August 13, 2021, 7:58 [IST]
Other articles published on Aug 13, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+