ಆಗಸ್ಟ್ 18 ಭಾನುವಾರ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರಿಂದ ಪಾಕಿಸ್ತಾನದ ಅರ್ಷದ್ ನದೀಮ್ ಚಿನ್ನದ ಪದಕವನ್ನು ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ. ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ 89.45 ಮೀಟರ್ ದೂರ ಎಸೆದು ಬೆಳ್ಳಿ ಪದಕಕ್ಕರ ತೃಪ್ತಿಪಟ್ಟರ. ಅರ್ಷದ್ ನದೀಮ್ 92.97 ಮೀಟರ್ ಎಸೆತದೊಂದಿಗೆ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದರು. ಈ ಥ್ರೋ ಒಲಿಂಪಿಕ್ ದಾಖಲೆಯನ್ನೂ ಮಾಡಿತ್ತು.
ಅರ್ಹತಾ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡಿ 89.34 ಮೀಟರ್ ದೂರ ಎಸೆದ ನೀರಜ್, ಬಂಗಾರ ಗೆಲ್ಲುವ ಭರವಸೆಯೊಂದಿಗೆ ಫೈನಲ್ ಪ್ರವೇಶಿಸಿದ್ದರು. ಫೈನಲ್‌ನಲ್ಲಿ ನೀರಜ್ ಎರಡನೇ ಪ್ರಯತ್ನದಲ್ಲಿ 89.45 ಮೀಟರ್ ದೂರ ಎಸೆದರು. ಇದು ಅವರ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ಎಸೆತಕ್ಕಿಂತ ಉತ್ತಮವಾಗಿತ್ತು. ಆದರೆ, ಈ ಬಾರಿಯ ಚಿನ್ನದ ಪದಕ ಪಡೆಯಲು ಈ ದೂರ ಸಾಕಾಗಲಿಲ್ಲ.

ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ನೀರಜ್ ಚೋಫ್ರಾ ಗಾಯಾಗೊಂಡಿದ್ದರು. ಹೀಗಾಗಿ ಅವರು ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿಯೂ ಭಾಗವಹಿಸಲಿಲ್ಲ. ಪ್ಯಾರಿಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲಲು ಭರ್ಜರಿ ತಯಾರಿ ನಡೆಸಿದ್ದರು. ಆದರೆ ಅವರಿಂದ ಟೋಕಿಯೊ ಪದಕವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದೀಗ ಚಿನ್ನದ ಪದಕ ಕಳೆದುಕೊಂಡ ಬಗ್ಗೆ ನೀರಜ್ ಕಾರಣಗಳನ್ನು ತಿಳಿಸಿದ್ದಾರೆ.
ಮಾಧ್ಯಮವೊಂದರ ಜೊತೆಗೆ ಮಾತನಾಡಿರುವ ನೀರಜ್ ತಾವು ಚಿನ್ನದ ಪದಕವನ್ನು ಏಕೆ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಕಾರಣ ಕೊಟ್ಟಿದ್ದಾರೆ. ಅರ್ಷದ್ ನದೀಮ್ ಪ್ರತಿಸ್ಪರ್ಧಿಯಾಗಿದ್ದರೂ, ಅವರನ್ನು ಗೌರವಿಸುವುದರ ಜೊತೆಗೆ ಸ್ಪರ್ಧಿಸಲು ಇಷ್ಟಪಡುತ್ತೇನೆ.
ನದೀಮ್ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅವರ ವಿರುದ್ಧ ಸ್ಪರ್ಧಿಸುವುದು ಯಾವಾಗಲೂ ನನಗೆ ಸ್ವಲ್ಪ ಸಕಾರಾತ್ಮಕತೆಯನ್ನು ತರುತ್ತದೆ. ಫೈನಲ್ ಪಂದ್ಯದಲ್ಲೂ ನಾವು ಉತ್ತಮ ಹೋರಾಟವನ್ನು ನಡೆಸಿದ್ದೇವೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
'ಅರ್ಷದ್ ತನ್ನ ಎರಡನೇ ಪ್ರಯತ್ನದಲ್ಲಿ ಒಲಿಂಪಿಕ್ ದಾಖಲೆ ಮಾಡಿದ ನಂತರ ಒತ್ತಡ ಹೆಚ್ಚಾಯಿತು. ದರೆ ನಾನು ಕೂಡ ನನ್ನ ದಾಖಲೆಯನ್ನು ಮುರಿಯಬಲ್ಲೆ ಎಂಬ ವಿಶ್ವಾಸದಲ್ಲಿದೆ. ಆದರೆ, ನನ್ನ ದೇಹ ಸಹಕರಿಸಲಿಲ್ಲ ಎಂದು ಚಿನ್ನ ಕಳೆದುಕೊಂಡ ಬಗ್ಗೆ ನೀರಜ್ ತಿಳಿಸಿದ್ದಾರೆ.
'ಒಲಿಂಪಿಕ್ಸ್‌ನಲ್ಲಿ ಪ್ರದರ್ಶನ ನೀಡುವುದು ಸುಲಭವಲ್ಲ. ವಿಶೇಷವಾಗಿ ನೀವು ನಿಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವಾಗ. ಚಿನ್ನದ ಪದಕ ಗೆಲ್ಲದಿದ್ದಕ್ಕೆ ನನಗೆ ನಿರಾಸೆಯಾಗಿದೆ. ಆದರೆ ಬೆಳ್ಳಿ ಪದಕ ಗೆದ್ದಿರುವುದು ಸಂತೋಷವಾಗಿದೆ. ಈಗ ನಾವು ಮಾಡಿರುವ ತಪ್ಪುಗಳ ಮೇಲೆ ಕೆಲಸ ಮಾಡಬೇಕಾಗಿದೆ' ಎಂದು ನೀರಜ್ ವಿವರಿಸಿದ್ದಾರೆ.
ಪ್ರಸ್ತುತ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನೀರಜ್ ತಮ್ಮ ಕೋಚ್ ಕ್ಲಾಸ್ ಬಾರ್ಟೋನಿಟ್ಜ್ ಮತ್ತು ಫಿಸಿಯೋ ಇಶಾನ್ ಮರ್ವಾಹ್ ಅವರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ. ಆಗಸ್ಟ್ 22 ರಿಂದ ಪ್ರಾರಂಭವಾಗಲಿರುವ ಲಾಸಾನ್ನೆ ಡೈಮಂಡ್ ಲೀಗ್‌ನಲ್ಲಿ ಅವರು ಭಾಗವಹಿಸಲಿದ್ದಾರೆ.