Neeraj Chopra: ಎರಡು ಪದಕ ಗೆದ್ದ ಭಾರತದ ಕ್ರೀಡಾಪಟುಗಳ ಪಟ್ಟಿಗೆ ನೀರಜ್ ಎಂಟ್ರಿ: ಯಾರೆಲ್ಲಾ ಈ ಪಟ್ಟಿಯಲ್ಲಿ ಇದ್ದಾರೆ?
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಬಂಗಾರ ಗೆಲ್ಲುವಲ್ಲಿ ವಿಫಲರಾದರೂ ಸಹ ಇತಿಹಾಸದ ಪುಟದಲ್ಲಿ ತಮ್ಮ ಹೆಸರನ್ನು ನಮೂದಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಭಾರತೀಯ ಅಥ್ಲೀಟ್ ಪಟ್ಟಿಗೆ ನೀರಜ್ ಎಂಟ್ರಿ ನೀಡಿದ್ದಾರೆ. ಅಲ್ಲದೆ ಟ್ರ್ಯಾಕ್ ಆಂಡ್ ಫೀಲ್ಡ್ ವಿಭಾಗದಲ್ಲಿ ಎರಡು ಪದಕ ಗೆದ್ದ ಸ್ವಾತಂತ್ರ್ಯ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ನೀರಜ್ ಪಾತ್ರರಾಗಿದ್ದಾರೆ.
ನೀರಜ್ ಚೋಪ್ರಾ ಭಾರತದ ನ್ಯೂ ಪೋಸ್ಟರ್ ಬಾಯ್. ಟ್ರ್ಯಾಕ್ ಆಂಡ್ ಫೀಲ್ಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ನೀರಜ್ ಹಲವು ದಾಖಲೆಗಳ ಒಡೆಯ. ನೀರಜ್ ಚೋಪ್ರಾ ಅವರ ಭರ್ಜರಿ ಪ್ರದರ್ಶನಕ್ಕೆ ಭಾರತ ಸಲಾಂ ಹೇಳುತ್ತಿದೆ. ನೀರಜ್ ಸದ್ಯ ಭಾರತದ ಯುವಕರ ರೋಲ್ ಮಾಡೆಲ್. ಟ್ರ್ಯಾಕ್ ಆಂಡ್ ಫೀಲ್ಡ್‌ನಲ್ಲಿ ನೀರಜ್ ಚೋಪ್ರಾ ಸಾಧನೆ ಎಂತಹದ್ದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಯೂತ್ ಒಲಿಂಪಿಕ್ಸ್ ಬೆಳ್ಳಿ ಪದಕ
ಭಾರತದ ನೀರಜ್ ಚೋಪ್ರಾ ಅವರು 24 ಡಿಸೆಂಬರ್ 1997ರಲ್ಲಿ ಹರಿಯಾಣದಲ್ಲಿ ಜನಿಸಿದರು. ತಮ್ಮ 13ನೇ ವರ್ಷದಲ್ಲಿ ನೀರಜ್ ಜಾವೆಲಿನ್ ಥ್ರೋದತ್ತ ಮುಖ ಮಾಡಿದರು. ಯಾವುದೇ ಅಭ್ಯಾಸವಿಲ್ಲದೆ ಇವರು ತಮ್ಮ ಮೊದಲ ಪ್ರಯತ್ನದಲ್ಲಿ 40 ಮೀಟರ್ ದೂರ ಎಸೆದು ಎಲ್ಲರ ಗಮನ ಸೆಳೆದಿದ್ದರು.
2013ರಲ್ಲಿ ನೀರಜ್ ಚೋಪ್ರಾ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಭಾಗವಹಿಸಿದ್ದರು. ಆದರೆ 2014ರ ಬ್ಯಾಂಕಾಕ್ ಯೂತ್ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದು ಭರವಸೆ ಮೂಡಿಸಿದ್ದರು. ಈ ವೇಳೆ ಅವರು 70 ಮೀಟರ್ ಜಾವೆಲಿನ್ ಎಸೆದು ಅಬ್ಬರಿಸಿದ್ದರು. ಒಂದೇ ವರ್ಷದಲ್ಲಿ ತಮ್ಮದೇ ದಾಖಲೆಯನ್ನು ಅಳಿಸಿ ಹಾಕಿದರು.

ನೀರಜ್ ಸಾಧನೆ
ಟೊಕಿಯೋ ಒಲಿಂಪಿಕ್ಸ್ 2021ರ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಬಂಗಾರದ ಸಾಧನೆಯನ್ನು ಮಾಡಿದ್ದರು. ಅಲ್ಲದೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 2023ರಲ್ಲಿ ಬಂಗಾರ, 2022ರಲ್ಲಿ ಬೆಳ್ಳಿ ಸಾಧನೆ ಮಾಡಿದ್ದರು. ಇನ್ನು ಡೈಮಂಡ್ ಲೀಗ್‌ನಲ್ಲಿ ಬಂಗಾರ ಹಾಗೂ ಬೆಳ್ಳಿ ಸಾಧನೆ ಮಾಡಿದ್ದಾರೆ. ಅಲ್ಲದೆ 2018 ಹಾಗೂ 2022ರ ಏಷ್ಯನ್ ಗೇಮ್ಸ್‌ನಲ್ಲಿ ನೀರಜ್ ಬಂಗಾರದ ಸಾಧನೆಯನ್ನು ಮಾಡಿದ್ದರು. 2018 ಕಾಮನ್ ವೆಲ್ತ್ ಗೇಮ್ಸ್‌ನಲ್ಲಿ ಬಂಗಾರ, 2017ರ ಏಷ್ಯನ್ ಚಾಂಪಿಯನ್ ಶಿಪ್‌ನಲ್ಲಿ ಸ್ವರ್ಣ, 2016 ಸೌತ್ ಏಷ್ಯನ್ ಗೇಮ್ಸ್ ಚಿನ್ನ ಪಡೆದು ಸಾಧನೆ ಮಾಡಿದ್ದಾರೆ.
ಒಲಿಂಪಿಕ್ಸ್ ಎರಡು ಪದಕ
ಭಾರತದ ಪರ ಎರಡು ಒಲಿಂಪಿಕ್ಸ್ ಪದಕ ಗೆದ್ದ ಅಥ್ಲೀಟ್ ಗ್ರುಪ್‌ಗೆ ನೀರಜ್ ಎಂಟ್ರಿ ನೀಡಿದ್ದಾರೆ. ಸ್ವಾತಂತ್ರ್ಯ ಭಾರತದಲ್ಲಿ ಈ ಸಾಧನೆಯನ್ನು ಮೊದಲ ಭಾರಿಗೆ ಕುಸ್ತಿ ಪಟು ಸುಶಿಲ್ ಕುಮಾರ್ ಮಾಡಿದ್ದರು. ಇವರು ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚು, ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಇನ್ನು ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ, ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಸಾಧನೆ ಮಾಡಿದ್ದಾರೆ.

ಪ್ರಸಕ್ತ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಅವರು ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಇವರು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಹಾಗೂ ಮಿಕ್ಸಡ್ 10 ಮೀಟರ್ ಏರ್ ಪಿಸ್ತೂಲ್ ಟೀಮ್ ವಿಭಾಗದಲ್ಲಿ ಕಂಚು ತಮ್ಮದಾಗಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications