Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympics 2024: ಪ್ಯಾರಿಸ್‌ ಒಲಿಂಪಿಕ್ಸ್‌ಗಾಗಿ ಭಾರತ ಅಥ್ಲೆಟಿಕ್ಸ್ ತಂಡವನ್ನು ಮುನ್ನಡೆಸಲಿರುವ ನೀರಜ್ ಚೋಪ್ರಾ

ಜುಲೈ 5 ಶುಕ್ರವಾರ, ಭಾರತದ ಗೋಲ್ಡನ್ ಬಾಯ್ ಮತ್ತು ಹಾಲಿ ಚಾಂಪಿಯನ್ ನೀರಜ್ ಚೋಪ್ರಾ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಭಾರತದ ಅಭಿಮಾನಿಗಳು ತಮ್ಮ ಸ್ಟಾರ್ ಜಾವೆಲಿನ್ ಎಸೆತಗಾರ ಅಮೋಘ ಪ್ರದರ್ಶನ ನೀಡಿ ದೇಶಕ್ಕೆ ಮತ್ತೊಮ್ಮೆ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಇದರ ಜೊತೆಗೆ ನೀರಜ್‌ ಚೋಪ್ರಾ ಅವರಿಗೆ ಮತ್ತೊಂದು ಜವಾಬ್ದಾರಿ ನೀಡಲಾಗಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ನೀರಜ್ ಚೋಪ್ರಾ ಅವರು 28 ಸದಸ್ಯರ ಭಾರತ ಅಥ್ಲೆಟಿಕ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ನೀರಜ್ ಚೋಪ್ರಾ ನೇತೃತ್ವ ವಹಿಸಲಿರುವ 28 ಸದಸ್ಯರ ತಂಡದಲ್ಲಿ ಒಟ್ಟು 17 ಪುರುಷ ಮತ್ತು 11 ಮಹಿಳಾ ಅಥ್ಲೀಟ್‌ಗಳಿದ್ದಾರೆ.

Neeraj Chopra lead to Indian athletics team for 2024 Paris Olympics

ಪುರುಷರ ವಿಭಾಗದಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಅಬ್ಬರಿಸಿದ ಅವಿನಾಶ್ ಸೇಬಲ್, ಸ್ಪ್ರಿಂಟ್ ಹರ್ಡಲ್ಸ್ ರೇಸ್‌ನಲ್ಲಿ ಭಾಗವಹಿಸಿದ್ದ ತೇಜಿಂದರ್‌ಪಾಲ್ ಸಿಂಗ್ ತೂರ್ ಮತ್ತು ಮಹಿಳಾ ಆಟಗಾರ್ತಿ ಜ್ಯೋತಿ ಯರಾಜಿ ಅವರ ಹೆಸರುಗಳು ಕೂಡ 28 ಅಥ್ಲೀಟ್‌ಗಳ ತಂಡದಲ್ಲಿದೆ.

ಈ ಎಲ್ಲಾ ಆಟಗಾರರು ಮತ್ತೊಮ್ಮೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತಕ್ಕೆ ಕಳೆದ ಬಾರಿಕ್ಕಿಂತ ಹೆಚ್ಚು ಚಿನ್ನದ ಪದಕಗಳನ್ನು ಗೆಲ್ಲಲು ನಿರೀಕ್ಷೆಯಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಆಗಸ್ಟ್ 1 ರಿಂದ ಆಗಸ್ಟ್ 11 ರವರೆಗೆ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳು ನಡೆಯಲಿವೆ.

ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ 28 ಸದಸ್ಯರ ಭಾರತ ಅಥ್ಲೆಟಿಕ್ಸ್ ತಂಡ

ಪುರುಷರು: ಅವಿನಾಶ್ ಸಾಬಲ್ (3,000 ಮೀ ಸ್ಟೀಪಲ್ ಚೇಸ್), ನೀರಜ್ ಚೋಪ್ರಾ, ಕಿಶೋರ್ ಕುಮಾರ್ ಜೆನಾ (ಜಾವೆಲಿನ್ ಎಸೆತ), ತಜಿಂದರ್ಪಾಲ್ ಸಿಂಗ್ ತೂರ್ (ಶಾಟ್ ಪುಟ್), ಪ್ರವೀಣ್ ಚಿತ್ರವೆಲ್, ಅಬ್ದುಲ್ಲಾ ಅಬುಬಕರ್ (ಟ್ರಿಪಲ್ ಜಂಪ್), ಅಕ್ಷದೀಪ್ ಸಿಂಗ್, ವಿಕಾಸ್ ಸಿಂಗ್, ಪರಮ್ಜೀತ್ ಸಿಂಗ್ ಬಿಶ್ತ್ (20 ಕಿಮೀ ನಡಿಗೆ), ಮೊಹಮ್ಮದ್ ಅನಾಸ್, ಮುಹಮ್ಮದ್ ಅಜ್ಮಲ್, ಅಮೋಜ್ ಜಾಕೋಬ್, ಸಂತೋಷ್ ತಮಿಳರಸನ್, ರಾಜೇಶ್ ರಮೇಶ್ (4x400 ಮೀ ರಿಲೇ), ಮಿಜೋ ಚಾಕೋ ಕುರಿಯನ್ (4x400 ಮೀ ರಿಲೇ), ಸೂರಜ್ ಪನ್ವಾರ್ (ಮಿಶ್ರ ಮ್ಯಾರಥಾನ್ ನಡಿಗೆ), ಸರ್ವೇಶ್ ಅನಿಲ್ ಕುಶಾರೆ (ಹೈ ಜಂಪ್).

ಮಹಿಳೆಯರು: ಕಿರಣ್ ಪಹಲ್ (400 ಮೀ), ಪಾರುಲ್ ಚೌಧರಿ (3,000 ಮೀ ಸ್ಟೀಪಲ್ ಚೇಸ್ ಮತ್ತು 5,000 ಮೀ), ಜ್ಯೋತಿ ಯರಾಜಿ (100 ಮೀ ಹರ್ಡಲ್ಸ್), ಅಣ್ಣು ರಾಣಿ (ಜಾವೆಲಿನ್ ಎಸೆತ), ಅಭಾ ಖತುವಾ (ಶಾಟ್ ಪಟ್), ಜ್ಯೋತಿಕಾ ಶ್ರೀ ದಂಡಿ, ಶುಭಾ ವೆಂಕಟೇಶನ್, ವಿತ್ಯಾ ರಾಮರಾಜ್, ಪೂವಮ್ಮ ಎಂಆರ್ (4x400 ಮೀ ರಿಲೇ), ಪ್ರಾಚಿ (4x400 ಮೀ), ಪ್ರಿಯಾಂಕಾ ಗೋಸ್ವಾಮಿ (20 ಕಿಮೀ ನಡಿಗೆ).

Story first published: Friday, July 5, 2024, 12:15 [IST]
Other articles published on Jul 5, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+