ಭಾರತದ ಖ್ಯಾತ ಅಥ್ಲೀಟ್ ನೀರಜ್ ಚೋಪ್ರಾ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಟ್ರ್ಯಾಕ್ ಆಂಡ್ ಫಿಲ್ಡ್ ಈವೆಂಟ್‌ನಲ್ಲಿ ಭಾರತದ ಪರ ಎರಡು ಪದಕ ಗೆದ್ದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಪ್ಯಾರಿಸ್‌ನಲ್ಲಿ ನೀರಜ್ ಬೆಳ್ಳಿ ಸಾಧನೆ ಮಾಡಿದ್ದಾರೆ. ಈ ಒಲಿಂಪಿಕ್ಸ್‌ನಲ್ಲಿ ಇಂತಹದ್ದೇ ಐತಿಹಾಸಿಕ ಸಾಧನೆ ಮಾಡಿದ ಕ್ರೀಡಾ ಪಟು ಮನು ಭಾಕರ್.
ಭಾರತದ ಭರವಸೆಯ ಶೂಟರ್ ಮನು ಭಾಕರ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಡಬಲ್ ಪದಕ ಸಂಭ್ರಮ ಮಾಡಿದ್ದಾರೆ. ಈ ಮೂಲಕ ಸ್ವಾತಂತ್ರ್ಯ ಭಾರತದ ಪರ ಈ ಸಾಧನೆ ಮಾಡಿದ ಮೊದಲ ಕ್ರೀಡಾ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈಗ ಈ ದಾಖಲೆಯ ಕ್ರೀಡಾಪಟುಗಳ ನಡುವೆ ವಿಶೇಷ ಕನೆಕ್ಷನ್ ಇದೆ ಎಂಬ ಸುದ್ದಿ ಹರಿದಾಡುತ್ತಿದೆ.

ಎರಡು ಪದಕ ವಿಜೇತ ನೀರಜ್ ಚೋಪ್ರಾ ಹಾಗೂ ಮನು ಭಾಕರ್ ಅವರು ಮದುವೆ ಆಗಲಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ತಾಣದಲ್ಲಿ ಸಖತ್ ಟ್ರೆಂಡ್ ಸೃಷ್ಟಿಸಿತ್ತು. ನೀರಜ್ ಚೋಪ್ರಾ ಮತ್ತು ಮನು ಭಾಕರ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಇಬ್ಬರೂ ಪರಸ್ಪರ ಮಾತನಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಫೇರ್ ಮತ್ತು ಮದುವೆಯ ವದಂತಿಗಳು ಹರಿದಾಡಲು ಆರಂಭಿಸಿದವು.
ಅಸಲಿಗೆ ಈ ವಿಡಿಯೋದಲ್ಲಿ ಇಬ್ಬರು ಅಥ್ಲೀಟ್‌ಗಳು ಮಾತನಾಡುತ್ತಿರುವುದು ಕಾಣಿಸುತ್ತದೆ. ಇದರಲ್ಲಿ ನೀರಜ್ ನಾಚಿಕೆಯಿಂದ ಮಾತನಾಡುತ್ತಿದ್ದಂತೆ ಕಂಡು ಬಂದಿದೆ. ಇಬ್ಬರು ಮುಖ ಕೊಟ್ಟು ಮಾತನಾಡಿಲ್ಲ. ಇದಾದ ನಂತರ ಅಭಿಮಾನಿಗಳು ನಾನಾ ರೀತಿಯ ಊಹೆಗಳನ್ನು ಮಾಡತೊಡಗಿದರು.

ಇಷ್ಟೆಲ್ಲಾ ವದಂತಿಗಳು ಹಬ್ಬಲು ಆ ಒಂದು ಕಾರಣವೂ ಇತ್ತು. ಅದೆನಪ್ಪಾ ಅಂದರೆ, ನೀರಜ್ ಚೋಪ್ರಾ ಒಂದು ಸಂದರ್ಭದಲ್ಲಿ ಮದುವೆಯ ಬಗ್ಗೆ ಕೇಳಿದ್ದಾಗ, ಅವರ ತಾಯಿ ಅವರು ಬಯಸಿದ ಹುಡುಗಿಯನ್ನು ಮದುವೆಯಾಗುವುದಾಗಿ ಹೇಳಿದ್ದರು.
ನೀರಜ್ ಚೋಪ್ರಾ, ಮನು ಭಾಕರ್ ಅವರ ಮದುವೆ ಸುದ್ದಿ ಸಖತ್ ವೈರಲ್ ಆಗಲು ಇನ್ನೊಂದು ವಿಡಿಯೋ ಸಹ ಕಾರಣ. ಈ ವಿಡಿಯೋದಲ್ಲಿ ಮನು ಭಾಕರ್ ಅವರ ತಾಯಿ ಸುಮೇಧಾ ಭಾಕರ್ ಅವರ ಜೊತೆ ಮಾತನಾಡುತ್ತಿರುವುದನ್ನು ಕಾಣಬಹುದು. ಈ ವೈರಲ್ ವಿಡಿಯೋದಲ್ಲಿ ಸುಮೇಧಾ, ನೀರಜ್ ಅವರ ತಲೆಯ ಮೇಲೆ ಕೈ ಹಾಕಿ ಮಾತನಾಡುತ್ತಿರುವುದನ್ನು ಕಾಣಬಹುದು.

ಮನು ಭಾಕರ್ ತಾಯಿ ಹಾಗೂ ಜಾವೆಲಿನ್ ನೀರಜ್ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆ ಇಬ್ಬರೂ ಭಾರತೀಯ ಅಥ್ಲೀಟ್‌ಗಳ ಮದುವೆಯ ಸುದ್ದಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನೋಡಿದ ಅಭಿಮಾನಿಗಳು ತಮಗೆ ತೋಚಿದ ಬಣ್ಣವನ್ನು ಹಚ್ಚಲು ಆರಂಭಿಸಿದರು.
ಮನು ಭಾಕರ್ ಹಾಗೂ ನೀರಜ್ ಚೋಪ್ರಾ ಅವರ ಮದುವೆಯ ಬಗ್ಗೆಅವರ ತಂದೆ ಸ್ಪಷ್ಟ ಉತ್ತರವನ್ನು ನೀಡಿದ್ದಾರೆ. ನ್ಯೂಸ್ ನೇಷನ್ ವರದಿಯಂತೆ, ಮನು ಇನ್ನು ಚಿಕ್ಕವಳು. ಅವಳಿಗೆ ಮದುವೆಯ ವಯಸ್ಸು ಆಗಿಲ್ಲ. ಆ ಯೋಚನೆ ಸಹ ಇಲ್ಲ ಎಂದಿದ್ದಾರೆ. ಇನ್ನು ಮನು ತಾಯಿ ಹಾಗೂ ನೀರಜ್ ನಡುವಿನ ಮಾತುಕತೆಯ ಬಗ್ಗೆ ಮಾತನಾಡಿರುವ ಅವರ ತಂದೆ, ಮನು ಅವರ ತಾಯಿ ನೀರಜ್‌ರನ್ನು ಮಗನಂತೆ ನೋಡುತ್ತಾರೆ ಎಂದು ತಿಳಿಸಿದ್ದಾರೆ.