Neeraj Chopra: ಒಸ್ಟ್ರಾವಾ ಗೋಲ್ಡನ್ ಸ್ಪೈಕ್ ಟೂರ್ನಿಯಿಂದ ನೀರಜ್ ಚೋಪ್ರಾ ಔಟ್!
ಮೇ 26 ಭಾನುವಾರ, ಜೆಕ್ ರಿಪಬ್ಲಿಕ್‌ನಲ್ಲಿ ನಡೆಯಲಿರುವ ಆಸ್ಟ್ರಾವಾ ಗೋಲ್ಡನ್ ಸ್ಪೈಕ್ ಟೂರ್ನಿಯಿಂದ ಒಲಿಂಪಿಕ್ ಚಾಂಪಿಯನ್ ಜಾವೆಲಿನ್ ಪಟು ನೀರಜ್ ಚೋಪ್ರಾ ಅವರು ಹೊರ ನಡೆದಿದ್ದಾರೆ.
ನೀರಜ್ ಚೋಪ್ರಾ ಅವರು ಸ್ನಾಯು ನೋವಿನಿಂದಾಗಿ ಬಳಲುತ್ತಿದ್ದಾರೆ. ಹೀಗಾಗಿ ಪ್ರತಿಷ್ಠಿತ ಆಸ್ಟ್ರಾವಾ ಗೋಲ್ಡನ್ ಸ್ಪೈಕ್ ಟೂರ್ನಿ ಮತ್ತು ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಗೋಲ್ಟ್ ಲೇಬಲ್ ಈವೆಂಟ್‌ನಿಂದ ಕೂಡ ಹೊರಗುಳಿಯಲಿದ್ದಾರೆ.

ಎರಡು ವಾರಗಳ ಹಿಂದೆ ತರಬೇತಿಯ ವೇಳೆ ನೀರಜ್ ಸ್ನಾಯು ನೋವಿಗೆ ತುತ್ತಾಗಿದ್ದಾರೆ. ಇದರಿಂದಾಗಿ ಒಸ್ಟ್ರಾವಾದ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.
ಆದರೆ, ಮೇ 28 ಮಂಗಳವಾರ ನಡೆಯಲಿರುವ ವಾರ್ಷಿಕ ಅಥ್ಲೆಟಿಕ್ಸ್ ಸ್ಪರ್ಧೆಯ 63ನೇ ಆವೃತ್ತಿಗೆ ನೀರಜ್ ಚೋಪ್ರಾ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ನೀರಜ್ ಚೋಪ್ರಾ, ನಾನು ಹೆಚ್ಚಾಗಿ ಗಾಯಗೊಂಡಿಲ್ಲ. ಆದರೆ ಪ್ಯಾರಿಸ್ ಒಲಿಂಪಿಕ್ಸ್ ವರ್ಷದಲ್ಲಿ ನಾನು ಯಾವುದೇ ಸಮಸ್ಯೆಯನ್ನು ಎದುರಿಸಲು ಬಯಸುವುದಿಲ್ಲ.
ಆದ್ದರಿಂದ ಟೂರ್ನಿಯಿಂದ ಹೊರ ನಡೆಯುವ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು. ನಾನು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ ಎಂದು ತಿಳಿದರೆ, ಸ್ಪರ್ಧೆಗಳಿಗೆ ಹಿಂತಿರುಗುತ್ತೇನೆ ಎಂದು ಹೇಳಿದ್ದಾರೆ.
ನೀರಜ್ ಚೋಪ್ರಾ ಅವರು ಒಸ್ಟ್ರಾವಾ ಗೋಲ್ಡನ್ ಸ್ಪೈಕ್ ಟೂರ್ನಿಯಿಂದ ಸತತ ಎರಡನೇ ಬಾರಿ ಹೊರಬಂದಿದ್ದಾರೆ. ಕಳೆದ ಋತುವಿನಲ್ಲೂ ಸ್ಪರ್ಧಿಸಿದ್ದ ನೀರಜ್ ಚೋಪ್ರಾ ಸ್ನಾಯುವಿನ ಗಾಯದಿಂದಾಗಿ ಟೂರ್ನಿಯಿಂದ ದೂರ ಉಳಿದಿದ್ದರು.
ದೋಹಾ ಡೈಮಂಡ್ ಲೀಗ್ ಮೂಲಕ ನೀರಜ್ ತಮ್ಮ ವರ್ಷದ ಋತುವನ್ನು ಪ್ರಾರಂಭಿಸಿದ್ದರು. ಈ ಲೀಗ್‌ನಲ್ಲಿ 88.36 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದರು.
ಈ ತಿಂಗಳ ಆರಂಭದಲ್ಲಿ ಮೂರು ವರ್ಷಗಳ ಬಳಿಕ ಭುವನೇಶ್ವರದಲ್ಲಿ ನಡೆದ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಮೀಟ್‌ನಲ್ಲಿ ಭಾಗವಹಿಸಿದ್ದ ನೀರಜ್ 82.27 ಮೀಟರ್ ಎಸೆಯುವ ಮೂಲಕ ಮನು ಡಿಪಿ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications