Diamond League 2024: ಬಂಗಾರದ ಪದಕ ಕೈತಪ್ಪಲು ಅಸಲಿ ಕಾರಣ ಬಿಚ್ಚಿಟ್ಟ ನೀರಜ್ ಚೋಪ್ರಾ
ಈ ವರ್ಷದ ಆರಂಭದಿಂದ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ನಿರೀಕ್ಷಿಸಿದ ಯಶಸ್ಸು ಸಿಗುತ್ತಿಲ್ಲ. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆಲ್ಲುವ ನಿರೀಕ್ಷೆ ಹುಟ್ಟು ಹಾಕಿದ ಅವರು ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಶನಿವಾರ ನಡೆದ ಡೈಮಂಡ್ ಲೀಗ್ ಫೈನಲ್‌ನಲ್ಲೂ ಕೇವಲ 1 ಸೆ.ಮೀ ದೂರದಿಂದ ಚಿನ್ನದ ಪದಕವನ್ನು ಕಳೆದುಕೊಂಡರು.
ಡೈಮಂಡ್ ಲೀಗ್‌ನಲ್ಲಿ ಭಾರತದ ಗೋಲ್ಡನ್ ಬಾಯ್ ಖ್ಯಾತಿ ನೀರಜ್ ಚೋಪ್ರಾ ಬಂಗಾರದ ಪದಕ ಗೆಲ್ಲುವ ಅವಕಾಶವನ್ನು ಹೊಂದಿದ್ದರು. ಆದರೆ, ಅವರು 87.86 ಮೀಟರ್ ದೂರ ಜಾವೆಲಿನ್ ಎಸೆದು ಎರಡನೇ ಸ್ಥಾನ ಪಡೆದರು. ಗ್ರೆನೇಡಿಯನ್ ಜಾವೆಲಿನ್ ಎಸೆತಗಾರ ಆಂಡರ್ಸನ್ ಪೀಟರ್ಸ್ 87.87 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಚಿನ್ನದ ಪದಕವನ್ನು ವಶಪಡಿಸಿಕೊಂಡರು.

ನೀರಜ್ ಚೋಪ್ರಾ ಕೊಟ್ಟ ಕಾರಣವೇನು?
ಅತ್ಯುತ್ತಮ ಪ್ರದರ್ಶನ ಹೊರತಾಗಿಯೂ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಕಳೆದುಕೊಳ್ಳಲು ಒಂದು ಕಾರಣವಿದೆ. ಆ ಕಾರಣ ಏನೆಂದು ಸ್ವತಃ ನೀರಜ್ ಚೋಪ್ರಾ ಬಹಿರಂಗಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು ತಮ್ಮ ಎಡಗೈ ಗಾಯದ ನಡುವೆ ಕೂಡ ಸ್ಪರ್ಧೆಯಲ್ಲಿ ಭಾಗವಹಿಸಿರುವುದಾಗಿ ತಿಳಿಸಿದ್ದಾರೆ.
ತಮ್ಮ ಅಧಿಕೃತ ಎಕ್ಸ್ (ಟ್ವೀಟರ್) ಖಾತೆಯಲ್ಲಿ 'ಸೋಮವಾರ ನಾನು ಅಭ್ಯಾಸ ಮಾಡುವಾಗ ಗಾಯಗೊಂಡಿದ್ದೇನೆ. ಎಕ್ಸ್-ರೇ ಮಾಡಿಸಿದಾಗ ನನ್ನ ಎಡಗೈಯಲ್ಲಿ ನಾಲ್ಕನೇ ಮೆಟಾಕಾರ್ಪಲ್‌ನಲ್ಲಿ ಮುರಿತವಾಗಿದೆ ಎಂದು ತಿಳಿದುಬಂದಿದೆ. ಇದು ನನಗೆ ಮತ್ತೊಂದು ನೋವಿನ ಸವಾಲಾಗಿತ್ತು.
ಆದರೂ ನನ್ನ ತಂಡದ ನೆರವಿನಿಂದ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಯಿತು. ಇದು ವರ್ಷದ ನನ್ನ ಕೊನೆಯ ಸ್ಪರ್ಧೆಯಾಗಿದ್ದು, ಈ ಆವೃತ್ತಿ ಅನ್ನು ಈ ಟ್ರ್ಯಾಕ್ ಮೂಲಕ ಕೊನೆಗೊಳಿಸುತ್ತಿದ್ದೇನೆ. ಈ ವರ್ಷ ಸ್ವತಃ ನಾನು ಇಟ್ಟುಕೊಂಡಿದ್ದ ನಿರೀಕ್ಷೆಗಳನ್ನು ತಲುಪಲು ಸಾಧ್ಯವಾಗಲಿಲ್ಲ.
ಈ ಟೂರ್ನಿಯಲ್ಲಿ ನಾನು ಸಾಕಷ್ಟು ಕಲಿತ್ತಿದ್ದೇನೆ. ಸಂಪೂರ್ಣವಾಗಿ ಫಿಟ್ ಆಗಿ ಪುನಃ ಸ್ಪರ್ಧೆಗೆ ಹಿಂತಿರುಗುತ್ತೇನೆ. ನಿಮ್ಮ ಪ್ರೋತ್ಸಾಹಕ್ಕಾಗಿ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. 2024 ನನ್ನನ್ನು ಉತ್ತಮ ಕ್ರೀಡಾಪಟು ಮತ್ತು ವ್ಯಕ್ತಿಯನ್ನಾಗಿ ಮಾಡಿದೆ. 2025 ರಲ್ಲಿ ನಿಮ್ಮನ್ನು ಭೇಟಿ ಮಾಡುತ್ತೇವೆ ಎಂದು ಚೋಪ್ರಾ ಬರೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications