Neeraj Chopra: ಮ್ಯೂಸಿಯಂ ಸೇರಿದ ನೀರಜ್ ಚೋಪ್ರಾ ಜೆರ್ಸಿ
ಭಾರತದ ಸ್ಟಾರ್ ಒಲಿಂಪಿಯನ್ ನೀರಜ್ ಚೋಪ್ರಾ ದೇಶಕ್ಕೆ ಕೀರ್ತಿ ತರುವಲ್ಲಿ ಪ್ರಮುಖರು. ಇವರು ತಮ್ಮ ಅಬ್ಬರದ ಪ್ರದರ್ಶನದ ಫಲವಾಗಿ ಹಲವು ಟೂರ್ನಿಗಳಲ್ಲಿ ಮಿಂಚಿದ್ದಾರೆ. ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ನೀರಜ್ ಬಂಗಾರದ ಸಾಧನೆ ಮಾಡಿ ಇತಿಹಾಸ ನಿರ್ಮಿಸಿದ್ದರು. ಈ ಮೂಲಕ ಟ್ರ್ಯಾಕ್ ಆಂಡ್ ಫಿಲ್ಡ್ ವಿಭಾಗದಲ್ಲಿ ಸ್ವರ್ಣ ಸಾಧನೆ ಮಾಡಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈಗ ಇವರ ಮುಕುಟಕ್ಕೆ ಮತ್ತೊಂದು ಗರಿ ಸಂದಿದೆ. ಇದೇ ವರ್ಷ ಪ್ಯಾರಿಸ್‌ನಲ್ಲಿ ನಡೆದಿದ್ದ ಕ್ರೀಡಾ ಕೂಟದಲ್ಲಿ ಧರಿಸಿದ್ದ ಜೆರ್ಸಿಯನ್ನು ವಿಶ್ವ ಅಥ್ಲೆಟಿಕ್ಸ್ ಹೆರಿಟೇಜ್ ಕಲೆಕ್ಷನ್‌ನಲ್ಲಿ ಸೇರಿಸಲಾಗಿದೆ.
ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾರತದ ಪರ ಅಮೋಘ ಪ್ರದರ್ಶನ ನೀಡಿದ ಆಟಗಾರರಲ್ಲಿ ನೀರಜ್ ಚೋಪ್ರಾ ಅವರಿಗೆ ಅಗ್ರ ಸ್ಥಾನ. ಇವರು ಎರಡು ಒಲಿಂಪಿಕ್ಸ್ ಪದಕಗಳನ್ನು ಗೆದ್ದ ಭಾರತೀಯ ಆಟಗಾರ. ಅಷ್ಟೇ ಅಲ್ಲದೆ ಟ್ರ್ಯಾಕ್ ಆಂಡ್ ಫೀಲ್ಡ್ ವಿಭಾಗದಲ್ಲಿ ಎರಡು ಪದಕ ಸಾಧನೆ ಮಾಡಿದ ಭಾರತೀಯ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು. ವಿಶ್ವ ಅಥ್ಲೆಟಿಕ್ಸ್ ಹೆರಿಟೇಜ್‌ನ ಆನ್‌ಲೈನ್ 3D ಪ್ಲಾಟ್‌ಫಾರ್ಮ್‌ನಲ್ಲಿ 23 ಆಟಗಾರರ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಇದು 3D ಪ್ಲಾಟ್ ಫಾರ್ಮ್‌ನಲ್ಲಿರದೆ. ಈ ವರ್ಷ ಪ್ಯಾರಿಸ್ ಗೇಮ್ಸ್‌ನಲ್ಲಿ ಧರಿಸಿದ್ದ ಟಿ-ಶರ್ಟ್ ಅನ್ನು ವಿಶ್ವ ಅಥ್ಲೆಟಿಕ್ಸ್ ಹೆರಿಟೇಜ್‌ಗೆ ಕೊಡುಗೆಯಾಗಿ ನೀಡಿದ್ದಾರೆ.

ನೀರಜ್ ಚೋಪ್ರಾ ಅವರಷ್ಟೇ ಅಲ್ಲದೆ ಉಕ್ರೇನ್‌ನ ಯಾರೋಸ್ಲಾವಾ ಮಹುಚಿಖ್, ಥಿಯಾ ಲಫೊಂಡ್ ಅವರ ಸ್ಪರ್ಧಾತ್ಮಕ ಕಲಾಕೃತಿಗಳನ್ನು ಪರಂಪರೆಯ ಸಂಗ್ರಹದಲ್ಲಿ ಸೇರಿಸಲಾಗಿದೆ.
ನೀರಜ್ ಚೋಪ್ರಾ ಅಮೋಘ ಸಾಧನೆ
ಜಾವೆಲಿನ್ ಥ್ರೋದಲ್ಲಿ ಅಮೋಘ ಸಾಧನೆ ಮಾಡಿದ್ದ ನೀರಜ್ ಚೋಪ್ರಾ, ಪ್ಯಾರೀಸ್‌ನಲ್ಲಿ ಎರಡನೇ ಬಂಗಾರದ ಕನಸಿನೊಂದಿಗೆ ಅಂಗಳಕ್ಕೆ ಇಳಿದಿದ್ದರು. ಆದರೆ ಇವರ ಆಸೆಗೆ ಪಾಕ್‌ನ ಅರ್ಷದ್ ನದೀಮ್ ಪೆಟ್ಟು ನೀಡಿದ್ದರು. ಅರ್ಷದ್ ನದೀಮ್ ಅಮೋಘ ಜಾವೆಲಿನ್ ಥ್ರೋ ನಡೆಸಿ 92.97 ಮೀಟರ್ ದೂರ ಎಸೆದರು. ಇನ್ನು ಭಾರತದ ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 89.45 ಮೀ ಎಸೆದು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.

ಎರಡು ಪದಕ ಸಂಭ್ರಮ
ಸ್ವಾತಂತ್ರ್ಯ ಭಾರತದಲ್ಲಿ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ 2 ಪದಕಗಳನ್ನು ಗೆದ್ದ ನಾಲ್ಕನೇ ಭಾರತೀಯ ಆಟಗಾರ ಎಂಬ ಖ್ಯಾತಿಯನ್ನು ಪಡೆದಿದ್ದಾರೆ. ಇವರಿಗೂ ಮೊದಲು ಕುಸ್ತಿ ಪಟು ಸುಶೀಲ್ ಕುಮಾರ್, ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಗೆದ್ದಿದ್ದರು. ಇನ್ನು ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಇದೇ ಸಾಲಿಗೆ ನೀರಜ್ ಸೇರುತ್ತಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications