Neeraj Chopra: ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ ಋತುವಿನ ಅತ್ಯುತ್ತಮ ಸಾಧನೆ: 90 ಮೀಟರ್ ಮಾರ್ಕ್ ಜಸ್ಟ್ ಮಿಸ್
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಸಾಧನೆ ಮಾಡಿರುವ ಭಾರತದ ಜಾವೆಲಿನ್ ಕ್ರೀಡಾಪಟು ನೀರಜ್ ಚೋಪ್ರಾ, ಅಖಾಡಕ್ಕೆ ಇಳಿದಿದ್ದಾರೆ. ಈಗ ಅವರು ಡೈಮಂಡ್ ಲೀಗ್‌ನಲ್ಲಿ ನೀರಜ್ ಕಾಣಿಸಿಕೊಂಡಿದ್ದಾರೆ. ಡೈಮಂಡ್ ಲೀಗ್‌ನ ಅಡಿಯಲ್ಲಿ ಲೆಗ್ ಪಂದ್ಯವು ಗುರುವಾರ ತಡ ರಾತ್ರಿ (ಆಗಸ್ಟ್ 22) ಲೂಸಾನ್ನೆಯಲ್ಲಿ ನಡೆಯಿತು. ಈ ಪಂದ್ಯದಲ್ಲಿ ನೀರಜ್ ಅಮೋಘ ಪ್ರದರ್ಶನ ನೀಡಿದ್ದಾರೆ.
ನೀರಜ್ ಚೋಪ್ರಾ ಈ ಲೀಗ್ ಹಂತದ ಜಾವೆಲಿನ್ ಸ್ಪರ್ಧೆಯಲ್ಲಿ ಈ ಋತುವಿನ ಬೆಸ್ಟ್ ಸಾಧನೆಯನ್ನು ಮಾಡಿದ್ದಾರೆ. ಆದರೆ ನೀರಜ್, 90 ಮೀಟರ್ ಕನಸಿನ ಗೆರೆಯನ್ನು ದಾಟುವಲ್ಲಿ ವಿಫಲರಾಗಿದ್ದಾರೆ. ತಮ್ಮ ಕೊನೆಯ ಪ್ರಯತ್ನದಲ್ಲಿ ನೀರಜ್ 89.49 ಮೀಟರ್ ದೂರ ಜಾವೆಲಿನ್ ಎಸೆದು ಅಮೋಘ ಸಾಧನೆ ಮಾಡಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ.

ಋತುವಿನ ಬೆಸ್ಟ್ ಸಾಧನೆ
ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲಿ 82.10 ಮೀಟರ್ ಜಾವೆಲಿನ್ ಎಸೆದು ಭರವಸೆ ಮೂಡಿಸಿದ್ದರು. ಎರಡನೇ ಹಾಗೂ ಮೂರನೇ ಪ್ರಯತ್ನದಲ್ಲೂ ಇವರು 83 ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಆದರೆ ನಾಲ್ಕನೇ ಪ್ರಯತ್ನದಲ್ಲಿ ಕೊಂಚ ಹಿನ್ನಡೆ ಅನುಭವಿಸಿದರು. ಐದನೇ ಯತ್ನದಲ್ಲಿ 85.58 ಮೀಟರ್ ದೂರ ಜಾವೆಲಿನ್ ಎಸೆದು ಅಬ್ಬರಿಸಿದರು. ಕೊನೆಯ ಯತ್ನದಲ್ಲಿ ನೀರಜ್ 89.49 ಮೀಟರ್ ದೂರ ಎಸೆದು ಲೀಗ್ ಹಂತದಲ್ಲಿ ಎರಡನೇ ಸ್ಥಾನ ಪಡೆದರು.
ಗ್ರೇನಿಡಿಯನ್ ಜಾವೆಲಿನ್ ಪಟು ಅಂಡರ್ಸನ್ ಪೀಟರ್ಸ್ ಈ ಲೀಗ್‌ನಲ್ಲಿ ಅಮೋಘ ಸಾಧನೆ ಮಾಡಿದರು. ಇವರು ಸಹ ಮೊದಲ ನಾಲ್ಕು ಯತ್ನದಲ್ಲಿ 86 ಮೀಟರ್ ದೂರ ಜಾವೆಲಿನ್ ಎಸೆದು ಭರವಸೆ ಮೂಡಿಸಿದ್ದರು. ಆದರೆ ಕೊನೆಯ ಎಸೆತದಲ್ಲಿ 90.61 ಮೀಟರ್ ದೂರ ಜಾವೆಲಿನ್ ಎಸೆದು ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡರು.
4 ಸೆಂಟಿ ಮೀಟರ್ ಹೆಚ್ಚು
ನೀರಜ್ ಚೋಪ್ರಾ ಇದಕ್ಕೂ ಮೊದಲು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮೋಘ ಸಾಧನೆ ಮಾಡಿದ್ದರು. ಇವರು ಈ ಕ್ರೀಡಾ ಕೂಟದಲ್ಲಿ 89.45 ಮೀಟರ್ ದೂರ ಜಾವೆಲಿನ್ ಎಸೆದು ಬೆಳ್ಳಿ, ಪದಕ ಗೆದ್ದಿದ್ದರು. ಆದರೆ ಗುರುವಾರ ತಡ ರಾತ್ರಿ ನಡೆದ ಡೈಮಂಡ್ ಲೀಗ್‌ನಲ್ಲಿ ನೀರಜ್ ಈ ಸಾಧನೆಗಿಂತ 4 ಸೆಂಟಿ ಮೀಟರ್ ದೂರ ಎಸೆದು ಅಬ್ಬರಿಸಿದರು. ಇದು ನೀರಜ್ ಅವರ ಪ್ರಸಕ್ತ ಋತುವಿನ ಬೆಸ್ಟ್ ಸಾಧನೆ ಆಗಿದೆ.
ಪಾಯಿಂಟ್ಸ್ ನಿರ್ಧರಿಸುವುದು ಹೇಗೆ?
ಪುರುಷರ ಜಾವೆಲಿನ್ ವಿಭಾಗದ ಡೈಮಂಡ್ ಲೀಗ್ ನಾಲ್ಕು ಬೇರೆ ಬೇರೆ ಟೂರ್ನಿಗಳನ್ನು ಒಳಗೊಂಡಿದೆ. ಇದರ ಅಡಿಯಲ್ಲಿ ಪ್ಯಾರಿಸ್, ದೋಹಾ, ಲೂಸಾನೆ, ಜ್ಯೂರಿಚ್‌ನಲ್ಲಿ ಪಂದ್ಯಗಳು ನಡೆಯುತ್ತವೆ. ಈ ನಾಲ್ಕು ಟೂರ್ನಿಗಳು ಮುಗಿದ ಬಳಿಕ ಅಂಕ ಪಟ್ಟಿಯ ಆಧಾರದ ಮೇಲೆ ಅಗ್ರ ಆರು ಜನ ಅಥ್ಲೀಟ್‌ಗಳು ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ. ಈ ಆರು ಜನ ಅಥ್ಲೀಟ್‌ಗಳು ಫೈನಲ್‌ನಲ್ಲಿ ಚಾಂಪಿಯನ್ ಪಟ್ಟಕ್ಕೆ ಸೆಣಸಾಡುತ್ತಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications