Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿನೇಶ್‌ ಪೋಗಟ್‌ ಬಗ್ಗೆ ನೀರಜ್‌ ಚೋಪ್ರಾ ಹೇಳಿದ್ದೇನು?; ಅಭಿಮಾನಿಗಳಿಗೆ ವಿಶೇಷ ಮನವಿ

ಭಾರತದ ಸ್ಟಾರ್ ಕುಸ್ತಿ ಪಟು ವಿನೇಶ್ ಪೋಗಟ್‌ ಮಹಿಳೆಯರ 50 ಕೆಜಿ ಫ್ರಿ ಸ್ಟೈಲ್‌ ಫೈನಲ್‌ಗೂ ಮುನ್ನ ತೂಕ ಹೆಚ್ಚಾಗಿದ್ದರಿಂದ ಅನರ್ಹರಾಗಿದ್ದರು. ಇದರಿಂದ ಭಾರತದ ಅಭಿಮಾನಿಗಳು ವಿನೇಶ್‌ ಬೆನ್ನಿಗೆ ನಿಂತಿದ್ದರು. ಆಗ ವಿನೇಶ್‌ ತನ್ನ ಅನರ್ಹ ನಿರ್ಧಾರವನ್ನು ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲು ಏರಿದ್ದರು. ಈ ವಿಚಾರ ನಿಜಕ್ಕೂ ಭಾರತೀಯ ಕ್ರೀಡಾಭಿಮಾನಿಗಳಿಗೆ ಬೇಸರದ ಸಂಗತಿಯಾಗಿತ್ತು.

ಕೇವಲ 100 ಗ್ರಾಮ್‌ ಹೆಚ್ಚಿದ್ದರಿಂದ ಅವರು ಫೈನಲ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಿರಲಿಲ್ಲ. ಈ ವಿಚಾರದ ಬಗ್ಗೆ ಹಲವು ಕ್ರೀಡಾಪಟುಗಳು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ. ಈ ವಿಷಯದ ಬಗ್ಗೆ ಈಗ ಒಲಿಂಪಿಕ್ಸ್‌ನಲ್ಲಿ ಡಬಲ್‌ ಪದಕ ಸಾಧನೆ ಮಾಡಿರುವ ನೀರಜ್ ಚೋಪ್ರಾ ತುಟಿ ಬಿಚ್ಚಿದ್ದಾರೆ.

Neeraj Chopra Urges Support for Vinesh Phogat Asks People Not to Forget Her Contributions

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ದೊಡ್ಡ ಸಾಧನೆಯ ಭರವಸೆಯ ಮೂಡಿಸಿದ್ದ ಕ್ರೀಡಾ ಪಟುಗಳು ನಿರಾಸೆ ಅನುಭವಿಸಿದ್ದಾರೆ. ಈ ಸಾಲಿನಲ್ಲಿ ವಿನೇಶ್‌ ಪೋಗಟ್‌ ನಿಲ್ಲುತ್ತಾರೆ. ವಿನೇಶ್‌ ಅವರ ಬಗ್ಗೆ ಅವರ ಸ್ನೇಹಿತ ನೀರಜ್‌ ಚೋಪ್ರಾ ಮಾತನಾಡಿದ್ದಾರೆ.

ನೀರಜ್‌ ಹೇಳಿದ್ದೇನು?

ವಿನೇಶ್‌ ಪೋಗಟ್‌ ಅನರ್ಹತೆ ಹಾಗೂ ಪದಕ ನೀಡಬೇಕೋ ಬೇಡವೋ ಎನ್ನುವುದರ ಬಗ್ಗೆ ನೀರಜ್‌ ಚೋಪ್ರಾ ಮಾತನಾಡಿದ್ದಾರೆ. ಮೆಡಲ್‌ ಸಿಕ್ಕರೆ ನಮಗೆಲ್ಲಾ ತುಂಬ ಖುಷಿ ಆಗುತ್ತದೆ. ಮೆಡಲ್‌ ಸಿಗದೇ ಇದ್ದ ಪಕ್ಷದಲ್ಲಿ ಹೇಳಿಕೊಳ್ಳಲಾದ ವೇದನೆ ಆಗುತ್ತದೆ. ಪರಿಸ್ಥಿತಿಗಳು ಹಾಗೇ ಇದ್ದವು ಅಲ್ಲವೇ ವಿನೇಶ್‌ ಬರೀ ಅಂಗಳಕ್ಕೆ ಪ್ರವೇಶ ಮಾಡಿದ್ದರೂ ಸಹ ಒಂದು ಮೆಡಲ್‌ ಕನ್ಫರ್ಮ್‌ ಆಗಿತ್ತು. ವಿನೇಶ್‌ ಅವರ ಸಾಧನೆಗೆ ಪದಕ ಲಭಿಸಿದರೆ ಒಳ್ಳೆಯ ಸುದ್ದಿ ಎಂದು ಜಾವೆಲಿನ್‌ ವಿಭಾಗದಲ್ಲಿ ಬೆಳ್ಳಿ ಸಾಧನೆ ಮಾಡಿರುವ ನೀರಜ್ ಚೋಪ್ರಾ ತಿಳಿಸಿದರು.

Neeraj Chopra Urges Support for Vinesh Phogat Asks People Not to Forget Her Contributions

ಪೋಡಿಯಂನಲ್ಲಿ ನಿಂತು ಪದಕ ಹಾಕಿಸಿಕೊಂಡರೆ ಜನರು ಗುರುತಿಸುತ್ತಾರೆ. ಒಂದು ವೇಳೆ ಪದಕ ಸಿಗದೇ ಇದ್ದಲ್ಲಿ, ಜನರು ಅವರ ಸಾಧನೆಯನ್ನು ಬೇಗ ನನೆಪು ಹಾರುತ್ತಾರೆ ಎಂಬ ಭಯ ನನ್ನನ್ನು ಬಹುವಾಗಿ ಕಾಡುತ್ತಿದೆ. ದೇಶದ ಜನರು ವಿನೇಶ್ ಸಾಧನೆಯನ್ನು ಮರೆಯಬಾರದು ಎಂಬುದೇ ನನ್ನ ಕಳಕಳಿಯ ಮನವಿ ಎಂದಿದ್ದಾರೆ. ನೀರಜ್ ಚೋಪ್ರಾ ಹೇಳಿಕೆಯಿಂದ ವಿನೇಶ್ ಗೆ ಬೆಳ್ಳಿ ಪದಕ ಸಿಗಲಿ ಎಂದು ಅವರು ಪ್ರಾರ್ಥಿಸುವಂತಿದೆ.

ಮೇಲ್ಮನವಿ ಸಲ್ಲಿಸಿರುವ ವಿನೇಶ್

ವಿನೇಶ್‌ ಪೋಗಟ್‌ ಅವರು ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ವೇಳೆ ವಿನೇಶ್ ಬೆಳ್ಳಿ ಪದಕವನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ. ಇವರ ಅರ್ಜಿಯ ವಿಚಾರಣೆ ನಡೆಯುತ್ತಿದ್ದು, ಇದರ ತೀರ್ಪು ಆಗಸ್ಟ್‌ 11 ರಂದು ಹೊರ ಬೀಳುವ ಸಾಧ್ಯತೆ ಇದೆ.

Neeraj Chopra Urges Support for Vinesh Phogat Asks People Not to Forget Her Contributions

ನೀರಜ್‌ಗೆ ಬೆಳ್ಳಿ

ಪ್ಯಾರಿಸ್ ಒಲಿಂಪಿಕ್ಸ್‌ 2024ರ ಕ್ರೀಡಾ ಕೂಟದಲ್ಲಿ ಭಾರತದ ನೀರಜ್‌ ಚೋಪ್ರಾ ಅವರು ಅಮೋಘ ಸಾಧನೆ ಮಾಡಿದ್ದಾರೆ. ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದ ನೀರಜ್‌ ಮೇಲೆ ಭರವಸೆಯ ಭಾರ ಇತ್ತು. ಆದರೆ ಈ ಬಾರಿ ನೀರಜ್‌ ಚೋಪ್ರಾ ಬೆಳ್ಳಿ ಸಾಧನೆ ಮಾಡಿದ್ದಾರೆ.

ಜಾವೆಲಿನ್ ಥ್ರೋ ವಿಭಾಗದಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್‌ ದೂರ ಎಸೆದು ಒಲಿಂಪಕ್ಸ್‌ ಸಾಧನೆ ಮಾಡಿ, ಚಿನ್ನದ ಪದಕಕ್ಕೆ ಕೊರಳು ಒಡ್ಡಿದರು. ನೀರಜ್ ಸ್ವಲ್ಪದರಲ್ಲೇ ಚಿನ್ನದ ಪದಕ ಗೆಲ್ಲುವುದನ್ನು ತಪ್ಪಿಸಿಕೊಂಡರು.

Story first published: Saturday, August 10, 2024, 22:53 [IST]
Other articles published on Aug 10, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+